ಕೆಯ್ಯೂರು ಶ್ರೀ ದೇವಿ ಕಾಂಪ್ಲೆಕ್ಸ್‌ನಲ್ಲಿ ಭಗವತಿ ಟ್ರೇಡರ್‍ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
  • ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವುದು ವರ್ತಕನ ಕರ್ತವ್ಯವಾಗಬೇಕು: ಜಯಂತ ನಡುಬೈಲ್



ಪುತ್ತೂರು: ದಿನಸಿ ಮತ್ತು ತರಕಾರಿ, ಹಣ್ಣು ಹಂಪಲು ಇತ್ಯಾದಿ ಉತ್ಪನ್ನಗಳ ರಖಂ ಮತ್ತು ಚಿಲ್ಲರೆ ಮಾರಾಟ ಮಳಿಗೆ ಭಗವತಿ ಟ್ರೇಡರ್‍ಸ್ ಆ.೨೧ರಂದು ಕೆಯ್ಯೂರು ಶ್ರೀ ದೇವಿ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಉದ್ಯಮಿ ಜಯಂತ ನಡುಬೈಲ್‌ರವರು ದೀಪ ಬೆಳಗಿಸುವ ಮೂಲಕ ವ್ಯಾಪಾರ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡಿದಾಗ ಗ್ರಾಹಕರು ಕೂಡ ನಮಗೆ ಪ್ರೋತ್ಸಾಹ ನೀಡುತ್ತಾರೆ. ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವುದು ವರ್ತಕನ ಕರ್ತವ್ಯವಾಗಬೇಕು, ಸಮಾಜಕ್ಕೆ ಒಳ್ಳೆಯ ಸೇವೆಯನ್ನು ನೀಡುವ ಮೂಲಕ ಭಗವತಿ ಟ್ರೇಡರ್‍ಸ್ ಒಳ್ಳೆಯ ಹೆಸರು ಗಳಿಸಲಿ, ಉದ್ಯಮ ಕ್ಷೇತ್ರದಲ್ಲಿ ಒಳ್ಳೆಯದಾಗಲಿ ಎಂದು ಹೇಳಿ ಶುಭ ಹಾರೈಸಿದರು. ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ ಎ.ಕೆ ಜಯರಾಮ ರೈಯವರು ಮಾತನಾಡಿ, ಕೆಯ್ಯೂರು ಬೆಳೆಯುತ್ತಿರುವ ಪೇಟೆ, ಇಂತಹ ಪೇಟೆಗೆ ಸೂಕ್ತವಾದ ವ್ಯಾಪಾರ ಮಳಿಗೆ ಇದಾಗಿದೆ. ಒಂದೇ ಕಡೆಯಲ್ಲಿ ಎಲ್ಲಾ ವಸ್ತುಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಭಗವತಿ ಟ್ರೇಡರ್‍ಸ್‌ಗೆ ದೇವಿಯ ಅನುಗ್ರಹ ಸದಾ ಇರಲಿ ಎಂದು ಹೇಳಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಜಯಂತ ಪೂಜಾರಿ ಕೆಂಗುಡೇಲು , ವಿಶ್ವನಾಥ ಪೂಜಾರಿ ಕೆಂಗುಡೇಲು , ಡಾ.ಶಿವಪ್ರಸಾದ್, ವಿಠಲ ರೈ ಕೆಯ್ಯೂರು, ಮನೋಜ್ ಕುಮಾರ್ ರೈ ಮೇರ್ಲ ಹಲವು ಗಣ್ಯರು ಉಪಸ್ಥಿತರಿದ್ದರು. ಮಾಲಕ ತಾರಾನಾಥ ಬೆಳ್ಳಾರೆ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಗ್ರಾಹಕರ ಸಹಕಾರ ಕೋರಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.