Breaking News

ಬಿಜೆಪಿ ಯುವ ಮೋರ್ಚಾದಿಂದ 1008 ಮಂದಿಗೆ ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆಯುಷ್ಮಾನ್ -ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿಯಲ್ಲಿ ಬಿಜೆಪಿ ನಗರ ಮಂಡಲದ ಯುವಮೋರ್ಚಾ ವತಿಯಿಂದ ಇಲ್ಲಿನ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ 2 ದಿನಗಳು ನಡೆದ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ 1008 ಮಂದಿಗೆ ವಿತರಣೆ ಮಾಡಲಾಗಿದೆ ಎಂದು ಬಿಜೆಪಿ ನಗರ ಯುವ ಮೋರ್ಚಾದ ಪ್ರಕಟಣೆ ತಿಳಿಸಿದೆ.
ಆ.17 ಮತ್ತು 18ರಂದು ಎರಡು ದಿನ ಬೆಳಿಗ್ಗಿನಿಂದ ಸಂಜೆಯ ತನಕ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯ ನಡೆಯಿತು. ಆ.18ರಂದು ಸಂಜೆ ಸಮಾರೋಪ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಒಟ್ಟು 1008 ಮಂದಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಮೇದಿನಿ ಜನಸೇವಾ ಕೇಂದ್ರ, ಪೂಜಾ ಜನಸೇವಾ ಕೇಂದ್ರ, ಶ್ರೀಪದ್ಮ ಜನಸೇವಾ ಕೇಂದ್ರ ಕಬಕ, ಅಶೋಕ್ ಎಂಟರ್‌ಪ್ರೈಸಸ್ ಪಡೀಲ್, ನಾಡುವೆಲ್ ಡಿಜಿಟಲ್ ಸೇವಾ ಕೇಂದ್ರ ಕಲ್ಲಾರೆ, ಅನುಗ್ರಹ ಕಮ್ಯುನಿಕೇಶನ್ ವಿಟ್ಲದವರು ಅಯುಷ್ಮಾನ್ ಕಾರ್ಡ್ ಮಾಡಿಸಿಕೊಡುವಲ್ಲಿ ಸಹಕಾರ ನೀಡಿದ್ದು ಅವರನ್ನು ಸಂಘಟಕರು ಗೌರವಿಸಿದರು. ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಪ್ರಧಾನ ಕಾರ್ಯದರ್ಶಿ ತೇಜಸ್, ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳಾದ ಕೌಶಿಕ್, ಕಿರಣ್‌ಶಂಕರ್ ಮಲ್ಯ, ಶವೀನ್, ಜಗದೀಶ್, ಜಗದೀಶ್, ಯಜ್ಞೇಶ್ ಸಿ.ಎಸ್.ಇ ಜಿಲ್ಲಾ ವ್ಯವಸ್ಥಾಪಕ ಸವಿನ್ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.