ಪೆರಾಬೆ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ದಲಿತ್ ಸೇವಾ ಸಮಿತಿ ವತಿಯಿಂದ ಕಡಬ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಪೆರಾಬೆ ಗ್ರಾಮದ ಬಾಲಕೃಷ್ಣ ಪೂಜಾರಿ ಎಂಬವರು ಒತ್ತುವರಿ ಮಾಡಿಕೊಂಡ ಸರಕಾರಿ ಭೂಮಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ದಲಿತ್ ಸೇವಾ ಸಮಿತಿ ವತಿಯಿಂದ ಕಡಬ ತಹಸೀಲ್ದಾರ್ ಕಚೇರಿ ಎದುರು ಆ.24ರಂದು ಪ್ರತಿಭಟನೆ ನಡೆಸಲಾಯಿತು.

ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಈಗಾಗಲೇ ಈ ಭೂಮಿಗೆ ಸಂಬಂಧಿಸಿದಂತೆ ಎಸಿಯವರು ಯಥಾಸ್ಥಿತಿ ಆದೇಶ ನೀಡಿದ್ದಾರೆ ಆದರೂ ಅಲ್ಲಿ ಆದೇಶ ಪಾಲನೆಯಾಗುತ್ತಿಲ್ಲ ಎಂದರು. ಒಂದು ವಾರದೊಳಗೆ ಈ ಸರಕಾರಿ ಭೂಮಿಯನ್ನು ಕಂದಾಯ ಇಲಾಖೆ ಸ್ವಾಧೀನ ಪಡೆದುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಬಳಿಕ ನಡೆಯುವ ಯಾವುದೇ ಅಹಿತಕರ ಘಟನೆಗೆ ಕಡಬ ತಹಸೀಲ್ದಾರ್ ಹೊಣೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಣ್ಣಿ ಎಳ್ತಿಮಾರ್,ಧನಂಜಯ ಬಲ್ನಾಡು,ಕೇಶವ ಕುಪ್ಲಾಜೆ,ಬಿ.ಕೆ.ಅಣ್ಣಪ್ಪ, ಗೋಪಾಲ ನೇರಳಕಟ್ಟೆ, ಕೆ.ಪಿ. ಆನಂದ,ಮನೋಹರ್ ಕೋಡಿಜಾಲು, ಮಣಿ ರೆಂಜರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.