Breaking News

ಎರುಂಬು: ದಾರಿ ವಿವಾದ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಆರೋಪ: ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಅಳಿಕೆ ಗ್ರಾಮದ ಎರುಂಬು ಎಂಬಲ್ಲಿ ದಾರಿ ವಿವಾದಕ್ಕೆ ಸಂಬಂದಿಸಿದಂತೆ  ರಿವಾಲ್ವಾರ್ ನಲ್ಲಿ ಗುಂಡಿಕ್ಕಿ ಕೊಲೆ ನಡೆಸುವುದಾಗಿ ಇಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಳಿಕೆ ಗ್ರಾಮದ ಎರುಂಬು ಮೂಡಯಿಬೆಟ್ಟು ನಿವಾಸಿ ರಾಮಚಂದ್ರ ಬಲ್ಲಾಳ್ ರವರು ದೂರು ನೀಡಿದವರಾಗಿದ್ದಾರೆ.  ಸರ್ಕಾರಿ ಜಾಗದ ಮೂಲಕ ಮಣ್ಣು ರಸ್ತೆ ಹಾದು ಹೋಗುತ್ತಿದ್ದು. ಈ ರಸ್ತೆಯನ್ನು ರಾಮಚಂದ್ರ ಬಲ್ಲಾಳ್ ರವರು ರಿಪೇರಿ ಮಾಡುತ್ತಿದ್ದ ಸಂದರ್ಭ ಅಲ್ಲಿಗೆ ಕಬ್ಬಿಣದ ರಾಡ್ ಮತ್ತು ಕತ್ತಿಯನ್ನು ಹಿಡಿದುಕೊಂಡು ಬಂದ  ಉದನೇಶ್ವರ ಭಟ್ ಹಾಗೂ ಆದರ್ಶ್ ರವರು  ರಾಮಚಂದ್ರ ಬಲ್ಲಾಳ್ ರವರನ್ನು ತರಾಟೆಗೆ ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ರಿವಾಲ್ವಾರ್ ನಲ್ಲಿ ಗುಂಡಿಕ್ಕಿ ಕೊಲೆ ನಡೆಸುವುದಾಗಿ ಹೇಳಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ರಾಮಚಂದ್ರ ಬಲ್ಲಾಳ್ ರವರು ನೀಡಿದ ದೂರಿನಂತೆ ಅಳಿಕೆ ಗ್ರಾಮದ ಎರುಂಬು ಮೂಡಯಿಬೆಟ್ಟು ನಿವಾಸಿಗಳಾದ ಉದನೇಶ್ವರ ಭಟ್, ಆದರ್ಶ್ ರವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.