Breaking News

ತಾಲೂಕಿನಲ್ಲಿ ಎಸ್ಸಿ,ಎಸ್ಟಿಯವರಿಗೆ ಮಂಜೂರಾದ ವರ್ಗ ಜಮೀನು ಅತಿಕ್ರಮಣ | ತೆರವು ಮಾಡುವಂತೆ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಆಗ್ರಹ

Puttur_Advt_NewsUnder_1
Puttur_Advt_NewsUnder_1
  • ಇಲ್ಲವಾದಲ್ಲಿ ನಮ್ಮಿಂದಲೆ ತೆರವು ಕಾರ್ಯಾಚರಣೆ ಎಚ್ಚರಿಕೆ

ಪುತ್ತೂರು: ತಾಲೂಕಿನ ವ್ಯಾಪ್ತಿಯಲ್ಲಿ ಕೆಲವೊಂದು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮಂಜೂರಾಗಿರುವ ವರ್ಗ ಜಮೀನುಗಳು ಅತಿಕ್ರಮಣಗೊಂಡಿದೆ. ಅತಿಕ್ರಮನಗೊಳಿಸಿದವರನ್ನು ಜಮೀನಿನಿಂದ ತೆರವು ಮಾಡುವಂತೆ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಪತ್ರಿಕಾಗೋಷ್ಠಿ ಮೂಲಕ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕೆಯ್ಯೂರು ಗ್ರಾಮದ ವಿಕಲಚೇತನರಾದ ತಿಮ್ಮಪ್ಪ ನಾಯ್ಕರವರ ಜಮೀನಿನಲ್ಲಿ ಅಕ್ರಮ ಕಟ್ಟಡ, ನರಿಮೊಗ್ರು ಗ್ರಾಮದ ಹುಕ್ರ ಬಿನ್ ಪತ್ರ, ಬಜತ್ತೂರು ಗ್ರಾಮದ ಚೀಂಕ್ರ ಮುಗೇರ ಅವರ ಜಾಗದಲ್ಲಿ ಅಕ್ರಮ ಮನೆಗಳು, ಒಳಮೊಗ್ರು ಗ್ರಾಮದ ಹುಕ್ರ ಮುಗೇರ ಬಿನ್ ಮಾದಿಗ ಅವರ ಜಾಗದಲ್ಲಿ ಅಕ್ರಮವಾಗಿ ಮನೆ ಮತ್ತು ಕೃಷಿ ಕೃತಾವಳಿಗಳು ನಡೆದಿದೆ. ಅಕ್ರಮ ಕಟ್ಟಡ ಮತ್ತು ಅಕ್ರಮವಾಗಿಮಾಡಿರುವ ಕೃಷಿ ಕೃತಾವಳಿಯನ್ನು ತೆರವುಗೊಳಿ ವರ್ಗದಾರರ ಅಧೀನಕ್ಕೆ ನೀಡುವಂತೆ ಈ ಹಿಂದೆ ಮನವಿ ಸಲ್ಲಿಸಲಾಗಿದೆ. ಆದರೆ ಕಂದಾಯ ಅಧಿಕಾರಿಗಳು ಇದು ಪಿಟಿಷನ್ ಕಾಯ್ದೆಗೆ ಒಳಪಟ್ಟಿದೆ. ನಮಗೆ ತೆರವು ಮಾಡಲು ಅಸಾಧ್ಯ, ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸುತ್ತಿದ್ದಾರೆ. ಆದರೆ ಒಮ್ಮೆ ಒಬ್ಬರಿಗೆ ಮಂಜೂರಾಗಿರುವ ಜಾಗದಲ್ಲಿ ಅಕ್ರಮ ಸಕ್ರಮ ಅಥವಾ ಬೇರೆ ಕಾಯ್ದೆ ಮೂಲಕ ಹಲವು ಕಡೆ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ನಮಗೆ ಮಂಜೂರಾದ ಜಮೀನಿನಲ್ಲಿ ಬೇರೆಯವರಿಗೆ ಪುನಃ ಅರ್ಜಿಗಳು ಮಂಜೂರಾಗುತ್ತದೆ ಎಂದಾದರೆ ಕಂದಾಯ ಅಧಿಕಾರಿಗಳು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಸೇಸಪ್ಪ ಬೆದ್ರಕಾಡು ಅವರು ಇಲ್ಲಿನ ವಿ.ಎ.ಗಳು, ಆರ್.ಐಗಳಿಂದ ಭ್ರಷ್ಟಾಚಾರಕ್ಕೆ ಕೈ ಒಡ್ಟುವ ಕೆಲಸ ಆಗುತ್ತಿದೆ. ಒಟ್ಟು ಅತಿಕ್ರಮಣ ಕುರಿತು ನಮ್ಮಲ್ಲಿ ಸಂಬಂಧಪಟ್ಟ ಸೂಕ್ತ ದಾಖಲೆಗಳಿವೆ. ತಕ್ಷಣ ನಮಗೆ ಅತಿಕ್ರಮಣಗೊಳಿಸಿದ ಜಾಗವನ್ನು ತೆರವು ಮಾಡದಿದ್ದರೆ ಮುಂದಿನ ನಮ್ಮ ಸಂಘಟನೆಯ ಮೂಲಕ ನಾವೇ ಅತಿಕ್ರಮಣ ಜಮೀನಿನಲ್ಲಿ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು, ಸಂತ್ರಸ್ತೆ ಕಮಲ ಪಳ್ಳತ್ತಾರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.