ʼಅಂಬರ ಮರ್ಲೆರ್ʼ ಹೊಸ ಕಾಮಿಡಿ ಶೋಗೆ ಆಡಿಷನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಂಗಕಲಾವಿದ ರಂಗ್‌ದ ರಾಜೆ ಸುಂದರ್ ರೈ ಮಂದಾರರವರ ನೇತೃತ್ವದಲ್ಲಿ ಸುದ್ದಿ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ ಅಂಬರ 🎭 ಮರ್ಲೆರ್ ಹೊಸ ಕಾಮಿಡಿ ಎಪಿಸೋಡ್‌ಗೆ ಕಲಾವಿದರ ಆಯ್ಕೆಗಾಗಿ ಆದಿತ್ಯವಾರ ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಆಡಿಷನ್ ನಡೆಯಿತು.ತೀರ್ಪುಗಾರರಾಗಿ ಚಲನಚಿತ್ರ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಂ.ಕೆ ಮಠ ಕಲಾವಿದರ ಆಯ್ಕೆ ನಡೆಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಂ.ಕೆ ಮಠ ಮಾತನಾಡಿ ಸುಂದರ್ ರೈ ಮಂದಾರ ನೇತೃತ್ವದಲ್ಲಿ ಸುದ್ದಿ ಚಾನೆಲ್ ನಲ್ಲಿ ಪ್ರಸಾರವಾಗಲಿರುವ ಅಂಬರೆ ಮರ್ಲೆರ್ ಕಾಮಿಡಿ ಎಪಿಸೋಡ್ ಹೊಸ ದಾಖಲೆ ಸೃಷ್ಠಿಸಲಿ,ಆಡಿಷನ್‌ನಲ್ಲಿ ಪ್ರತಿಭಾವಂತ ಕಲಾವಿದರು ಭಾಗವಹಿಸಿದ್ದು ಈ ಕಾಮಿಡಿ ಎಪಿಸೋಡ್ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿರಲಿದೆ ಎಂದರು.

ಈ ಸಂದರ್ಭದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶನ ಡಾ.ಯು.ಪಿ ಶಿವಾನಂದ,ರಾಜ್ಯ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಹಮೀದ್, ಸುದ್ದಿ ಬಿಡುಗಡೆ ಸಿ.ಇ.ಒ ಸೃಜನ್ ಉರುಬೈಲು, ರಂಗಕಲಾವಿದ ಸುಂದರ್ ರೈ ಮಂದಾರ, ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ, ಛಾಯಾಗ್ರಾಹಕ ಹರೀಶ್, ನಟ ಚಂದ್ರಹಾಸ ಮಾಣಿ, ಸುಧಾಕರ್ ಪಡೀಲ್, ಕುಶಾಲಪ್ಪ, ಚೈತ್ರಾ.ಡಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಕಳ, ಬೆಳ್ತಂಗಡಿ, ಸುಳ್ಯ, ಧರ್ಮಸ್ಥಳ, ಮಡಿಕೇರಿ, ಮಂಗಳೂರು, ಪುತ್ತೂರು ಮುಂತಾದ ಕಡೆಗಳಿಂದ ನೂರಕ್ಕೂ ಮಿಕ್ಕಿ ಕಲಾವಿದರು ಆಡಿಷನ್‌ನಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.