ಚಾರ್ವಾಕ ಕೆಳಗಿನಕೇರಿಯಲ್ಲಿ ಮನೆಯಂಗಳದ ಧರೆ ಕುಸಿತ

ಕಾಣಿಯೂರು: ಭಾರಿ ಮಳೆಯಿಂದಾಗಿ ಮನೆಯಂಗಳದ ಧರೆ ಕುಸಿತಗೊಂಡ ಘಟನೆ ಚಾರ್ವಾಕ ಗ್ರಾಮದ ಕೆಳಗಿನಕೇರಿಯಲ್ಲಿ ಆ.16ರಂದು ನಡೆದಿದೆ. ವಾರದ ಹಿಂದೆ ನಿರಂತರ ಸುರಿದ ಮಳೆಯಿಂದಾಗಿ ಚಂದಪ್ಪ ಗೌಡರ ಮನೆಯಂಗಳದ ಧರೆಯು ಕುಸಿತಗೊಂಡಿತ್ತು. ಇದೀಗ ಸೋಮವಾರ ಸುರಿದ ಮಳೆಗೆ ಮತ್ತಷ್ಟು ಧರೆ ಕುಸಿತಗೊಂಡು ನಷ್ಟ ಸಂಭವಿದೆ. ಘಟನಾ ಸ್ಥಳಕ್ಕೆ ಘಟನಾ ಸ್ಥಳಕ್ಕೆ ಬೆಳಂದೂರು ಬಿಜೆಪಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಬೆಳಂದೂರು, ಚಾರ್ವಾಕ ಗ್ರಾಮಕರಣಿಕರಾದ ಪುಷ್ಪರಾಜ್, ಕಾಣಿಯೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.