ಕುದ್ಲೂರಿನ ಬಹು ವರುಷಗಳ ಬೇಡಿಕೆಯಾಗಿದ್ದ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ| ಏರ್ಟೆಲ್ ನೆಟ್‌ವರ್ಕ್ ಸಂಸ್ಥೆಯಿಂದ ನೂತನ ಟವರ್ ನಿರ್ಮಾಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ನಾಲ್ಕು ವರ್ಷಗಳಿಂದ ಕಡಬ ತಾಲೂಕಿನ ಸುಬ್ರಹ್ಮಣ್ಯ- ಉಪ್ಪಿನಂಗಡಿ ರಸ್ತೆಯ ಕೊಲ ಗ್ರಾಮದ ಕುದ್ಲೂರು ಎಂಬಲ್ಲಿ ಯಾವುದೇ ಸಿಮ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಲೇ ಬರಬೇಕಾಯಿತು. ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿಗಳನ್ನು ಸಲ್ಲಿಸಿದ್ದರು ಗಮನಹರಿಸದಿರುವುದರಿಂದ ಸ್ಥಳೀಯರೂ ಆಕ್ರೋಶಗೀಡಾಗಿದ್ದರು. ಅಲ್ಲಿಯ ಸ್ಥಳೀಯರಿಗೆ ತುರ್ತು ಸಂದರ್ಭದಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗದೆ ಕರೆಗಳೂ ಹೋಗುತ್ತಿರಲಿಲ್ಲ, ಬರುತ್ತಿರಲಿಲ್ಲ. ಅಲ್ಲದೇ ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಂತರ್ಜಾಲ, ನೆಟ್‌ವರ್ಕ್ ಸಮಸ್ಯೆಯಿಂದ ಗುಡ್ಡೆ, ಮನೆಯ ಹಂಚಿನ ಮೇಲೆ ಹೋಗಿ ಪರದಾಡುವಂತಹ ಸನ್ನಿವೇಶಗಳು ಕೂಡ ಎದುರಾಗಿತ್ತು. ಈ ಹಿಂದೆ ಊರಿನ ನಿವಾಸಿಗಳು 2016ರಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ಸುಳ್ಯ ಶಾಸಕ ಎಸ್.ಅಂಗಾರರುವರಿಗೆ ಸಮಸ್ಯೆ ಕುರಿತಾಗಿ ಮನವಿ ಸಲ್ಲಿಸಿದ್ದರು ಯಾವುದೇ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ. 4 ಜಿ ಯುಗದಲ್ಲಿ ಸರಿಯಾದ ಇಂಟರ್‌ನೆಟ್‌ನ್ನು ನೋಡಲಾಗದ ಸ್ಥಿತಿ ನಮ್ಮದಾಗಿತ್ತು, ಇದೀಗ ನೂತನ ಟವರ್ ನಿರ್ಮಾಣವಾಗುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಸ್ಥಳೀಯರಾದ ಎಂ.ಎಂ. ಮಹ್‌ರೂಫ್ ಆತೂರುರವರು ತಿಳಿಸಿದರು.

`ಸುದ್ದಿ’ಯಲ್ಲಿ ವರದಿ ಪ್ರಕಟವಾಗಿತ್ತು
ಜು. 29ರಂದು `ಸುದ್ದಿ ಬಿಡುಗಡೆ’ಯಲ್ಲಿ ಈ ಸಮಸ್ಯೆ ಕುರಿತಾಗಿ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಎರ್ಟೆಲ್ ನೆಟ್‌ವರ್ಕ್ ಸಂಸ್ಥೆಯಿಂದ ಇದೀಗ ಸಂಪ್ಯಾಡಿ ಎಂಬಲ್ಲಿ ನೂತನ ಟವರ್ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ಶೀಘ್ರದಲ್ಲೇ ಟವರ್ ನಿರ್ಮಾಣದ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಿಕ ಯಾವುದೇ ನೆಟ್‌ವರ್ಕ್ ಸಮಸ್ಯೆ ಇರುವುದಿಲ್ಲ ಎಂದು ಏರ್ಟೆಲ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಮಸ್ಯೆಗೆ ಇತ್ಯರ್ಥಕ್ಕೆ ಕಾರಣವಾಗಿರುವ `ಸುದ್ದಿ’ಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.