ಬೈಕ್ ಸೀಟ್ ಒಳಗಡೆ ಸೇರಿಕೊಂಡ ಹಾರುವ ಹಾವಿನ ರಕ್ಷಣೆ| ದರ್ಬೆಯಲ್ಲಿ ನಡೆದ ಘಟನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೈಕ್ ಸೀಟಿನೊಳಗೆ ಅಲಂಕಾರಿಕ ತೇಲುವ / ಹಾರುವ ಹಾವೊಂದು ಸೇರಿಕೊಂಡ ಮತ್ತು ಅದನ್ನು ಉರಗ ಪ್ರೇಮಿ ಬನ್ನೂರಿನ ತೇಜಸ್ ಅವರು ರಕ್ಷಣೆ ಮಾಡಿದ ಘಟನೆ ಆ.೧೭ ರಂದು ದರ್ಬೆಯಲ್ಲಿ ನಡೆದಿದೆ. ದರ್ಬೆಯಲ್ಲಿರುವ ದ್ವಿಚಕ್ರ ವಾಹನ ದುರಸ್ಥಿ ಸಂಸ್ಥೆಗೆ ಬೈಕ್ ನಲ್ಲಿ‌ ಬಂದ ವ್ಯಕ್ತಿಯೊಬ್ಬರು ತನ್ನ ಬೈಕ್ ದುರಸ್ಥಿಗೊಳಿಸುವಂತೆ ಮ್ಯಾಕಾನಿಕ್ ಗೆ ತಿಳಿದಂತೆ‌ ಮ್ಯಾಕಾನಿಕ್ ಬೈಕ್ ನ ಸೀಟ್ ಕಳಚುತ್ತಿದ್ದಂತೆ ಬಣ್ಣ ಬಣ್ಣದ ಹಾವೊಂದು ಬೈಕ್ ಸೀಟ್ ಅಡಿಯಲ್ಲಿ ಸುತ್ತುವರಿದು‌ಕೊಂಡಿರುವುದು ಬೆಳಕಿಗೆ ಬಂತು. ಬಳಿಕ ಉರಗ ತಜ್ಞ ತೇಜಸ್ ಗೆ‌ ಈ ಕುರಿತು ಮಾಹಿತಿ ನೀಡಲಾಯಿತು. ತೇಜಸ್ ಅವರು ಬಂದು ಬೈಕ್ ಸೀಟ್ ನ ಒಳಗೆ ಸುತ್ತುವರಿದ್ದ ಹಾವನ್ನು ರಕ್ಷಣೆ ಮಾಡಿದರು. ಈ ಹಾವು ಅಲಂಕಾರಿಕ ತೇಲುವ ಅಥವಾ ಹಾರುವ ಹಾವಾಗಿದೆ. ಇದು ವಿಷ ರಹಿತ‌ಹಾವು ಎಂದು ಅಲ್ಲಿ‌ ಸೇರಿದ್ದ ಜನರಿಗೆ ಮಾಹಿತಿ‌ ನೀಡಿದರಲ್ಲದೆ ಹಾವನ್ನು ಕಾಡಿಗೆ ಬಿಡುವ ಮೂಲಕ ಹಾವಿನ ರಕ್ಷಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.