ನಿವೃತ್ತ ಜೆಟಿಒ ಕೆ.ಎಂ.ನಿರ್ಮಲ ಅವರಿಗೆ ಶೃದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಕಡಬ: ಬಿಎಸ್‍ಎನ್‍ಎಲ್ ಪುತ್ತೂರು ವಿಭಾಗದಲ್ಲಿ ಜೆಟಿಒ ಆಗಿ ನಿವೃತ್ತರಾಗಿದ್ದ ನಿರ್ಮಲ ಕೆ.ಎಂ. ಅವರು ಆಗಸ್ಟ್ 4ರಂದು ನಿಧನರಾಗಿದ್ದು, ಅವರ ಉತ್ತರಕ್ರಿಯಾ ಕಾರ್ಯಕ್ರಮ ಆ.15ರಂದು ಕುದ್ಮಾರು ಪಟ್ಟೆತ್ತಾನ ಮನೆಯಲ್ಲಿ ನಡೆಯಿತು. ಇದೇ ಸಂದರ್ಭ ಶೃದ್ಧಾಂಜಲಿ ಸಭೆ ನಡೆಯಿತು. ಮೃತರ ಸಹೋದರ, ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ದೇವದಾಸ್ ಅವರು ಮಾತನಾಡಿ, “1955 ರಲ್ಲಿ ಜನಿಸಿದ ನಿರ್ಮಲಾ ಅವರು ಬಿಎಸ್ಸಿ, ಬಿ ಎಡ್ ಪದವೀಧರರು. ಮೊದಲು ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬಳಿಕ ಬಿಎಸ್‍ಎನ್‍ಎಲ್‍ನಲ್ಲಿ ಜೆಟಿಒ ಆಗಿ ಕಾರ್ಕಳದಲ್ಲಿ ಸೇವೆ ಆರಂಭಿದರು. ನಂತರ ಪುತ್ತೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದರು” ಎಂಬುದಾಗಿ ನೆನಪಿಸಿಕೊಂಡರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಟುಂಬದವರು, ಬಂಧುಗಳು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಮೃತರ ಪತಿ ನಿವೃತ್ತ ಜೆಟಿಒ ಬಿಎಸ್‍ಎನ್‍ಎಲ್ ಶೂರಪ್ಪ ಗೌಡ ಬೊಳ್ಳೂರು, ಮಕ್ಕಳಾದ ನಿರಂಜನ್, ದೇವಿಪ್ರಸಾದ್, ಡಾ.ಕುಸುಮ, ಅಳಿಯ ಸುಗುಣಾಕರ, ಸೊಸೆ ಶ್ರೀದೇವಿ ಅಂಬೆಕಲ್ಲು, ಕುಟುಂಬದ ಹಿರಿಯರು, ಸಹೋದರ- ಸಹೋದರಿಯರು ಸೇರಿದಂತೆ ಅನೇಕ ಬಂಧುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.