ಕೂರ್ನಡ್ಕ: ಎಸ್‌.ಕೆ.ಎಸ್.ಎಸ್.ಎಫ್‌ ವತಿಯಿಂದ ಸ್ವಾತಂತ್ರ್ಯೋತ್ಸವ ಮತ್ತು ಗಿಡ ನೆಡುವ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಕೂರ್ನಡ್ಕ ಎಸ್‌.ಕೆ.ಎಸ್.ಎಸ್.ಎಫ್‌ ಶಾಖೆಯ ವತಿಯಿಂದ  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಸ್ತೆ ವಿಭಾಜಕದಲ್ಲಿ “ಸುಂದರ ಪುತ್ತೂರು” ಎಂಬ ಪರಿಕಲ್ಪನೆಯೊಂದಿಗೆ ಹೂವಿನ ಗಿಡ ನೆಡುವ ಕಾರ್ಯಕ್ರಮ ಆ.15ರಂದು ಕೂರ್ನಡ್ಕದಲ್ಲಿ ನಡೆಯಿತು.  ಧ್ವಜಾರೋಹಣವನ್ನು ಎಸ್‌.ಕೆ.ಎಸ್.ಎಸ್.ಎಫ್‌ ಕೂರ್ನಡ್ಕ ಶಾಖೆಯ ಅಧ್ಯಕ್ಷ ಅಬೂಬಕ್ಕರ್ ರವರು ನೆರವೇರಿಸಿದರು. 
ಬಳಿಕ  ಕಾವೇರಿಕಟ್ಟೆಯಿಂದ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಮರೀಲ್ ವರೆಗೆ ರಸ್ತೆ ವಿಭಾಜಕದಲ್ಲಿ ಹೂವಿನ ಗಿಡ ನೆಡುವ ಕಾರ್ಯಕ್ರಮವನ್ನು ಪುತ್ತೂರು ನಗರಸಭೆಯ ಪೌರಾಯುಕ್ತೆ ರೂಪ ಶೆಟ್ಟಿ ಯವರು ಉದ್ಘಾಟಿಸಿ ಮಾತನಾಡಿದ ಅವರು 74ನೆಯ ಸ್ವಾತಂತ್ರ್ಯ ದಿನಾಚರನೆದಂದು ಹಮ್ಮಿಕೊಂಡಂತಹ ಈ ಕಾರ್ಯಕ್ರಮ ಬಹಳ ಮಹತ್ವಪೂರ್ಣವಾಗಿದೆ,  ಮಹಾತ್ಮ ಗಾಂಧೀಜಿಯವರ ಸ್ವಚ್ಛ-ಸುಂದರ ಭಾರತ ನಿರ್ಮಾಣದ ಪರಿಕಲ್ಪನೆಯಾಗಿದೆ, ಎಸ್‌.ಕೆ.ಎಸ್.ಎಸ್.ಎಫ್‌  ಕೂರ್ನಡ್ಕ ಶಾಖೆಯ ಈ ಕಾರ್ಯವನ್ನು ಅವರು ಶ್ಲಾಘಿಸಿದರು.

 ಪುತ್ತೂರು ನಗರಸಭೆಯ ಸದಸ್ಯರಾದ ಯೂಸುಫ್ ಡ್ರೀಮ್ಸ್,  ಬಾಲಚಂದ್ರ ಮರೀಲ್, ಪೀರ್ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷ ಕೆ ಎಚ್ ಕಾಸಿಂ, ಎಸ್‌.ಕೆ.ಎಸ್.ಎಸ್.ಎಫ್‌ ಕೂರ್ನಡ್ಕ ಶಾಖೆಯ ಅಧ್ಯಕ್ಷ ಅಬೂಬಕ್ಕರ್, ಪರಿಸರ ಇಲಾಖೆ ಅಧಿಕಾರಿ ಗುರುಪ್ರಸಾದ್, ಎಸ್‌.ಕೆ.ಎಸ್.ಎಸ್.ಎಫ್‌ ಮುಕ್ವೆ ವಲಯ ಅಧ್ಯಕ್ಷ ನಹೀಮ್ ಫೈಝಿ, ಮುಕ್ವೆ ವಲಯ ಕಾರ್ಯದರ್ಶಿ ಅಶ್ರಫ್ ಮುಖ್ವೆ, ಎಸ್‌.ಕೆ.ಎಸ್.ಎಸ್.ಎಫ್‌  ಕೂರ್ನಡ್ಕ ಶಾಖೆಯ ಉಪಾಧ್ಯಕ್ಷ ಹಾಫಿಲ್ ಕೆ ಎಂ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸಾಮು, ಪದಾಧಿಕಾರಿಗಳಾದ ಹಮೀದ್ ಕೆ.ಎ, ಫಾರೂಕ್ ಎಲ್ ಟಿ, ಝುಬೈರ್ ಪಿ ಕೆ, ಅಬ್ದುಲ್ಲ ಕೆ ಎಂ, ಹಂಝ ಚಾಯ್ಸ್,  ಆಸಿಫ್ ಯುನಿಟಿ, ಡಿ ಕೆ ಅಬ್ದುಲ್ ರಹಿಮಾನ್, ಮಹಮ್ಮದ್ ಮುಸ್ಲಿಯಾರ್, ಫಾರೂಕ್ ಕೆಮ್ಮಿಂಜೆ, ಅವಾನ್ ಕೆ ಎಂ,  ಶಿಹಾಬುದ್ದೀನ್, ಅಫ್ರಾನ್ ಗ್ರ್ಯಾಂಡ್ ಲೆನ್ಸ್, ಫಾರೂಕ್ ಮರೀಲ್, ಫಾರೂಕ್ ಸಫರ್, ಹಸೈನಾರ್ ಡ್ರೀಮ್ಸ್, ಸುಲೈಮಾನ್ ಗಲ್ಫ್ ಟೂರ್ಸ್, ನೌಫಲ್ ಪುರುಷರಕಟ್ಟೆ, ಉಮ್ಮರ್ ಡ್ರೀಮ್ಸ್, ಆಸಿಫ್ ಯುನಿಟಿ, ಜಲೀಲ್ ಕೆಮ್ಮಿಂಜೆ, ರಶೀದ್ ಕೆಮ್ಮಿಂಜೆ, ಅಕ್ರಮ್ ಬೈತಡ್ಕ, ರಮೀಜ್ ಆದಂ, ವಹಿಶಿ ಅಬ್ಬಾಸ್, ಮಹಮ್ಮದ್ ಅಬ್ದುಲ್ಲ, ಮುಶ್ರಿಫ್, ಬಿಲಾಲ್, ಶಫೀಕ್ ಆದಂ, ಅಬ್ದುಲ್ ಬಶೀರ್, ಸಿಮಾಕ್ ಕೆ ಎಂ, ಶಮ್ಮಾಸ್, ಆರಿಫ್ ಡಿ ಕೆ, ಇಸ್ಮಾಯಿಲ್ ಸಂಜಯ ನಗರ, ಶಬೀರ್ ಸಾಮೆತಡ್ಕ ಮತ್ತಿತರು ಉಪಸ್ಥಿತರಿದ್ದರು. ಖಾದರ್ ಕೆ ಎಂ ಕಾರ್ಯಕ್ರಮ ನಿರೂಪಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.