Breaking News

ತಿಂಗಳಾಡಿ: ತಂದೆ ಮಗನ ಕಲಹ – ಗಂಭೀರ ಗಾಯಗೊಂಡ ತಂದೆ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಂದೆ ಮಗನ ಮಧ್ಯೆ ಜಗಳ ನಡೆದು ತಾರಕಕ್ಕೇರಿ ಹೊಡೆದಾಟವಾಗಿ ಗಂಭೀರ ಗಾಯಗೊಂಡಿದ್ದ ತಂದೆ ಮೃತಪಟ್ಟ ಘಟನೆ ಕೆದಂಬಾಡಿ ಗ್ರಾಮದ ಬಾಲಾಯ ಎಂಬಲ್ಲಿಂದ ವರದಿಯಾಗಿದೆ. ಗಾಯಗೊಂಡಿರುವ ಮಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕೆದಂಬಾಡಿ ಗ್ರಾಮದ ಬಾಲಾಯ ನಿವಾಸಿ ಗಂಗಾಧರ ನಾಯ್ಕ(೬೦ವ.)ಮೃತಪಟ್ಟವರು.ಅವರ ಮಗ ಶಶಿಧರ್ (೩೧ವ.)ಅವರಿಗೂ ಗಾಯವಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಆ.೧೭ರಂದು ರಾತ್ರಿ ಈ ಘಟನೆ ನಡೆದಿದೆ.

ಸೌಮ್ಯ ಸ್ವಭಾವದವರಾಗಿದ್ದ ಗಂಗಾಧರ ನಾಯ್ಕರವರು ಕೃಷಿಕರಾಗಿದ್ದು ತಾನಾಯಿತು ತನ್ನ ಕೆಲಸವಾಯಿತು ಎಂದು ತನ್ನ ಪಾಡಿಗೆ ತಾನಿದ್ದರು.ಪತ್ನಿ ಸುಶೀಲ, ಮಗ ಶಶಿಧರ್, ಸೊಸೆ ಅರುಣಾ ಹಾಗೂ ಇಬ್ಬರು ಮೊಮ್ಮಕ್ಕಳು ಮನೆಯಲ್ಲಿದ್ದರು. ಇನ್ನೋರ್ವ ಮಗ ಮೋಹನ್ ಪತ್ನಿ, ಮಕ್ಕಳೊಂದಿಗೆ ಹೆಚ್ಚಾಗಿ ಪತ್ನಿ ಮನೆಯಲ್ಲಿಯೇ ಇರುತ್ತಿದ್ದರು.

ತಂದೆ-ಮಗನಿಗೆ ಜಗಳ: ಪುತ್ತೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ಮಗ ಶಶಿಧರ್ ಆತನ ಹಾಗೂ ತಂದೆ ಗಂಗಾಧರ್ ನಾಯ್ಕರ ಮಧ್ಯೆ ರಾತ್ರಿ ವೇಳೆ ಜಗಳ ನಡೆದಿತ್ತು. ಶಶಿಧರ್ ಪತ್ನಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಗಂಗಾಧರರವರು ಅದಕ್ಕೆ ಆಕ್ಷೇಪಿಸಿದ್ದರು.ಈ ವಿಚಾರದಲ್ಲಿ ತಂದೆ-ಮಗನ ಮಧ್ಯೆ ಜಗಳ ನಡೆದು ಹೊಡೆದಾಟವಾಗಿತ್ತು. ಈ ವೇಳೆ ಗಂಗಾಧರ್ ಅವರ ತಲೆಗೆ ಬಲವಾದ ಏಟು ಬಿದ್ದು ಗಂಭೀರ ಗಾಯಗೊಂಡರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮಗ ಶಶಿಧರ್ ಅವರಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಗಂಗಾಧರ ನಾಯ್ಕ ಅವರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.ಸಂಪ್ಯ ಠಾಣಾ ಎಸ್.ಐ.ಉದಯರವಿ ಹಾಗೂ ಸಿಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.