ಪುತ್ತೂರು, ಕಡಬ, ವಿಟ್ಲದ ವಿವಿಧೆಡೆ ಗಣೇಶೋತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1
ಕಿಲ್ಲೆ ಮೈದಾನದಲ್ಲಿ ವರ್ಷಂಪ್ರತಿ 7 ದಿನಗಳು ವಿಜೃಂಭಣೆಯಿಂದ ನಡೆಯುತ್ತಿರುವ ಗಣೇಶೋತ್ಸವ ಈ ಭಾರಿ ನೆಲ್ಲಿಕಟ್ಟೆ ಖಾಸಗಿ ಬಸ್‌ನಿಲ್ದಾಣದ ಬಳಿಯ ಕಟ್ಟಡದಲ್ಲಿ ನಡೆಯಿತು. ಬೆಳಿಗ್ಗೆ ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಪೂಜೆ, ರಂಗ ಪೂಜೆ ನಡೆಯಿತು.

 

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ 54ನೇ ವರ್ಷದ ಗಣೆಶೋತ್ಸವು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಕೋವಿಡ್ ನಿಯಮಾವಳಿಯಂತೆ ವಿಗ್ರಹವನ್ನು 2 ಅಡಿ ಎತ್ತರಕ್ಕೆ ಸೀಮಿತಗೊಳಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ರಂಗಪೂಜೆ ನಡೆಯಿತು.

ಪುತ್ತೂರು: ಕೋವಿಡ್19ರ ನಿಯಮಾವಳಿ ಪ್ರಕಾರ ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಿಸಲು ಸರಕಾರ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಮತ್ತು ವಿಟ್ಲ ವ್ಯಾಪ್ತಿಯ ವಿವಿಧೆಡೆ ಗಣೇಶೋತ್ಸವ ಆಚರಣೆಗೆ ಆ.22ರಂದು ಒಂದು ದಿನ ಮಾತ್ರ ಆಚರಣೆ ನಡೆಯುತ್ತಿದೆ.

     ದರ್ಬೆ ಕಾವೇರಿಕಟ್ಟೆಯಲ್ಲಿ ನಡೆಯುವ ಗಣೇಶೋತ್ಸವ ಈ ವರ್ಷ ಪಕ್ಕದಲ್ಲಿರುವ ಕಾರ್‌ಟೆಕ್ ಮಾರುತಿ ವರ್ಕ್‌ಶಾಪ್‌ನ ಒಳ ಆವರಣದಲ್ಲಿ ನಡೆಯಿತು.  

 

ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯಿತು. ಮಠದ ಕಾರ್ಯದರ್ಶಿ ಯು.ಪೂವಪ್ಪ ನೇತೃತ್ವ ವಹಿಸಿಕೊಂಡಿದ್ದರು. ಪ್ರಧಾನ ಅರ್ಚಕ ರಾಘವೇಂದ್ರ ಉಡುಪ ವೈದಿಕ ಕಾರ್ಯಕ್ರಮ ನಡೆಸಿದರು.

                           ದರ್ಬೆ ಸಂತ ಫಿಲೋಮಿನಾ ಕಾಲೇಜು ಗಣೇಶೋತ್ಸವ ಸಮಿತಿ ವತಿಯಿಂದ ಪಕ್ಕದ ಮನೆಯೊಂದರ ವಠಾರದಲ್ಲಿ ಆಚರಣೆ ಮಾಡಲಾಯಿತು. 

 

                         ಶ್ರೀಮರಾಠ ಗಣೇಶ್ ಉತ್ಸವ್ ಮಂಡಲ್ ಮಾತೃಛಾಯ ಹಾಲ್ ರೈಲ್ವೇ ಸ್ಟೇಷನ್ ರಸ್ತೆ ಪುತ್ತೂರು

 

                                                        ಉಪ್ಪಿನಂಗಡಿ

 

                                                                  ನೆಲ್ಯಾಡಿ

 

                                                         ಹೀರೆಬಡಾಂಡಿ

 

ಕೋಡಿಂಬಾಡಿ ಭಜನಾ ಮಂದಿರ

 

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ಸರಳವಾಗಿ ಶ್ರೀ ಪಂಚಲಿಗೇಶ್ವರ ಸಭಾ ಭವನದಲ್ಲಿ ಆಚರಿಸಲಾಯಿತು. ಕೊರೋನಾದ ಹಿನ್ನಲೆಯಿಂದ ವಿಗ್ರಹ ಪ್ರತಿಷ್ಠಾಪನೆವಿರಲಿಲ್ಲ. ಅರ್ಚಕರಾದ ಶಿವಪ್ರಸಾದ್ ಕಡಮಣ್ಣಾಯ ಇವರ ಪೌರೋಹಿತ್ಯ ದಲ್ಲಿ ಗಣಹೋಮ ನಡೆಯಿತು,

 

ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊಯಿಲ- ರಾಮಕುಂಜ ಇದರ ಆಶ್ರಯದಲ್ಲಿ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಗಣೇಶನಗರದಲ್ಲಿ ನಡೆಯಿತು. ಕೊವೀಡ್ – 19 ಮಹಾಮಾರಿ ಯಿಂದಾಗಿ ಸರಕಾರದ ಅದೇಶವನ್ನು ಪಾಲಿಸಿಕೊಂಡು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು . ಬೆಳಿಗ್ಗೆ  7 ಗಂಟೆಗೆ ಮಣ್ಣಿನಿಂದ ತಯಾರಿಸಲ್ಪಟ್ಟ ರಾಸಯನಿಕ ಬಳಸದ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠೆ ಮಾಡಲಾಯಿತು.

 

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸರಳ ರೀತಿಯಲ್ಲಿ ಗಣಹೋಮ ನಡೆಯಿತು. ಬಳಿಕ ದೇವಸ್ಥಾನದಲ್ಲಿ ಗಣೇಶೊತ್ಸವ ಸಮಿತಿಯಿಂದ ವಿಶೇಷ ಸೇವೆ ನಡೆಯಿತು.

 

                                                             ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ

 

                                                          ಬಜತ್ತೂರು ಮುಂಡ್ಯ

 

ಸರಕಾರದ ನಿಯಮದಂತೆ ಧರ್ಮಸ್ಥಳ ಬಿಲ್ಡಿಂಗ್‌ನ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ವೇದಮೂರ್ತಿ ಸುಬ್ರಹ್ಮಣ್ಯ ಹೊಳ್ಳರವರ ನೇತೃತ್ವದಲ್ಲಿ 6ನೇ ವರುಷದ ವಿದ್ಯಾಗಣಪತಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು.

 

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆಯುವ 33 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಆ 22ರಂದು ನಡೆಯಿತು. ಶ್ರೀಮಹಾಗಣಪತಿ ದೇವರಿಗೆ ಸೇವೆಗಳು, ಬೆಳಿಗ್ಗೆ ಪ್ರತಿಷ್ಠಾಪನೆ ನಡೆದು, ಗಣಹೋಮ,ಮಹಾಪೂಜೆ, ಭಜನೆ ನಡೆದು ಸಂಜೆ ಮಹಾಪೂಜೆ ನಡೆಯಿತು.

 

ಮಾಣಿಲ-ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಗುರೂಜಿ ಯವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ನಡೆಯಿತು. ಬೆಳಿಗ್ಗೆ ಗಣಹೋಮ ನಡೆದು ಬಳಿಕ ಮಹಾ ಪೂಜೆ ನಡೆಯಿತು.


ಪುತ್ತೂರು ತಾಲೂಕಿನ ಕಾವೇರಿಕಟ್ಟೆ ಪುತ್ತೂರು ಕಸಬಾ, ಪ್ರಗತಿ ಸ್ಟಡಿ ಸೆಂಟರ್ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಟ್ಟಡ ಪುತ್ತೂರು, ಪಡ್ನೂರು ಜನಾರ್ಧನ ದೇವಸ್ಥಾನ, ಮಹಾಲಿಂಗೇಶ್ವರ ಕಟ್ಟೆ ಕೊಡ್ನೀರು ನರಿಮೊಗರು ಗ್ರಾಮ, ಸೇರಾಜೆ ಭಜನಾ ಮಂದಿರ ನರಿಮೊಗರು, ಶ್ರೀರಾಮ ಭಜನಾ ಮಂದಿರ ಕೆದಿಲ, ಶ್ರೀಮರಾಠ ಗಣೇಶ್ ಉತ್ಸವ್ ಮಂಡಲ್ ಮಾತೃಛಾಯ ಹಾಲ್ ರೈಲ್ವೇ ಸ್ಟೇಷನ್ ರಸ್ತೆ ಪುತ್ತೂರು, ಉದಯಶಂಕರ್ ರವರ ಮನೆ ದರ್ಬೆ, ರಾಘವೇಂದ್ರ ಮಠ ಕಲ್ಲಾರೆ, ಪುರುಷರಕಟ್ಟೆ ನರಿಮೊಗರು ಗ್ರಾಮ, ಕೋಡಿಂಬಾಡಿ ಭಜನಾ ಮಂದಿರ, ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ನೆಲ್ಲಿಕಟ್ಟೆ ಸಭಾಂಗಣ ಪುತ್ತೂರು, ಬಿಳಿಯೂರುಕಟ್ಟೆ ಗಣೇಶ್ ಭಟ್ ಮನೆ, ಶ್ರೀಭಾರತಿ ಭಜನಾ ಮಂದಿರ ಕುಂಞಿಮೂಲೆ, ಶ್ರೀಪಂಚಲಿಂಗೇಶ್ವರ ದೇವಸ್ಥಾನ ವಠಾರ ಈಶ್ವರಮಂಗಲ, ಶ್ರೀವಿಷ್ಣುಮೂರ್ತಿ ದೇವಸ್ಥಾನ ವಠಾರ ಸಂಪ್ಯ, ಶ್ರೀದುರ್ಗಾ ಭಜನಾ ಮಂದಿರ ಕುಂಜೂರುಪಂಜ, ಶ್ರೀಕೃಷ್ಣಾ ಭಜನಾ ಮಂದಿರ ಸಂಟ್ಯಾರ್, ಶ್ರೀಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿ, ಶ್ರೀದೇವತಾ ಭಜನಾ ಮಂದಿರ ತಿಂಗಳಾಡಿ, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು, ಶ್ರೀರಾಮ ಭಜನಾ ಮಂದಿರ ಕುಂಬ್ರ, ಸುಬ್ರಾಯ ದೇವಸ್ಥಾನ ಕುಕ್ಕಿನಡ್ಕ ಮುಂಡೂರು, ಶ್ರೀಕೂವೆ ಶಾಸ್ತಾವು ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ, ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರ ಆರ್ಲಪದವು, ಶ್ರೀಪಂಚಲಿಂಗೇಶ್ವರ ದೇವಸ್ಥಾನ ಖಾವು, ಅಯ್ಯಪ್ಪ ಭಜನಾ ಮಂದಿರ ಸುಳ್ಯಪದವು ಪಡುವನ್ನೂರು, ಶ್ರೀಕೃಷ್ಣ ಸಭಾಭವನ ಕೌಡಿಚ್ಚಾರ್, ಶ್ರೀ ವಿಘ್ನೇಶ್ವರ ಯುವಕ ಮಂಡಲ ಅಜಲಡ್ಕ ಒಳಮೊಗ್ರು, ವಿನಾಯಕ ನಗರ ಅಮ್ಚಿನಡ್ಕ ಮಾಡ್ನೂರು, ನೆಲ್ಯಾಡಿ ಶ್ರೀಅಯ್ಯಪ್ಪ ದೇವಸ್ಥಾನ, ಶ್ರೀಪಂಚಲಿಂಗೇಶ್ವರ ದೇವಸ್ಥಾನ ಪಾರಂತಿ ಮುದ್ಯ, ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರಿಯಡ್ಕ, ಗಣಪತಿ ಭಜನಾ ಮಂದಿರ ಉದನೆ, ವೆಂಕಟ್ರಮಣ ದೇವಸ್ಥಾನ ಗುಂಡ್ಯ ತೋಟ, ಸಿದ್ದಿವಿನಾಯಕ ಭಜನಾ ಮಂದಿರ ಇಚ್ಲಂಪಾಡಿ, ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನ ಹಿರೇಬಂಡಾಡಿ, ದೋಂತಿಲ ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ ಉಪ್ಪಿನಂಗಡಿ, ರಾಮಕುಂಜ ಗ್ರಾಮದ ಗಣೇಶ್‌ಕಟ್ಟೆ, ಶರವೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಆಲಂಕಾರು, ಶ್ರೀನಾಲ್ಕಂಬ ಉಳ್ಳಾಲ್ತಿ ದೇವಸ್ಥಾನ ಚಾರ್ವಾಕ, ಕಡಬ ತಾಲೂಕಿನ ಸುಬ್ರಹ್ಮಣ್ಯದ ಧರ್ಮ ಸಮ್ಮೇಳನ ಮಂಟಪ, ಶ್ರೀಬಸವೇಶ್ವರ ದೇವಸ್ಥಾನ ಬಸವನ ಮೂಲೆ ಕುಲ್ಕುಂದ, ಯೇನೆಕಲ್ಲು ಶ್ರೀಆದಿಶಕ್ತಿ ಭಜನಾ ಮಂದಿರ, ಪುಣ್ಚಪ್ಪಾಡಿ ಗೌರಿ ಸದನ, ಸವಣೂರು ವಿನಾಯಕ ಭವನ, ಸಿದ್ಧಿವಿನಯಕ ಸೇವಾ ಸಂಘ ಮಂಜುನಾಥನಗರ, ಕಾಣಿಯೂರು ಶ್ರೀಲಕ್ಷ್ಮಿ ನರಸಿಂಹ ಭಜನಾ ಮಂದಿರ, ಪುಣ್ಚತ್ತಾರು ಭಜನಾ ಮಂದಿರದಲ್ಲಿ ಪ್ರತಿಷ್ಠಾಪನೆ ನಡೆಯುತ್ತಿದೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ  ವಿಷ್ಣುಮೂರ್ತಿ ಭಜನಾ ಮಂದಿರ ಮಂಕುಡೆ, ಉಳ್ಳಾಲ್ತಿ ದೇವಸ್ಥಾನ ಕೆಲಿಂಜ, ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ, ಅನಂತೇಶ್ವರ ದೇವಸ್ಥಾನ ವಿಟ್ಲ, ರಾಜರಾಜೇಶ್ವರಿ ಭಜನಾ ಮಂದಿರ ಪೆರುವಾಯಿ, ಮಂಗಳ ಮಂಟಪ ಚಂದಳಿಕೆ, ವಿನಾಯಕ ಭಜನಾ ಮಂದಿರ ಅಳಿಕೆ, ಅಯ್ಯಪ್ಪ ಭಜನಾ ಮಂದಿರ ಮಂಗಿಲಪದವು, ಭಾರತ್ ಸೇವಾಶ್ರಮ ಕನ್ಯಾನ, ಶ್ರೀರಾಮ ಭಜನಾ ಮಂದಿರ ಪೆರಾಜೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ನೇರಳಕಟ್ಟೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ, ಸಾಲೆತ್ತೂರು ಹಿ.ಪ್ರ. ಶಾಲಾ ಮೈದಾನ,ಕಂಬಳಬೆಟ್ಟು,ಧರ್ಮನಗರ ಭಜನಾ ಮಂದಿರದ ವಠಾರ , ಮಿತ್ತಡ್ಕ ಭಜನಾ ಮಂದಿರದ ವಠಾರ, ಅಜ್ಜಿನಡ್ಕ ಭಜನಾ ಮಂದಿರದ ವಠಾರದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠೆ ಮಾಡಿ ಉತ್ಸವವನ್ನು ಆಚರಿಸಲಾಗುತ್ತಿದೆ.  ಗಣೇಶೋತ್ಸವದ ಹಿನ್ನಲೆಯಲ್ಲಿ ಪೊಲೀಸ್‌ ಇಲಾಖೆ ಸೂಕ್ತ ಮುನ್ನಚ್ಚರಿಕೆ ವಹಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.