ಕುಂಬ್ರ: ಎನ್.ಆರ್ ಆಟೋ ಸೆಕ್ಯೂರ್ ವಾಹನಗಳ ಇನ್ಶೂರೆನ್ಸ್, ಹೊಗೆ ತಪಾಸಣಾ ಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಹಲವು ವರ್ಷಗಳಿಂದ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಶ್ರೀ ಮಂಗಳ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಿಂಗಳಾಡಿ ನಿಶಾಂತ್ ರೈ ಮಾಲಕತ್ವದ ಎನ್.ಆರ್.ಆಟೋ ಸೆಕ್ಯೂರ್‌ನ ಸಹ ಸಂಸ್ಥೆ ಎನ್.ಆರ್. ಆಟೋ ಸೆಕ್ಯೂರ್ ವಾಹನಗಳ ಇನ್ಶೂರೆನ್ಸ್ ಹಾಗೂ ಹೊಗೆ ತಪಾಸಣಾ ಕೇಂದ್ರ ಆ.24 ರಂದು ಕುಂಬ್ರ ಜನ್ಮ ಪೆಟ್ರೋಲ್ ಬಂಕ್ ಹತ್ತಿರ ಜನ್ಮ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಮಾಲಕರ ಹೆತ್ತವರಾದ ಸುಂದರಿ ವಿಶ್ವನಾಥ ರೈ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಡಾ| ಹರ್ಷ ಕುಮಾರ್ ರೈ ಮಾಡಾವು, ಕುಂಬ್ರ ಪಿಎಂಕೆ ಕನ್ಸ್‌ಸ್ಟ್ರಕ್ಷನ್‌ನ ಮಾಲಕ ಆಶಿಕ್‌ಉದ್ದಿನ್ ಅಖ್ತರ್, ಗಣೇಶ್ ರೈ ಮಿತ್ರಂಪಾಡಿ, ಜಯರಾಮ ರೈ ಮಿತ್ರಂಪಾಡಿ, ಪ್ರಸನ್ನ ರೈ ಮಜಲುಗದ್ದೆ, ದಯಾನಂದ ರೈ ಕೊಲ್ಲಾಜೆ, ಅಭಿಲಾಷ್ ಮಾಡ್ತಾ. ಅನಿಶ್ ತಿಂಗಳಾಡಿ, ಪದ್ಮನಾಭ ರೈ ಪಟ್ಟೆ, ರವಿಕುಮಾರ್ ರೈ ಮಾತೃಶ್ರೀ ಸೋಲಾರ್, ಗುತ್ತಿಗೆದಾರ ಅಶ್ರಫ್, ನಿತಿನ್ ರೈ, ಪವಿತ್ರ ನಿತಿನ್ ರೈ ,ಸುಭಾಷ್ ರೈ ಮಿತ್ತೋಡಿ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯಲ್ಲಿ ವಾಹನಗಳ ಹೊಗೆ ತಪಾಸಣೆ, ಎಲ್ಲಾ ಕಂಪೆನಿಯ ಇನ್ಸೂರೆನ್ಸ್‌ಗಳನ್ನು ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿ ಗ್ರಾಹಕರ ಸಹಕಾರ ಕೋರಿದರು.

ಎನ್.ಆರ್.ಆಟೋ ಸೆಕ್ಯೂರ್ ಸೆಂಟರ್‌ನಲ್ಲಿ ಯುನೈಟೆಡ್ ಮತ್ತು ಇನ್ನಿತರ ಕಂಪೆನಿಗಳ ಇನ್ಶೂರೆನ್ಸ್‌ಗಳನ್ನು ಅತೀ ಕಡಿಮೆ ದರದಲ್ಲಿ ಮಾಡಿಕೊಡುವ ವ್ಯವಸ್ಥೆ ಇದೆ. ಇದಲ್ಲದೆ ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳ ಹೊಗೆ ತಪಾಸಣೆ ಮಾಡಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಮೊ.9632078522 ಗೆ ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.