ಕುದ್ಮಾರು ಶಾಂತಿಮೊಗರಿನಲ್ಲಿ 19ನೇ ವರ್ಷದ ಶ್ರೀ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುದ್ಮಾರು ಇದರ ವತಿಯಿಂದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ 19ನೇ ವರ್ಷದ ಶ್ರೀ ಗಣೇಶೋತ್ಸವವು ಆ 22ರಂದು ನಡೆಯಿತು. ಪುರೋಹಿತರಾದ ನರಸಿಂಹ ಪ್ರಸಾದ್ ಪಾಂಗಣ್ಣಾಯರು ಇವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಪಂಚಗವ್ಯ ಪುಣ್ಯಾಹ, ಶ್ರೀ ಗಣಪತಿ ವಿಗ್ರಹದ ಪ್ರತಿಷ್ಠಾಪನೆ, ಗಣಹೋಮ, ಮಂಗಳಾರತಿ, ಮಹಾಪೂಜೆ ನಡೆದು, ಬಳಿಕ ಗಣಪತಿ ವಿಗ್ರಹ ವಿಸರ್ಜನೆ ನಡೆಯಿತು. ಈ ಸಂದರ್ಭದಲ್ಲಿ ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು, ಕಾರ್ಯದರ್ಶಿ ಯಶೋಧರ ಕೆಡೆಂಜಿ, ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಭಟ್, ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಹೊಸವಕ್ಲು, ಕಾರ್ಯದರ್ಶಿ ಹರ್ಷಿತ್ ಕೂರ, ಚಂದಪ್ಪ ಗೌಡ ನೂಜಿ, ಜಯಂತ ನೂಜಿ ಸೇರಿದಂತೆ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.