Breaking News

ಕುಂಬ್ರದಲ್ಲಿ ಎಸ್‌ಎಂಜಿ ಕನ್ಸ್‌ಸ್ಟ್ರಕ್ಷನ್ ಕಛೇರಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್‌ಎಂಜಿ ಕನ್ಸ್‌ಸ್ಟ್ರಕ್ಷನ್ ಕಛೇರಿ ಕುಂಬ್ರದ ಎಂ.ಎ ಆರ್ಕೇಡ್‌ನಲ್ಲಿ ಆ.24ರಂದು ಶುಭಾರಂಭಗೊಂಡಿತು. ಮಾಲಕರ ತಾಯಿ ಸೀತಾ ಮೋನಪ್ಪ ಗೌಡರವರು ರಿಬ್ಬನ್ ತುಂಡರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಶುಭಾಶೀರ್ವಾದಿಸಿದರು. ಮಾದೋಡಿ ಭಾಸ್ಕರ ರೈಯವರು ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ರೋಟರಿ ಅಧ್ಯಕ್ಷ ಡಾ| ಹರ್ಷ ಕುಮಾರ್ ರೈ ಮಾಡಾವು, ತಿಂಗಳಾಡಿ ರೋಟರ್‍ಯಾಕ್ಟ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಮಿತ್ತೋಡಿ, ಬಾಲಚಂದ್ರ ರಐ ಚಾವಡಿ, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಡೊಂಬಯ್ಯ ಗೌಡ ಕೋಡಂಬು, ಎಂ.ಎ ಆರ್ಕೇಡ್ ಮಾಲಕ ಶಾಫಿ ಎಂ.ಎ, ಬಾಬು ರೈ ಅಮೈ, ಗೀತಾ ಎಸ್.ರೈ, ಜಲಜಾಕ್ಷಿ ರೈ ಕೆದಂಬಾಡಿಗುತ್ತು, ಸವಿತಾ ಶೇಷಪ್ಪ ಗೌಡ, ಸರಿತಾ ವಿಶ್ವನಾಥ ಗೌಡ, ಶೇಷಪ್ಪ ಗೌಡ, ವಿಶ್ವನಾಥ ಗೌಡ, ಮೋಹನ್ ಗೌಡ ತೆಂಕಿಲ, ಲೋಹಿತ್ ಗೌಡ ಗುತ್ತು, ಕಿರಣ್‌ ರೈ ಗುತ್ತು ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಮಾಲಕ ಶರತ್ ಗೌಡ ಗುತ್ತುರವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.


ಎಲ್ಲಾ ತರದ ಕನ್‌ಸ್ಟ್ರಕ್ಷನ್ ಕೆಲಸ, ವಾಸ್ತು, ಮನೆಯ ಪ್ಲಾನ್,ಲೇಔಟ್ ಪ್ಲಾನ್, ಬಿಲ್ಡಿಂಗ್ ಲೈಸನ್ಸ್, ಡ್ರಾಯಿಂಗ್ಸ್,ಎಸ್ಟಿಮೇಟ್ಸ್,ಎಲ್ಲೈಸಿ, ಆರೋಗ್ಯ ವಿಮೆ ಇತ್ಯಾದಿ ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9611648051, 9901362051 ಗೆ ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.