ಎಸ್.ಎಸ್.ಎಲ್.ಸಿ. ಫಲಿತಾಂಶ: ಉಪ್ಪಿನಂಗಡಿ ಪ.ಪೂ. ಕಾಲೇಜು 64 ಶೇಕಡಾ, 8 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಸರ್ಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿ ಇದರ ಪ್ರೌಢ ಶಾಲಾ ವಿಭಾಗದಿಂದ ಪರೀಕ್ಷೆ ಹಾಜರಾದ ೧೭೫ ವಿದ್ಯಾರ್ಥಿಗಳಲ್ಲಿ ೧೧೨ ಉತ್ತೀರ್ಣರಾಗಿ ೬೪ ಶೇಕಡಾ ಫಲಿತಾಂಶ ಬಂದಿರುವುದಾಗಿ ಕಾಲೇಜಿನ ಉಪ ಪ್ರಾಚಾರ್ಯ ದಿವಾಕರ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೇರ್ಗಡೆ ಹೊಂದಿರುವ ೧೧೨ ವಿದ್ಯಾರ್ಥಿಗಳ ಪೈಕಿ ೮ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದಂತೆ ೬೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೩೧ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಉತ್ತೀರ್ಣರಾಗಿರುತ್ತಾರೆ.

ಇಳಂತಿಲ ಗ್ರಾಮದ ಆನಂದ ಕುಂಬಾರ ಮತ್ತು ಸವಿತಾ ಇವರ ಪುತ್ರಿ ಅಮೃತಾ ೫೯೪ ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಉಪ್ಪಿನಂಗಡಿ ಕೂಟೇಲಿನ ಉಮರುಲ್ ಫಾರೂಕ್ ಮತ್ತು ನೆಬಿಸಾ ಇವರ ಪುತ್ರಿ ಅಯಿಷತ್ತುಲ್ ಮುಬಸ್ಸಿರಾ ೫೭೫ ಅಂಕ ಪಡೆದು ದ್ವಿತೀಯ ಸ್ಥಾನ, ಕಣಿಯೂರು ಗ್ರಾಮದ ಕೃಷ್ಣ ಕುಮಾರ್ ರಾವ್ ಮತ್ತು ಭಾರತಿ ರಾವ್ ಪುತ್ರಿ ಯಶಸ್ವಿ ರಾವ್ ೫೬೭ ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾಳೆ. ಮಹಮ್ಮದ್ ಇಹ್‌ಸಾನ್-೫೬೨. ಮೇಘ-೫೪೫, ಪ್ರಮೋಕ್ಷ-೫೪೩, ಪೂರ್ವಿಕ-೫೩೫, ಸೌಜನ್ಯ  ಪಿ.ಸಿ.-೫೩೨ ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅದಾಗ್ಯೂ ತುಳುವನ್ನು ತೃತೀಯ ಭಾಷೆಯಾಗಿ ಆಯ್ದುಕೊಂಡ ೫೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ೦೮ ಮಕ್ಕಳು ೧೦೦ ಅಂಕಗಳನ್ನು ಪಡೆದಿರುತ್ತಾರೆ ಎಂದು ದಿವಾಕರ ಆಚಾರ್ಯ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.