Breaking News

ಡಾ.ಎನ್. ಸುಕುಮಾರ ಗೌಡರಿಗೆ ಲಷ್ಕರಿ ಕೇಶವ ಭಟ್ಟ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲೋಕ ವಿಕಾಸ ಪ್ರತಿಷ್ಠಾನ ಪೆರ್ಲಂಪಾಡಿ ಇದರ ವತಿಯಿಂದ ನೀಡಲ್ಪಡುವ ವೆ.ಮೂ ಲಷ್ಕರಿ ಕೇಶವ ಭಟ್ ಜನ್ಮ ಶತಮಾನೋತ್ಸವ ಪ್ರಶಸ್ತಿಯನ್ನು ಶಿಕ್ಷಣ ಸಿದ್ಧಾಂತಿ ಡಾ ಎನ್. ಸುಕುಮಾರ ಗೌಡರಿಗೆ ನೀಡಿ ಪುರಸ್ಮರಿಸಲಾಯಿತು. ೨೦ ನೇ ವರ್ಷದ ಈ ಕಾರ್ಯಕ್ರಮವನ್ನು ಆ.೧೯ರಂದು ಡಾ. ಸುಕುಮಾರ ಗೌಡರ ಮನೆಗೆ ತೆರಳಿ ಅವರಿಗೆ ಸ್ಮರಣಿಕೆ, ಶಾಲು, ಪೇಟ, ಫಲತಾಂಬುಲ ಮತ್ತು ರೂ. ಹತ್ತುಸಾವಿರ ನಗದುಗಳೊಂದಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಡಾ. ಎನ್. ಸುಕುಮಾರ ಗೌಡರು ಮಾತನಾಡಿ ಇಂದಿನ ಶಿಕ್ಷಣ ಕ್ಷೇತ್ರದ ವ್ಶಾಪಾರೀಕರಣ ಮತ್ತು ದುರವಸ್ಥೆಯ ಕುರಿತು ಕಳವಳ ವ್ಶಕ್ತಪಡಿಸಿ ಉತ್ತಮ ಶಿಕ್ಷಕರು ಅರ್ಹತೆಯಿಂದ ಶಿಕ್ಷಣ ಇಲಾಖೆಯ ಉನ್ನತ ಸ್ಥಾನದಲ್ಲಿ ಬೆಳಗಿದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾದ್ಶ ಎಂದು ಹೇಳಿದರು. ಪ್ರಶಸ್ತಿ ಪಡೆದ ಈ ಕ್ಷಣವು ನನ್ನ ಪಾಲಿಗೆ ಸ್ಮರಣೀಯ ದಿನ ಎಂದು ನುಡಿದರು. ಪ್ರತಿಷ್ಠಾನದ ಅದ್ಶಕ್ಷ ಕೆ. ಜಯರಾಜ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ನನ್ನ ಗುರುಗಳಾದ ಡಾ. ಎನ್. ಸುಕುಮಾರ ಗೌಡರನ್ನು ಅವರ ಮನೆಯಲ್ಲಿಯೇ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವಿದು ನನ್ನ ಸೌಭಾಗ್ಶ ಎಂದರು. ಪ್ರತಿಷ್ಠಾನದ ಸ್ಥಾಪಕಾದ್ಶಕ್ಷ ಎಸ್. ಜಿ.ಕೃಷ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಶಿವರಾಮ ಅಮಳ ಸ್ವಾಗತಿಸಿದರು. ಕೋಶಾಧಿಕಾರಿ ಡಾ. ಎಲ್. ಹರ್ಷಪ್ರಸಾದ, ಲಷ್ಕರಿ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ವಿಷ್ಣು ಭಟ್ ಎಕ್ಕಡ್ಕ, ಪ್ರತಿಷ್ಠಾನದ ನಿರ್ದೇಶಕರುಗಳಾದ ಎಂ. ಗಣೇಶ ಭಟ್, ಎಸ್. ಕುಸುಮಾವತಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಶಕ್ಷ ಡಾ. ಎಲ್. ಕೃಷ್ಣಪ್ರಸಾದ್ ವಂದಿಸಿದರು. ನಿರ್ದೇಶಕ ಉಮಾಮಹೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.