ಪ್ರೊ. ವಿ.ಬಿ. ಅರ್ತಿಕಜೆಯವರ ಕನ್ನಡದ ಹನುಮಾನ್ ಚಾಲೀಸಾ ಆ.22ರ ಚೌತಿಯಂದು ಪಂಚವಟಿಯಲ್ಲಿ ಅನಾವರಣ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಶ್ರೀ ಹನುಮಾನ್ ಚಾಲೀಸಾ ಎಂಬುದು ಗೋಸ್ವಾಮಿ ತುಲಸೀದಾಸರಿಂದ ರಚಿತವಾದ ಸ್ತೋತ್ರ ಕಾವ್ಯ. ಮಾನಸಿಕ ಮತ್ತು ಆಧ್ಯಾತ್ಮಿಕ ನೆಮ್ಮದಿಯನ್ನು ತರುವ ಈ ಸ್ತುತಿ ಪದ್ಯವನ್ನು ಅಸಂಖ್ಯ ಭಕ್ತರು ನಿತ್ಯವೂ ಪಾರಾಯಣ ಮಾಡುತ್ತಾರೆ. ಹಿಂದಿಯ ಒಂದು ಪ್ರಭೇದವಾದ ಅವಧಿ ಭಾಷೆಯಲ್ಲಿ ರಚಿಸಲ್ಪಟ್ಟ ಕಾವ್ಯದಲ್ಲಿ ನಲುವತ್ತು ಪದ್ಯಗಳಿರುವುದರಿಂದ ಇದನ್ನು ‘ಚಾಲೀಸಾ’ ಎಂದು ಕರೆಯುತ್ತಾರೆ.

ಇತ್ತೀಚೆಗಷ್ಟೇ ‘ಶ್ರೀ ವಿಷ್ಣು ಸಹಸ್ರನಾಮ’ದ ಕನ್ನಡ ಪದ್ಯಾನಾವಾದದ ಮುಖಾಂತರ ಸಹೃದಯದ ಮೆಚ್ಚುಗೆ ಪಡೆದ ಅಂಕಣಕಾರ, ಸಾಹಿತಿ ವಿ.ಬಿ.ಅರ್ತಿಕಜೆಯವರು ‘ಹನುಮಾನ್ ಚಾಲೀಸಾ’ ವನ್ನು ಸರಳ ಕನ್ನಡದಲ್ಲ ಅನುವಾದಿಸಿದ್ದಾರೆ. ಅನುವಾದವು ಮೂಲ (ಅವಧೀ ಭಾಷೆ) ಪದ್ಯಗಳ ಧಾಟಿಯಲ್ಲೇ ಇರುವುದರಿಂದ ಪಾರಾಯಣ ಹಾಗೂ ಗಾಯನ ಮಾಡುವವರಿಗೆ ಅನುಕೂಲಕರವಾಗಿದೆ. ಕನ್ನಡ ಅವತರಣಿಕೆಯ ಜತೆಗೆ ತುಲಸೀದಾಸರ ಮೂಲ ಪದ್ಯಗಳನ್ನು ಮುದ್ರಿಸಲಾಗಿದೆ. ಪಠನಕ್ಕೆ ಇದು ಸಹಕಾರಿಯಾಗಿದೆ. ಜ್ಞಾನಗಂಗಾ ಪುಸ್ತಕ ಮಳಿಗೆಯವರು ಪ್ರಕಟಿಸಿದ ಪುಸ್ತಕವನ್ನು ಚೌತಿಯ ಶುಭದಿನ ಆ.೨೨ರಂದು ಸಂಜೆ ಹಿರಿಯ ಸಾಹಿತಿ ಬಲ್ನಾಡು ಸುಬ್ಬಣ್ಣ ಭಟ್ಟರು ತಮ್ಮ ಸರ್ವೆ ನಿವಾಸ ಪಂಚವಟಿಯಲ್ಲಿ ಅನಾವರಣಗೊಳಿಸಲಿದ್ದಾರೆ.

ಕನ್ನಡಾನುವಾದದ ಒಂದೆರಡು ನಿದರ್ಶನಗಳು ಹೀಗಿವೆ:
“ಶ್ರೀ ಗುರು ಚರಣ ಸರೋಜ ರಜದಲಿ| ನಿಜ ಮನ ಮುಕುರವ ತೊಳೆವ| ಪುರುಷಾರ್ಥಗಳನು ನೀಡುವ ನಿರ್ಮಲ| ರಘುವರ ಚರಿತೆಯನೊರೆವೆ ‘
“ನಿನ್ನಭಜಿಸಿದವ ರಾಮನ ಪಡೆವ| ಜನುಮ ಜನುಮಗಳ ದುಃಖವ ತೊಡೆವ| ಬಲವೀರನ ಹನುಮನ ನೆನೆವವಗೆ| ಕಷ್ಟವು ಸಂಕಟ ಸುಳಿಯದು ಬಳಿಗೆ’

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.