ರಾಮಕುಂಜ, ಕೊಯಿಲ ಗ್ರಾಮದ ರೈತರಿಗೆ ಬೆಳೆ ಸಮೀಕ್ಷೆ | ಮೂಬೈಲ್ ಆಪ್ ಮಾಹಿತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ರಾಜ್ಯದಲ್ಲಿನ ಎಲ್ಲಾ ರೈತರು ಸರ್ವೆ ನಂಬರ್/ ಹಿಸ್ಸಾ ವಾರು ಮತ್ತು ವಿಸ್ತೀರ್ಣ ವಾರು ತಮ್ಮ ಜಾಗದಲ್ಲಿ ಬೆಳೆದ ಎಲ್ಲಾ ವಿಧದ ಬೆಳೆಗಳನ್ನು ಮೂಬೈಲ್ ತಂತ್ರಾಂಶದ ಮೂಲಕ ಜಿ.ಪಿ.ಎಸ್ ಛಾಯಚಿತ್ರದ ಸಹಿತ ಮಾಹಿತಿಯನ್ನು ದಾಖಲಿಸುವ ಪ್ರಕ್ರಿಯೆಯ ಮಾಹಿತಿ ಕಾರ್ಯ ಗಾರವನ್ನು ರಾಮಕುಂಜ ಹಾಗು ಕೊಯಿಲ ಗ್ರಾಮದ ರೈತರಿಗೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೂಯಿಲ ಶಾಖೆಯಲ್ಲಿ ಏರ್ಪಡಿಸಲಾಗಿತ್ತು.

ಮಾಹಿತಿಯನ್ನು ಕಡಬ ತಾಲೂಕ್ಕಿನ ಮಾಸ್ಟರ್ ಟ್ರೈನರ್ ರಮೇಶ್ ರವರು ಮಾಹಿತಿಯನ್ನು ನೀಡಿ ಸೇರಿದ ರೈತ ವರ್ಗದವರ ಮೂಬೈಲ್ ಗೆ ಬೆಳೆ ಸಮೀಕ್ಷೆಯ ಆಪ್ ನ್ನು ಆಪ್ ಲೋಡ್ ಮಾಡಿಸಿ ಮಾಹಿತಿಯನ್ನು ನೀಡಿದರು. ಮಾಹಿತಿ ಕಾರ್ಯಗಾರದ ಅದ್ಯಕ್ಷತೆಯನ್ನು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅದ್ಯಕ್ಷ ದರ್ಮಪಾಲ ರಾವ್ ಕಜೆ ವಹಿಸಿದ್ದರು , ಸಂಘದ ಉಪಾದ್ಯಕ್ಷ ಪ್ರದೀಪ್ ರೈ ಮನವಳಿಕೆ, ತಾ.ಪಂ ಸದಸ್ಯರಾದ ಜಯಂತಿ ಆರ್ ಗೌಡ, ರಾಮಕುಂಜ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಸೇರಿದಂತೆ ರಾಮಕುಂಜ,ಕೊಯಿಲ ಗ್ರಾಮದ ರೈತರು ಉಪಸ್ಥಿತರಿದ್ದರು.ಗ್ರಾಮಕರಣಿಕರಾದ ಶೇಷಾದ್ರಿ, ಗ್ರಾಮಸಹಾಯಕರಾದ ಜಯಂತ ,ಲಿಂಗಪ್ಪ ಮಾಹಿತಿ ಕಾರ್ಯಗಾರದಲ್ಲಿ ಸಹಕರಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.