Breaking News

ಹಿರೇಬಂಡಾಡಿಯಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಿಡುಗಡೆ, ಮಾಹಿತಿ ಕಾರ್‍ಯಕ್ರಮ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಮತ್ತು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಉಪ್ಪಿನಂಗಡಿ ಜಂಟಿ ಆಶ್ರಯದಲ್ಲಿ ರೈತರು ತಮ್ಮ ಜಮೀನಿನ ಸರ್ವೆ ನಂಬ್ರ ಮತ್ತು ವಿಸ್ತೀರ್ಣವಾರು ತಮ್ಮ ಜಾಗದಲ್ಲಿ ಬೆಳೆದ ಬೆಳೆಗಳ ಕುರಿತ ಮಾಹಿತಿಯನ್ನು ಮೊಬೈಲ್ ತಂತ್ರಾಂಶದ ಮೂಲಕ ಜಿ.ಪಿ.ಎಸ್. ಛಾಯಚಿತ್ರದ ಸಹಿತ ದಾಖಲಿಸುವ ಮೊಬೈಲ್ ಆಪ್ ಬಿಡುಗಡೆ ಮತ್ತು ಈ ಬಗ್ಗೆ ಮಾಹಿತಿ ಕಾರ್‍ಯಕ್ರಮ ಆ.21ರಂದು ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ ಸ್ವತಃ ರೈತರೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನಿಖರವಾಗಿ ಸಮೀಕ್ಷೆ ಮಾಡುವ ಒಂದು ಉತ್ತಮ ಯೋಜನೆ ಆಗಿದ್ದು, ಭವಿಷ್ಯದಲ್ಲಿ ರೈತರಿಗೆ ಇತರೇ ಸವಲತ್ತುಗಳನ್ನು ಪಡೆಯಲು ಇದು ಬಹಳ ಪ್ರಯೋಜನಕಾರಿಯಾಗಿದೆ ಎಂದರು.

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಕಾಯರ್‌ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಕಾರ್‍ಯಕ್ರಮ ಇದೇ ಸಂದರ್ಭದಲ್ಲಿ ಉಪ್ಪಿನಂಗಡಿ ಕೇಂದ್ರ ಕಚೇರಿಯಲ್ಲಿ, ಬಜತ್ತೂರು, ಕಾಂಚನ, ಪೆರಿಯಡ್ಕ, ಇಳಂತಿಲ, ೩೪-ನೆಕ್ಕಿಲಾಡಿಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದು, ಸಹಕಾರಿ ಸಂಘದ ಸುಮಾರು 2 ಸಾವಿರ ರೈತರಿಗೆ ಇದರ ಮಾಹಿತಿ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ವೇದಿಕೆಯಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಧರ್ಮಪಾಲ ಗೌಡ, ಸಹಕಾರಿ ಸಂಘದ ನಿರ್ದೇಶಕರುಗಳಾದ ಯಶವಂತ ಜಿ., ದಯಾನಂದ ಸರೋಳಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಚಂದ್ರಾವತಿ ನೆಹರೂತೋಟ, ಉಪ್ಪಿನಂಗಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಭರಮಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೌಕತ್ ಆಲಿ, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ವಿಜಯ ವಿಕ್ರಂ ಉಪಸ್ಥಿತರಿದ್ದರು. ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಹಾಯಕ ಮೆನೇಜರ್ ಪ್ರವೀಣ್ ಆಳ್ವ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.