ಉಪ್ಪಿನಂಗಡಿ ಮೂರ್ತೆದಾರರ ಸಂಘ ಪ್ರಾಯೋಜಕತ್ವದ ಗುರುಶ್ರೀ ಸ್ವ ಸಹಾಯ ಸಂಘಗಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮೂರ್ತೆದಾರರ ಸೇವಾ ಸಹಕಾರ ಸಂಘ ಉಪ್ಪಿನಂಗಡಿ ಇದರ ಪ್ರಾಯೋಜಕತ್ವದ ಗುರುಶ್ರೀ ಸ್ವ ಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮ ಈಚೆಗೆ ನಡೆಯಿತು.


ಶ್ರಮಿಕ ಗುರುಶ್ರೀ ಸ್ವ ಸಹಾಯ ಸಂಘ ಪೊಸಳಿಗೆ, ಜೈ ಶ್ರೀ ರಾಮ ಗುರುಶ್ರೀ ಸ್ವ ಸಹಾಯ ಸಂಘ ನೆಲ್ಯಾಡಿ, ವರಮಹಾಲಕ್ಷ್ಮೀ ಗುರುಶ್ರೀ ಸ್ವ ಸಹಾಯ ಸಂಘ ಕಟ್ಟೆಮಜಲು ಸ್ವ ಸಹಾಯ ಸಂಘವನ್ನು ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್‌ರವರು ಉದ್ಘಾಟಿಸಿ ಮಾತನಾಡಿ ಗುರುಶ್ರೀ ಸ್ವ ಸಹಾಯ ಸಂಘವು ಕಡಿಮೆ ಬಡ್ಡಿ ದರದಲ್ಲಿ ವಿವಿಧ ರೀತಿಯ ಸಾಲ ವಿತರಿಸಿ ಸದಸ್ಯರ ಸ್ವ ಅಭಿವೃದ್ಧಿಗೆ ಕಾರಣವಾಗಿದೆ ಎಂದರು. ಗೃಹೋಪಯೋಗಿ ವಸ್ತು ಖರೀದಿಗಾಗಿ ಸ್ವ ಸಹಾಯ ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ತ್ವರಿತ ಸಾಲ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಸದಸ್ಯರು ಇದರ ಉಪಯೋಗ ಪಡೆದುಕೊಳ್ಳ ಬಹುದೆಂದು ವಿವರಿಸಿದರು. ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಸ್ವ ಸಹಾಯ ಸಂಘ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಸಂಚಾಲಕಿ ವನಿತಾ, ನೂತನ ಸ್ವ ಸಹಾಯ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳಾದ ಜಿ.ಬಿ. ಜೋಯ್, ತುಕರಾಮ ರೈ, ಸುರೇಶ, ರಮೇಶ್ ಪಿ.ಎನ್, ವೇದಾವತಿ, ರಜಿತಾ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.