ಪಾಟ್ರಕೋಡಿ ಎಸ್ಸೆಸ್ಸೆಫ್ ಶಾಖೆ ವತಿಯಿಂದ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
  • ಎಸ್ಸೆಸ್ಸೆಫ್ ಬ್ಲಡ್ ಸೈಬೊ ದ.ಕ ಜಿಲ್ಲೆ ಇದರ 173ನೇ ರಕ್ತದಾನ ಶಿಬಿರ
  • ಶಿಬಿರದಲ್ಲಿ ಒಟ್ಟು 84 ಮಂದಿಯಿಂದ ರಕ್ತದಾನ
  • ಏಳು ಮಂದಿ ಸಹೋದರರಿಂದ ರಕ್ತದಾನ ಮಾಡುವುದರೊಂದಿಗೆ ಮಾದರಿ ಕಾರ್ಯ!


ಪುತ್ತೂರು: ಎಸ್ಸೆಸ್ಸೆಫ್ ಬ್ಲಡ್ ಸೈಬೊ ದ.ಕ ಜಿಲ್ಲೆ ಇದರ 173 ಬ್ಲಡ್ ಕ್ಯಾಂಪ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಹಕಾರದೊಂದಿಗೆ ಎಸ್ಸೆಸ್ಸೆಫ್ ಪಾಟ್ರಕೋಡಿ ಶಾಖೆಯ ವತಿಯಿಂದ ಪಾಟ್ರಕೊಡಿ ತಾಜುಲ್ ಉಲಮಾ ಸುನ್ನಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು. 
ಪಾಟ್ರಕೋಡಿ ಎಸ್ ವೈ ಎಸ್ ಬ್ರಾಂಚ್ ಉಪಾದ್ಯಕ್ಷ ಖಾಸಿಂರವರು‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಪಾಟ್ರಕೋಡಿ ಬ್ರಾಂಚ್ ಸದಸ್ಯ ಬಿ.ಎಚ್. ಹೈದರ್ ಪಾಟ್ರಕೋಡಿ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಎಸ್ ವೈ ಎಸ್ ನಾಯಕ ಖಾದರ್ ಪೈಝಿ ಸಭಾ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬ್ಲಡ್ ಸೈಬೋ ಜಿಲ್ಲಾ ಕನ್ವೀನರ್ ಕರೀಂ ಕದ್ಕಾರ್, ಎಸ್ಸೆಸ್ಸೆಪ್ ಬ್ಲಡ್ ಸೈಬೊ ಜಿಲ್ಲಾ ವೈಸ್ ಚೇರ್ಮ್ಯಾನ್  ಪೈಝಲ್ ಝುಹುರಿ ಕಲ್ಲಗುಂಡಿ, ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್ಳರಿ, ಎಸ್ಸೆಸ್ಸೆಪ್ ಬ್ಲಡ್ ಸೈಬೋ ಡಿವಿಷನ್ ಉಸ್ತವಾರಿ ಹಾರಿಸ್ ಅಡ್ಕ, ರೆಡ್ ಕ್ರಾಸ್ ಸಂಚಾಲಕ ಪ್ರವೀಣ್ ಕುಮಾರ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅದ್ಯಕ್ಷ ಸ್ವಾದಿಖ್ ಮುಈನಿ ಗಡಿಯಾರ್  ಸಭೆನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕವನ್ನು ಪಡೆದ ಇಬ್ಬರು ಪ್ರತಿಭೆಗಳನ್ನು ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು. 

ಎಸ್ಸೆಸ್ಸೆಫ್ ಬ್ಲಡ್ ಸೈಬೊ ಈಸ್ಟ್ ಝೋನ್ ಉಸ್ತುವಾರಿ ಇಮ್ರಾನ್ ರೆಂಜಲಾಡಿ, ಡಿವಿಷನ್ ಬ್ಲಡ್ ಸೈಬೊ ಉಸ್ತುವಾರಿ ಶಿಹಾಬುರ್ರಹ್ಮಾನ್, ಡಿವಿಷನ್ ಉಪಾದ್ಯಕ್ಷ ಹಮೀದ್ ಸಖಾಪಿ, ಎಸ್ಸೆಸ್ಸೆಫ್ ಪಾಟ್ರಕೋಡಿ ಶಾಖೆಯ ಅಧ್ಯಕ್ಷ ಹಾರಿಸ್ ಮದನಿ, ಕಾರ್ಯದರ್ಶಿ ನಿಝಾಮ್,  ಕೋಶಾಧಿಕಾರಿ ನಿಶಾದ್, ಜುಮಾ ಮಸೀದಿ ಅಧ್ಯಕ್ಷ ಕೆ.ಎಸ್ ಯೂಸುಫ್, ಎಸ್‌ ವೈ ಎಸ್‌  ಕಾರ್ಯದರ್ಶಿ ಜಬ್ಬಾರ್, ಸಾಮಾಜಿಕ ಕಾರ್ಯಕರ್ತ ಬಿ.ಎ ಕಾದರ್, ಸಾಜಿದ್ ಪಾಟ್ರಕೋಡಿ, ರಫೀಖ್ ಮದನಿ,ಅಲಿ ಸಹದಿ, ಅನ್ವರ್ ಸಹದಿ, ನಝೀರ್ ಸಅದಿ ಮುಂತಾದವರು ಉಪಸ್ಥಿತರಿದ್ದರು. ಶಾಖಾ ಅಧ್ಯಕ್ಷ ಹಾರಿಸ್ ಮದನಿ ಪಾಟ್ರಕೋಡಿ ಸ್ವಾಗತಿಸಿ, ಖಲಂದರ್ ಶಾಫಿ ಎಂ ವಂದಿಸಿದರು.

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಬ್ಲಡ್ ಸೈಬೊ ಉಸ್ತುವಾರಿ ಕಲಂದರ್ ಪಾಟ್ರಕೋಡಿ ಸಹಿತ ಅವರ  ಏಳು ಮಂದಿ ಸಹೋದರರು ರಕ್ತದಾನ ಮಾಡುವೊದರೊಂದಿಗೆ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಶಿಬಿರದಲ್ಲಿ ಒಟ್ಟು 84  ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.