ಗ್ರಾಮಸ್ಥರಿಗೆ ಮಾದರಿಯಾದ ಶಿಕ್ಷಕ..! ಕುಂಬ್ರದಲ್ಲಿ ನಡೆಯಿತೊಂದು ಅಪರೂಪದ ಸೇವೆ..!

Puttur_Advt_NewsUnder_1
Puttur_Advt_NewsUnder_1



ಪುತ್ತೂರು: ವಾಹನಗಳ ಅಡಿಗೆ ಯಾವುದೇ ಪ್ರಾಣಿಗಳು ಬಿದ್ದು ಸತ್ತರೆ ಅದನ್ನು ತೆಗೆದು ಗುಂಡಿ ಹಾಕಿ ಮಣ್ಣು ಮಾಡಬೇಕಾದರೆ ಸ್ಥಳೀಯ ಆಡಳಿತದವರೇ ಬರಬೇಕು ಅಥವಾ ಸ್ಥಳೀಯ ಆಡಳಿತಕ್ಕೆ ಸಾರ್ವಜನಿಕರು ಕರೆ ಮಾಡಿ ತಿಳಿಸುತ್ತಾರೆ. ಅ ಬಳಿಕ ಯಾರಲ್ಲೋ ದಮ್ಮಯ್ಯ ಹಾಕಿ ಪ್ರಾಣಿಯನ್ನು ಗುಂಡಿಗೆ ಹಾಕಿ ಮಣ್ಣು ಮಾಡುತ್ತಾರೆ. ನಗರದಲ್ಲಾದರೆ ನಗರಸಭೆಯವರು ಬರಲಿ ಗ್ರಾಮೀಣ ಭಾಗದಲ್ಲಾದರೆ ಪಂಚಾಯತಿನವರು ಬರಲಿ ಎಂದು ಕಾಯುವವರೇ ಅಧಿಕ. ಇಂಥದರ ನಡುವೆ ಕುಂಬ್ರದಲ್ಲಿ ರಸ್ತೆ ಬದಿಯಲ್ಲಿ ಸತ್ತು ಬಿದ್ದ ನಾಯಿಯೊಂದನ್ನು ಗುಂಡಿ ತೆಗೆದು ಮುಚ್ಚುವ ಮೂಲಕ ಕುಂಬ್ರ ಶಾಲೆಯ ಶಿಕ್ಷಕೋರ್ವರು ಗ್ರಾಮದಲ್ಲಿ ಸುದ್ದಿಯಾಗಿದ್ದಾರೆ.


ಮಾಣಿ- ಮೈಸೂರು ರಾ. ಹೆದ್ದಾರಿಯ ಕುಂಬ್ರ ಪೇಟೆಯ ಬಳಿ ಶುಕ್ರವಾರ (ಆ.21) ರಂದು ರಾತ್ರಿ ಬೀದಿ ನಾಯಿಯೊಂದು ಯಾವುದೋ ವಾಹನ ಡಿಕ್ಕಿ ಹೊಡೆದು ಸತ್ತು ರಸ್ತೆ ಬದಿಯಲ್ಲೇ ಇತ್ತು. ಯಾರೂ ಅದನ್ನು ತೆಗೆಯುವ ಅಥವಾ ಗುಂಡಿಗೆ ಹಾಕುವ ಗೋಜಿಗೆ ಹೋಗಿರಲಿಲ್ಲ. ಕುಂಬ್ರದ ಅಲ್‌ರಾಯ ಹೊಟೇಲ್‌ಗೆ ಬಂದ ಕುಂಬ್ರ ಕೆಪಿಎಸ್ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಪ್ಪ ರಾಥೋಡ್ ಬಳಿ ಹೊಟೇಲ್ ಮಾಲಕ ರಫೀಕ್ ಅಲ್‌ರಾಯ ರವರು ವಿಷಯ ತಿಳಿಸುತ್ತಾರೆ. ಕೂಡಲೇ ಕಾರ್ಯಪೃವೃತ್ತರಾದ ಶಿಕ್ಷಕ ಅವರು ಬರಲಿ ಇವರು ಬರಲಿ ಎಂದು ಕಾಯುವುದು ಸರಿಯಲ್ಲ. ಸಂಜೆ ವೇಳೆ ನಾಯಿ ಕೊಳೆತು ವಾಸನೆ ಹೊಡೆಯಬಹುದು ನಾನೇ ಅದನ್ನು ಗುಂಡಿಗೆ ಹಾಕುವುದಾಗಿ ಹೇಳಿ ರಸ್ತೆ ಬದಿಯಲ್ಲೇ ಗುಂಡಿ ತೆಗೆದು ಮಣ್ಣು ಮಾಡಿದ್ದಾರೆ. ಶಿಕ್ಷಕನ ಈ ಸಮಾಜ ಸೇವೆಯನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ. ಈ ಬಗ್ಗೆ ಶಿಕ್ಷಕ ಶಿವಪ್ಪ ರಾಥೋಡ್ ರವರಲ್ಲಿ `ಸುದ್ದಿ’ ಮಾತನಾಡಿಸಿದಾಗ ಶಿಕ್ಷಕ ಕೇವಲ ಮಕ್ಕಳಿಗೆ ಮತ್ರ ಪಾಠಮಾಡುವವರಾಗಬಾರದು ಸಮಾಜಕ್ಕೂ ಅವರು ಏನಾದರೂ ಸೇವೆ ಮಾಡುವ ಮೂಲಕ ಮಾದರಿಯಾಗಬೇಕು ಅಷ್ಟೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಶಿಕ್ಷಕ ಶಿವಪ್ಪ ರಾಥೋಡ್‌ರವರ ಸೇವೆ ಗ್ರಾಮಸ್ಥರಿಗೆ ಮಾದರಿಯಾಗಿರುವುದು ಮಾತ್ರ ಸತ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.