ಮಹಾಲಿಂಗೇಶ್ವರ ದೇವಸ್ಥಾನ ವಠಾರ ಸಮಿತಿಯ 54ನೇ ವರ್ಷದ ಗಣೇಶೋತ್ಸವ – ಸಂಜೆ ದೇವಳದ ಗದ್ದೆಯಲ್ಲಿ ಜಲಸ್ತಂಭನದೊಂದಿಗೆ ಸಂಪನ್ನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಲ್ಪಡುವ ಶ್ರೀ ಗಣೇಶನ ವಿಗ್ರಹದ ಪೂಜೆಯು ಈ ಭಾರಿ ಕೋವಿಡ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಮಾಡದೆ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಸಾಂಕೇತಿಕವಾಗಿ ಸಂಪ್ರದಾಯಕ್ಕೆ ಕುಂದು ಬಾರದಂತೆ ಆಚರಣೆ ಮಾಡಲಾಯಿತು.
ಪ್ರತಿ ವರ್ಷ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳೊಂದಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾಲ್ಕು ದಿನಗಳು ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶೋತ್ಸವ ನಡೆಯುತ್ತಿದ್ದು, ನಾಲ್ಕನೇ ದಿನ ಆಕರ್ಷಣೆಯ ಸ್ತಬ್ದ ಚಿತ್ರಗಳೊಂದಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆಯುತ್ತಿತ್ತು. ಆದರೆ ಕೋವಿಡ್ ನಿಯಮಾವಳಿಯಂತೆ ಈ ವರ್ಷ ಸಾಂಕೇತಿಕವಾಗಿ ಆಚರಣೆಗೆ ಸಂಬಂಧಿಸಿ 2 ಅಡಿ ಎತ್ತರದ ಗಣಪತಿ ವಿಗ್ರಹದ ಪ್ರತಿಷ್ಠೆಯನ್ನು ಬೆಳಿಗ್ಗೆ ಕುಂಟಾರು ವೇ ಮೂ ಗುರುಪ್ರಸಾದ್ ತಂತ್ರಿಯವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ವರ್ಷಂಪ್ರತಿಯಂತೆ ಭಗವಧ್ವಜಾರೋಹಣ ಕಾರ್ಯಕ್ರಮವನ್ನು ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಇಂದಾಜೆ ಗಣೇಶ್ ನಾಯಕ್ ಅವರು ನೆರವೇರಿಸಿ, ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ರಂಗಪೂಜೆ ನಡೆಯಿತು. ವಂದೇ ಮಾತರಂ ಪ್ರಾರ್ಥಿಸಿ ಭಗವಧ್ವಜವನ್ನು ಅವರೋಹಣಗೊಳಿಸಿದ ಬಳಿಕ ವಿಸರ್ಜನಾ ಪೂಜೆ ನಡೆದು ಶ್ರೀ ಗಣೇಶನ ವಿಗ್ರಹವನ್ನು ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ ಮತ್ತು ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮತ್ತು ದಯಾನಂದ ಅವರ ಹೆಗಲಿಗೆ ವಹಿಸಿಕೊಟ್ಟರು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿ ಶ್ರೀ ದೇವರ ವಿಗ್ರಹ ಜಲಸ್ತಂಭನಗೊಳಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಡಾ. ಎಮ್.ಕೆ.ಪ್ರಸಾದ್, ಕೋಶಾಧಿಕಾರಿ ಶ್ರೀನಿವಾಸ್, ನೀಲಂತ್ ಬೊಳುವಾರು ಸೇರಿದಂತೆ ಪದಾಧಿಕಾರಿಗಳು, ಸಮಿತಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.