ಕೊಯಿಲ – ರಾಮಕುಂಜ ಶ್ರೀ ಮಹಾಗಣಪತಿ ಸೇವಾ ಸಮಿತಿ ಇದರಆಶ್ರಯದಲ್ಲಿ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಆಲಂಕಾರು : ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊಯಿಲ- ರಾಮಕುಂಜ ಇದರ ಆಶ್ರಯದಲ್ಲಿ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಗಣೇಶನಗರದಲ್ಲಿ ಅ.22 ರಂದು ಶನಿವಾರ ನಡೆಯಿತು. ಕೊವೀಡ್ – 19 ಮಹಾಮಾರಿ ಯಿಂದಾಗಿ ಸರಕಾರದ ಅದೇಶವನ್ನು ಪಾಲಿಸಿಕೊಂಡು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು . ಬೆಳಿಗ್ಗೆ 7ಗಂಟೆಗೆ ಮಣ್ಣಿನಿಂದ ತಯಾರಿಸಲ್ಪಟ್ಟ ರಾಸಯನಿಕ ಬಳಸದ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠೆ ಮಾಡಲಾಯಿತು ನಂತರ ಶ್ರೀಮಹಾಗಣಪತಿಹೋಮ ನಡೆದು ಮಹಾಪೂಜೆ ಯಾಗಿ , ಆನಂತರ ಶ್ರೀ ಮಹಾಗಣಪತಿ ದೇವರ ಮೂರ್ತಿಯನ್ನು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಬೀದಿಯಲ್ಲಿರುವ ಭಾವಿಗೆ ಜಲಸ್ತಂಭನ ಮಾಡಲಾಯಿತು. ಅಗಮಿಸಿದ ಹಲವು ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದರು.ಈ ಸಂಧರ್ಭದಲ್ಲಿ ಸಮಿತಿಯ ಅದ್ಯಕ್ಷರಾದ ದಿವಾಕರ ರಾವ್ ಪಂಚವಟಿ, ಸಂಚಾಲಕರಾದ ಗುರುಪ್ರಸಾದ ರಾಮಕುಂಜ, ಪ್ರಮುಖರಾದ ಧರ್ಮಪಾಲ ರಾವ್ ಕಜೆ, ಲಕ್ಷೀ೬ನಾರಾಯಣ ರಾವ್ ಅತೂರು ,ರಾಜೇಶ್ ಶೆಟ್ಟಿ ಸಂಪ್ಯಾಡಿ ,ಸದಾಶಿವ ಶೆಟ್ಟಿ ಮಾರಂಗ ,ಬಾಲಾಜಿ ಶೆಟ್ಟಿ ಕುಂಡಾಜೆ, ಪದ್ಮಪ್ಪಗೌಡ ಕೆದುಂಬಾಡಿ ,ಪೂವಪ್ಪ ಗೌಡ ಸಂಪ್ಯಾಡಿ, ಪ್ರಕಾಶ್ ಭಂಡಾರಿ ಕೆದಿಲ, ಮುತ್ತಪ್ಪ ಪೂಜಾರಿ ಸೌಭಾಗ್ಯ ಇಂಡಸ್ಟ್ರೀಸ್, ಪೂವಪ್ಪ ಕುಲಾಲ್ ಕಂಪ, ಪ್ರಶಾಂತ ಆರ್.ಕೆ,ಶರತ್ ಕೆದಿಲ, ಪದ್ಮನಾಭ ಹೆಂತಾರು,ಹರೀಶ ಬರಮೇಲು, ಎ.ಎಸ್ ಕುಲಾಲ್ ಸೇರಿದಂತೆ ಹಲವು ಮಂದಿ ಪ್ರಮುಖರು ಹಾಗುಭಕ್ತಾದಿಗಳು 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೊಂಡು,ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.