ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣ ರಾಮಕುಂಜೇಶ್ವರ ಕನ್ನಡ ಮಾ.ಪ್ರೌಢಶಾಲೆ, ಪ.ಪೂ.ಕಾಲೇಜು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಆರಂಭಗೊಂಡಿರುವ ರಾಮಕುಂಜ ವಿದ್ಯಾಸಂಸ್ಥೆಯು ಈಗ ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀಡಲಾಗುತ್ತಿದ್ದು ಪ್ರತಿವರ್ಷವೂ ಉತ್ತಮ ಫಲಿತಾಂಶ ಲಭಿಸುತ್ತಿದೆ. ಮೌಲ್ಯಾಧಾರಿತ ಶಿಕ್ಷಣದ ಮೂಲಕ ಇಲ್ಲಿನ ವಿದ್ಯಾಸಂಸ್ಥೆಗಳು ಜಿಲ್ಲೆ, ರಾಜ್ಯದಲ್ಲಿಯೇ ಗುರುತಿಸಿಕೊಂಡಿದೆ.


೧೯೧೯ರಲ್ಲಿ ರಾಮಕುಂಜೇಶ್ವರ ದೇವಾಲಯದ ಆವರಣದಲ್ಲಿ ಆರಂಭಗೊಂಡ ಇಲ್ಲಿನ ವಿದ್ಯಾಸಂಸ್ಥೆ ಈಗ ಸಾಕಷ್ಟು ಬೆಳವಣಿಗೆ ಹೊಂದಿದೆ. ಪ್ರಸ್ತುತ ಎಲ್‌ಕೆಜಿಯಿಂದ ಆರಂಭಗೊಂಡು ಪದವಿ ತನಕವು ಇಲ್ಲಿ ಶಿಕ್ಷಣ ಸಿಗುತ್ತಿದೆ. ೧ನೇ ತರಗತಿಯಿಂದ ೧೦ನೇ ತರಗತಿ ತನಕ ಕನ್ನಡ ಹಾಗೂ ಆಂಗ್ಲಮಾಧ್ಯಮದಲ್ಲೂ ಶಿಕ್ಷಣ ಸಿಗುತ್ತಿದೆ. ಅದೆಷ್ಟೋ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿರುವ ಇಲ್ಲಿನ ಶಿಕ್ಷಣ ಸಂಸ್ಥೆಯಿಂದಾಗಿ ರಾಮಕುಂಜ ಈಗ ವಿದ್ಯಾಕುಂಜವಾಗಿ ಬೆಳೆದಿದೆ. ಶತಮಾನಗಳ ಹಿಂದೆ ಸರಿಯಾದ ಸಂಪರ್ಕ ಇಲ್ಲದ ತೀರಾ ಹಳ್ಳಿ ಪ್ರದೇಶವಾಗಿದ್ದ ರಾಮಕುಂಜವೂ ಈಗ ಸಾಕಷ್ಟು ಬೆಳೆದಿದೆ. ಇಲ್ಲಿನ ವಿದ್ಯಾಸಂಸ್ಥೆಗಳಿಂದಾಗಿ ಊರಿನ ಹೆಸರು ಹತ್ತೂರಿಗೂ ಪಸರಿಸಿದೆ. ಇಲ್ಲಿನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೋರಿದ ಉನ್ನತ ಮಟ್ಟದ ಸಾಧನೆಯಿಂದಾಗಿ ವಿದ್ಯಾಸಂಸ್ಥೆಯ, ಊರಿನ ಹೆಸರು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದೆ.

ಪೇಜಾವರ ಶ್ರೀಗಳ ಹುಟ್ಟೂರು:
ವಿಶ್ವಸಂತರಾಗಿ ಗುರುತಿಸಿಕೊಂಡಿದ್ದ ವೃಂದಾವನಸ್ಥ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಹುಟ್ಟೂರು ರಾಮಕುಂಜ. ಇದರಿಂದಾಗಿಯೇ ರಾಮಕುಂಜವಿಂದು ರಾಷ್ಟ್ರಮಟ್ಟದಲ್ಲಿಯೂ ಹೆಸರು ಪಡೆದುಕೊಂಡಿದೆ. ಗ್ರಾಮೀಣ ಪ್ರದೇಶವಾದ ರಾಮಕುಂಜದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಗೋಪುರದಲ್ಲಿ ಊರಿನ ಹಿರಿಯರು ೧೯೧೯ರಲ್ಲಿ ವೇದ ಪಾಠಶಾಲೆ ಹಾಗೂ ಸಂಸ್ಕೃತ ಪಾಠಶಾಲೆ ಆರಂಭಿಸಿದರು. ಶ್ರೀ ವಿಶ್ವೇಶತೀರ್ಥ ಶ್ರೀಗಳು ತಮ್ಮ ೮ ನೇಯ ವಯಸ್ಸಿನವರೆಗೆ ಇಲ್ಲಿಯೇ ಶಿಕ್ಷಣ ಪಡೆದುಕೊಂಡಿದ್ದರು. ಶ್ರೀಗಳ ಪ್ರಭಾವದಿಂದಾಗಿಯೇ ಇಲ್ಲಿ ಮುಂದೆ ಪ್ರಾಥಮಿಕ ಶಾಲೆ, ಓರಿಯೇಟಲ್ ಹೈಸ್ಕೂಲ್, ಪದವಿ ಪೂರ್ವ ಕಾಲೇಜು, ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು, ಕಂಪ್ಯೂಟರ್ ಶಿಕ್ಷಣ ಕೇಂದ್ರ ಆರಂಭಗೊಂಡಿದ್ದು ಪ್ರತಿವರ್ಷವೂ ೨೫೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುತ್ತಾರೆ. ಆಡಳಿತ ಮಂಡಳಿಯಾಗಿರುವ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾವೂ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಧುನಿಕ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸುತ್ತಿದ್ದು ಪ್ರೋತ್ಸಾಹ ನೀಡುತ್ತಿದೆ.

ಕನ್ನಡ ಮಾಧ್ಯಮ ಪ್ರೌಢಶಾಲೆ:
ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಪ್ರತಿವರ್ಷವೂ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ೨೦೧೯-೨೦ನೇ ಶೈಕ್ಷಣಿಕ ಸಾಲಿನಲ್ಲಿಯೂ ಸಂಸ್ಥೆಗೆ ಉತ್ತಮ ಫಲಿತಾಂಶ ಬಂದಿದ್ದು ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಪೈಕಿ ಪುತ್ತೂರಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯಿಂದ ಫಲಿತಾಂಶದಲ್ಲಿ ಎ ಗ್ರೇಡ್ ಸಹ ಪಡೆದುಕೊಂಡಿದೆ. ಇಲ್ಲಿ ೮ನೇ ತರಗತಿಯಿಂದ ೧೦ನೇ ತರಗತಿ ತನಕವೂ ರಿಯಾಯಿತಿ ದರದಲ್ಲಿ ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ನುರಿತ ಶಿಕ್ಷಕರ ತಂಡವಿದ್ದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರ ಸರ್ವಾಂಗೀಣ ಬೆಳವಣಿಗೆಗೆ ಪೂಕರವಾದ ಎಲ್ಲಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಅತ್ಯುತ್ತಮ ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಭಾಷಾ ಪ್ರಯೋಗಾಲಯವೂ ಇದ್ದು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿದೆ. ಇದರ ಜೊತೆಗೆ ಎನ್‌ಟಿಎಸ್‌ಸಿ, ಎನ್‌ಎಂಎಂಎಸ್‌ಗೆ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದ್ದು ಪ್ರತಿವರ್ಷವೂ ಉತ್ತಮ ಫಲಿತಾಂಶ ಬರುತ್ತಿದೆ.

ಪದವಿಪೂರ್ವ ಕಾಲೇಜು:
೧೯೮೪ರಲ್ಲಿ ರಾಮಕುಂಜದಲ್ಲಿ ಪದವಿ ಪೂರ್ವ ಕಾಲೇಜು ಆರಂಭವಾಯಿತು. ಈಗ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ತರಗತಿಗಳು ನಡೆಯುತ್ತಿದ್ದು ಪ್ರತಿವರ್ಷವೂ ಆತ್ಯುತ್ತಮ ಫಲಿತಾಂಶದ ದಾಖಲೆಯೊಂದಿಗೆ ಕಾಲೇಜು ಮುನ್ನಡೆಯುತ್ತಿವೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ, ವಾಣಿಜ್ಯ ವಿಭಾಗದಲ್ಲಿ ಹೆಚ್‌ಇಬಿಎ, ಎಸ್‌ಇಬಿಎ ಹಾಗೂ ಸಿಇಬಿಎ, ಕಲಾ ವಿಭಾಗದಲ್ಲಿ ಎಚ್‌ಇಪಿಎಸ್ ಸಂಯೋಜನೆಗಳಿವೆ.

ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ:
ರಾಮಕುಂಜ ಪ.ಪೂ.ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ವಿಶಾಲವಾದ ಕ್ರೀಡಾಂಗಣವಿದ್ದು ವಿದ್ಯಾರ್ಥಿಗಳು ಉತ್ತಮ ತರಬೇತಿ ಹೊಂದಿ ಜಿಲ್ಲಾ, ರಾಜ್ಯ ಮಟ್ಟಗಳಲ್ಲಿ ಪ್ರಶಸ್ತಿಯೂ ಪಡೆದುಕೊಂಡಿದ್ದಾರೆ.. ಸಂಗೀತ, ನೃತ್ಯ, ಯಕ್ಷಗಾನ ಇತ್ಯಾದಿ ವಿಶೇಷ ತರಬೇತಿಗಳು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸೃಜನ ಶೀಲತೆಯನ್ನು ಬೆಳೆಸಲು ಸಾಂಸ್ಕೃತಿಕ ಸಂಘದ ವಿವಿಧ ಚಟುವಟಿಕೆಗಳಿವೆ. ಉತ್ತಮ ಪ್ರಯೋಗಾಲಯವಿದ್ದು. ವಿದ್ಯಾರ್ಥಿಗಳಿಗೆ ಪಠ್ಯ ಪೂರಕ ಮಾದರಿ ತಯಾರಿಕೆ, ವಿಶೇಷ ಆವಿಷ್ಕಾರಗಳುಳ್ಳ ಪ್ರಾಜೆಕ್ಟ್‌ಗಳ ತಯಾರಿಕೆ ಮಾಡುವಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಸತಿ ನಿಲಯದ ಸೌಲಭ್ಯವನ್ನು ಬಳಸಿಕೊಂಡು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಎನ್‌ಇಇಟಿ, ಜೆಇಇ, ಸಿಇಟಿ ಕೋಚಿಂಗ್‌ಗಳನ್ನು ಸಂಸ್ಥೆಯಲ್ಲೇ ನೀಡಲಾಗುತ್ತಿದೆ. ಎಲ್ಲಾ ಆರ್ಥಿಕ ಹಾಗೂ ಸಾಮಾಜಿಕ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೇ ಅವರ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಬದುಕಿಗೆ ಭದ್ರ ಬುನಾದಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ. ಸಂಸ್ಥೆಯಲ್ಲಿ ಈಗಾಗಲೇ ದಾಖಲಾತಿ ಆರಂಭಗೊಂಡಿದ್ದು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್‌ಸೈಟ್….ಅಥವಾ ಮಾಹಿತಿಗಾಗಿ ಮೊ: ೬೩೬೧೪೭೬೪೪೧, ೯೪೪೮೧೨೫೧೩೩ಗೆ ಸಂಪರ್ಕಿಸಬಹುದಾಗಿದೆ.

ಪಿಯುಸಿಯಲ್ಲಿರುವ ಶೈಕ್ಷಣಿಕ ಸಂಯೋಜನೆಗಳು:
ವಿಜ್ಞಾನ ವಿಭಾಗ:
೧. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ, ಜೀವಶಾಸ್ತ್ರ(ಪಿಸಿಎಂಬಿ)
೨. ಭೌತಶಾಸ್ತ್ರ, ಅರ್ಥಶಾಸ್ತ್ರ,ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ(ಪಿಸಿಎಂಸಿ)

ವಾಣಿಜ್ಯ ವಿಭಾಗ
೧. ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ(ಹೆಚ್‌ಇಬಿಎ)
೨. ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ(ಎಸ್‌ಇಬಿಎ)
೩. ಗಣಕ ವಿಜ್ಞಾನ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ(ಸಿಬಿಬಿಎ)

ಕಲಾ ವಿಭಾಗ
ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ(ಹೆಚ್‌ಇಪಿಎಸ್)

ಕನ್ನಡ ಮಾಧ್ಯಮ ಪ್ರೌಢಶಾಲೆ:
೮ನೇ ತರಗತಿಯಿಂದ ೧೦ನೇ ತರಗತಿಯವರೆಗೆ
ರಿಯಾಯಿತಿ ದರದಲ್ಲಿ ಉತ್ಕೃಷ್ಟ ಮಟ್ಟದಲ್ಲಿ ಶಿಕ್ಷಣ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.