ಕಾವು: ಹಡೀಲು ಗದ್ದೆಯಲ್ಲಿ ಹೇಮನಾಥ ಶೆಟ್ಟಿ ಕುಟುಂಬದಿಂದ ನಾಟಿ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
  • ಮಣ್ಣಿನ ಮೇಲೆ ಪ್ರೀತಿ ಇದ್ದರೆ ಅದು ನಮ್ಮನ್ನು ಬೆಳೆಸುತ್ತದೆ: ಮುರಳೀಧರ್ ಗೌಡ


ಪುತ್ತೂರು: ಮಣ್ಣಿನ ಮೇಲೆ ಪ್ರೀತಿ ಇದ್ದರೆ ಮತ್ರ ನಾವು ಮೈಮೇಲೆ ಮಣ್ಣನ್ನು ಮೆತ್ತಿಕೊಳ್ಳಲು ಇಷ್ಟಪಡುತ್ತೇವೆ, ಮಣ್ಣನ್ನು ಪ್ರೀತಿಸಿದವರನ್ನು ಅದು ಎಂದಿಗೂ ಕೈ ಬಿಟ್ಟಿಲ್ಲ, ಬಿಡುವುದೂ ಇಲ್ಲ ಎಂದು ಕಿಸಾನ್ ಕಾಂಗ್ರೆಸ್ ಪುತ್ತೂರು ಘಟಕದ ಅಧ್ಯಕ್ಷ ಮುರಳೀದರ್ ಗೌಡ ಹೇಳಿದರು. ಅವರು ಕಾವಿನಲ್ಲು ಆ. ೨೩ ರಂದು ನಡೆದ ಗದ್ದೆ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ನಾಲ್ಕೈದು ವರ್ಷಗಳಿಂದ ಹಡೀಲು ಬಿದ್ದ ಗದ್ದೆಯಲ್ಲಿ ಮತ್ತೆ ಭತ್ತ ಬೇಸಯ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಹೆಚ್ಚಿನ ಶ್ರಮ ಅಗತ್ಯವಿದೆ, ಯಂತ್ರಗಳು ಇದ್ದರೂ ಮಾಡಿಸುವಾತಗೆ ಕೃಷಿಯ ಮೇಲೆ ಪ್ರೀತಯೂ ಇರಬೇಕಾಗುತ್ತದೆ. ಮಣ್ಣಿನ ಮೇಲೆ ಪ್ರೀತಿ ಇಲ್ಲದವರಿಗೆ ಕೃಷಿಯಲ್ಲಿ ಉತ್ಸಾಹ ಮೂಡಲು ಸಾಧ್ಯವಿಲ್ಲ. ಓರ್ವ ಶಿಕ್ಷಕನಾಗಿ ಮಕ್ಕಳಿಗೆ ಕ್ರೀಡಾ ತಬೇತಿಯನ್ನು ನೀಡಬೇಕಾದ ಶಿಕ್ಷಕ ಕೆಸರನ್ನು ಮೈಮೇಲೆ ಮೆತ್ತಿಕೊಂಡು ಭತ್ತ ಕೃಷಿ ಮಾಡಲು ಹೊರಟಿರುವುದು ದೊಡ್ಡ ಸಾಧನೆಯಾಗಿದೆ. ಕೃಷಿ ಕುಟುಂಬದ ಹಿನ್ನೆಲೆಯಿರುವ ಕಾವು ಹೇಮನಾಥ ಶೆಟ್ಟಿ ಕುಟುಂಬವನ್ನು ಈ ಮಹತ್ಕಾರ್ಯ ಮಾಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯಲ್ಲಿ ಹಡೀಲು ಬಿದ್ದಿರುವ ಎಲ್ಲಾ ಗದ್ದೆಗಳು ಮತ್ತೆ ಮರಜೀವ ಪಡೆಯಲು ಈ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಹೇಳಿದರು.

ಹೊಸ ತಳಿಯಲ್ಲೇ ನಾಟಿ ಮಾಡಲಾಗಿದೆ: ಮೋನಪ್ಪ ಪೂಜಾರಿ
ಎಂ೪ ಎಂಬ ಹೊಸ ತಳಿಯನ್ನು ಇಲ್ಲಿ ನಾಟಿ ಮಾಡಲಾಗಿದೆ. ಒಂದು ಗಿಡದಲ್ಲಿ ೬೦ ಭತ್ತದ ಗೊಂಚಲು ಬರುವ ಈ ತಳಿ ಸಮೃದ್ದವಾಗಿ ಬೆಳೆದು ಬರಲಿದೆ. ಸ್ಲರಿ ಯನ್ನು ಬಳಸಿ ಸಾವಯವ ಶ್ರೀ ಕೃಷಿ ಪದ್ದತಿಯಂತೆ ಬೇಸಾಯ ಮಾಡಿರುವುದು ಹೊಸ ಪ್ರಯೋಗವಾಗಿದೆ ಎಂದು ಜಿಲ್ಲಾ ಕೃಷಿ ಪ್ರಶಸ್ತಿ ವಿಜೇತ ಪ್ರಗತಿಪರ ಭತ್ತ ಕೃಷಿಕ ಮೋನಪ್ಪ ಪೂಜಾರಿ ಕೆರೆಮಾರು ಹೇಳಿದರು. ಒಂದು ಎಕರೆ ಗದ್ದೆಯಲ್ಲಿ ಪೂರ್ಣವಾಗಿ ಭತ್ತ ನಾಟಮಾಡಲಾಗಿದೆ. ಜಿಲ್ಲೆಯಲ್ಲಿ ಅಲ್ಲಲ್ಲಿ ಹಡೀಲು ಬಿದ್ದಿರುವ ನೂರಾರು ಎಕ್ರೆ ಗದ್ದೆಗೆ ಮರು ಜೀವ ನೀಡುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ. ಕಾವಿನಲ್ಲಿ ಪ್ರೇಮನಾಥ ಶೆಟ್ಟಿ ಯವರ ಕಾರ್ಯ ಜಿಲ್ಲೆಗೇ ಮಾದರಿಯಾಗಬೇಕು. ಮುಂದಿನ ಕೆಲವೇ ತಿಂಗಳಲ್ಲಿ ಭತ್ತ ಕೊಯ್ಯುವ ವೇಳೆ ಸಂಭ್ರಮವನ್ನು ಆಚರಿಸಬೇಕಿದೆ. ಹೇಮನಾಥ ಶೆಟ್ಟಿಯವರ ಕುಟುಂಬದ ಪ್ರತೀಯೊಬ್ಬರೂ ಈ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅವರ ಕುಟುಂಬಕ್ಕೆ ಕೃಷಿಯ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಇಕ್ಬಾಲ್ ಬಾಳಿಲ ಮಾತನಾಡಿ ಭತ್ತ ಹೇಗೆ ಬೆಳೆಯುವುದು ಎಂಬ ಕನಿಷ್ಟ ಮಾಹಿತಿ ಇಲ್ಲದವರೂ ನಮ್ಮೊಳಗಿದ್ದಾರೆ, ಅಕ್ಕಿ ಹೇಗೆ ಭತ್ತದಲ್ಲಿ ಉತ್ಪತ್ತಿಯಾಗುತ್ತದೆ ಎಂಬ ಮಾಹಿತಿ ಯುವ ಸಮೂಹಕ್ಕೆ ಇಲ್ಲದೇ ಇರುವ ಈ ಕಾಲದಲ್ಲಿ ವಿದ್ಯಾವಂತರನ್ನೇ ಹೊಂದಿರುವ ಕಾವು ಹೇಮನಾಥ ಶೆಟ್ಟಿ ಕುಟುಂಬ ಹಳೆಯ ಸಂಪ್ರದಾಯಿಕ ಶೈಲಿಯಲ್ಲಿ ಗದ್ದೆಗೆ ಮರು ಜೀವ ನೀಡಿದ್ದು ಅಭಿನಂದನಾರ್ಹ ಎಂದು ಹೇಳಿದರು.


ಕೊರೊನಾ ಪ್ರೇರಣೆಯಾಯಿತು- ಹೇಮನಾಥ ಶೆಟ್ಟಿ
ಕಾವು ಹೇಮನಾಥ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಸಹೋದರ ಪ್ರೇಮನಾಥ ಶೆಟ್ಟಿ ಸೇರಿದಂತೆ ನಮ್ಮ ಎಲ್ಲಾ ಕುಟುಂಬದ ಸದಸ್ಯರು ಕೊರೊನಾ ಲಾಕ್ ಡೌನ್ ವೇಳೆ ಕಾವು ಮನೆಯಲ್ಲೇ ಕಾಲ ಕಳೆಯುತ್ತಿದ್ದೆವು. ರಜಾ ದಿನದಲ್ಲಿ ಮನೆಯಲ್ಲಿ ತರಕಾರಿ ಕೃಷಿ ಮತ್ತು ಅಡಕೆ ಕೃಷಿಯತ್ತ ವಿಶೇಷ ಕಾಳಜಿ ವಹಿಸಿ ತರಕಾರಿ ಮತ್ತು ಅಡಕೆ ಕೃಷಿಯನ್ನು ಉತ್ತಮವಾಗಿ ಬೆಳೆಸಿದ ಪ್ರೇಮನಾಥ ಶೆಟ್ಟಿಗೆ ಭತ್ತ ಕೃಷಿ ಮಾಡಬೇಕೆಂಬ ಒಲವು ಉಂಟಾಗಿ ಹಡೀಲು ಬಿದ್ದ ಗದ್ದೆಯನ್ನೇ ಆಯ್ಕೆ ಮಾಡಿದ್ದಾರೆ. ಸಣ್ಣ ಪ್ರಾಯದಲ್ಲಿ ಭತ್ತ ಕೃಷಿ ಮಾಡಿದ ಸಣ್ಣ ಅನುಭವವೂ ಅವರಿಗಿದೆ. ಪ್ರೇಮನಾಥ್ ಜೊತೆ ನಮ್ಮ ಕುಟುಂಬದ ಎಲ್ಲಾ ಹಿರಿಯರು, ಕಿರಿಯರು ಸೇರಿಕೊಂಡಿದ್ದೇವೆ. ಮಕ್ಕಳೂ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಕಾವು ಲಯನ್ಸ್ ಕ್ಲಬ್ ಸಹಕಾರ ನೀಡಿದೆ. ಶ್ರೀರಾಮಕೃಷ್ಣ ಪ್ರೌಢ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, ಸ್ಥಳೀಯ ಕೃಷಿಕರ ತಂಡ, ಊರಿನ ನಾಗರಿಕರು ಎಲ್ಲರೂ ನಮ್ಮ ಕುಟುಂಬದ ಜೊತೆ ಕೈ ಜೋಡಿಸಿದ್ದು ಇದಕ್ಕಾಗಿ ಎಲ್ಲರನ್ನೂ ಆಬಿನಂದಿಸುವುದಾಗಿ ಹೇಳಿದರು.

ಭತ್ತ ಕೃಷಿಯು ಪೂರ್ಣವಾಗಿ ಸಾವಯವದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಕಾವು ದಿವ್ಯನಾಥ ಶೆಟ್ಟಿಯವರು ಸ್ಲರಿಯನ್ನು ಬಳಸಿದ್ದಾರೆ. ಈಗಾಗಲೇ ಸ್ಲರಿಯನ್ನು ಬಳಸಿ ಅಡಕೆ ಕೃಷಿಯನ್ನು ಮಾಡಿ ಯಶಸ್ವಿ ಕಂಡಿರುವ ಇವರು ಭತ್ತ ಕೃಷಿಗೂ ಬಳಸಿ ಹೊಸ ಪ್ರಯೋಗವನ್ನು ಮಾಡಿದ್ದಾರೆ.

ಅಡಿಕೆ, ತೆಂಗಿನ ವಿತರಣೆ
ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಅಡಿಕೆ ಹಾಗೂ ತೆಂಗಿನ ಗಿಡವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಕಾವು ಹೇಮನಾಥ ಶೆಟ್ಟಿಯವರು ಗದ್ದೆ ನಾಟಿ ಉತ್ಸವದ ಅಂಗವಾಗಿ ನೂರಾರು ಗಿಡಗಳನ್ನು ಉಚಿತವಾಗಿ ವಿತರಿಸಿದರು.

ಗದ್ದೆಯಲ್ಲಿ ಓಟ
ನಾಟಿ ಮಾಡುವ ಮುನ್ನ ಹೇಮನಾಥ ಶೆಟ್ಟಿ ಕುಟುಂಬದ ಸದಸ್ಯರು ಗದ್ದೆಯಲ್ಲಿ ಓಟ ಸ್ಪರ್ದೆಯನ್ನು ಏರ್ಪಡಿಸಿದ್ದರು. ಮಕ್ಕಳು, ಮಹಿಳೆಯರು ಎಲ್ಲರೂ ಗದ್ದೆ ಕೆಸರಿನಲ್ಲಿ ಓಡುವ ಮೂಲಕ ಖುಷಿ ಪಟ್ಟರು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹಲವು ವರ್ಷಗಳ ಬಳಿಕ ಕುಟುಂಬದ ಸದಸ್ಯರು ಇಂತಹದೊಂದು ಅಪರೂಪದ ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸಿದ್ದು ರೈತ ಗೀತೆಗೆ ಗದ್ದೆಯಲ್ಲೇ ಸಕತ್ತ್ ಡ್ಯಾನ್ಸ್ ಮಾಡಿದ್ದೂ ಕಂಡು ಬಂತು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಪ್ರೌಢ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿಯರಾದ ಸುನಿತಾ, ವೇದಾವತಿ, ಮೇಬಲ್, ವಿದ್ಯಾರ್ತಿಗಳಾದ ಜೇಷ್ಠ, ತನ್ವ, ಚೈತನ್ಯ, ಮೋಕ್ಷಿತಾ ಮತ್ತು ಚೇತನ್, ಉದ್ಯಮಿ ಅಬೂಬಕ್ಕರ್ ಮುಲಾರ್, ಮಾಜಿ ಗ್ರಾಪಂ ಸದಸ್ಯ ಮಹಮ್ಮದ್ ಕುಂಞಿ ಕಾವು, ಬೆಳ್ಳಿಪ್ಪಾಡಿ ಸದಾಶಿವ ರೈ, ಪುತ್ತೂರು ಕಾವು ಲಯನ್ಸ್ ಕ್ಲಬ್‌ನ ಸಿ ಎಚ್ ಅಝೀಝ್, ದೇವಣ್ಣ ರೈ ಮೊದಲ್ ಪಳ್ಳ, ಅಮ್ಮು ರೈ ಅಂಕೊತ್ತಿಮಾರ್, ರಮೇಶ್ ರೈ ಅಲೆಪ್ಪಾಡಿ, ಜಯಪ್ರಕಾಶ್ ರಐ ನೂಜಿಬೈಲು, ಕೆ ಸಿ ಅಶೋಕ್, ರವಿಪ್ರಸಾದ್ ಶೆಟ್ಟಿ ಬನ್ನೂರು, ಹನೀಫ್ ಪುಣ್ಚತ್ತಾರ್, ರಹಿಮಾನ್ ಸಂಪ್ಯ, ಪ್ರತಿಮಾ ಶೆಟ್ಟಿ ಬನ್ನೂರು, ಕಾವು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಜಾಗದ ಮಾಲಕರಾದ ಅಬ್ದುಲ್ಲ, ಇಬ್ರಾಹಿಂ, ರಹಿಮಾನ್, ಕಾವು ಕುಟುಂಬದ ಹಿರಿಯರಾದ ನಾರಾಯಣ ರೈ, ರಾಧಮ್ಮ, ಕಾರ್ಮಿಕರಾದ ಅಂಬೋಡಿ, ಬಾಬು, ಸಂಜೀವ ಮಾಡನ್ನೂರು, ಸುಂದರ, ಕೃಷ್ಣಪ್ಪ, ಸೌಮ್ಯ, ಕಾವು ಹೇಮನಾಥ ಶೆಟ್ಟಿ ಕುಟುಂಬದ ಸದಸ್ಯರುಗಳಾದ ಡಾ.ಜಯಂತಿ ಆರ್ ಶೆಟ್ಟಿ ಬೆಂಗಳೂರು, ನಾರಾಯಣ ರೈ ಮೈಸೂರು, ಗಣೇಶ್ ಶೆಟ್ಟಿ ಮುಂಬಯಿ, ಯೋಗಿಶ್ ರೈ ಗುಜರಾತ್, ಸಚಿನ್ ಶೆಟ್ಟಿ ಮಂಗಳೂರು, ಡಾ. ಮಿಥುನ್ ಶೆಟ್ಟಿ ಮುಂಬಯಿ, ಅರಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷೆ ಶಶಿಕಲಾ ಚೌಟ, ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ , ಕಾವು ಪ್ರೇಮನಾಥ ಶೆಟ್ಟಿ, ಕಿಶೋರಿ ಶೆಟ್ಟಿ, ಗಗನ್ ಶೆಟ್ಟಿ, ಡಾ. ಮೇಘನ್ ಶೆಟ್ಟಿ, ಡಾ. ಸೌಜನ್ ಚೌಟ ದಾವಣಗೆರೆ, ಭರತ್ ಶೆಟ್ಟಿ ಬೆಂಗಳೂರು, ವಾಸ್ತವಿ ಶೆಟ್ಟಿ , ರಂಜಿತಾ ಶೆಟ್ಟಿ, ಆರಾಧ್ಯ ಪಿ ಶೆಟ್ಟಿ, ಅನ್ವಿತ್, ಅಂಕಿತ್ ಮತ್ತು ಆಶಿಕಾ, ಯಶಸ್ ಮೊದಲಾದವರು ಉಪಸ್ಥಿತರಿದ್ದರು. ನೇಜಿ ನಾಟಿ ಮಾಡುವ ಮುನ್ನ ಗದ್ದೆಯಲ್ಲಿ ಹಣಪತಿ ಹಾಗೂ ನಾಗದೇವರ ಪೂಜೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.