ಸಂಟ್ಯಾರು ಶಾಲಾ ಶಿಕ್ಷಕಿಯನ್ನು ವರ್ಗಾಯಿಸುವಂತೆ ಆಗ್ರಹಿಸಿ ಬಿಇಒಗೆ ಶಾಲಾ ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ, ಪೋಷಕರ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ ನಮಗೆ ಶಿಕ್ಷಕರನ್ನು ಕೊಡಿ ಎಂದು ಹಲವಾರು ಶಾಲೆಗಳಿಂದ ಶಿಕ್ಷಣ ಇಲಾಖೆ ಮುಂದೆ ಪ್ರತಿಭಟನೆ ಮಾಡಿರುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ಧವಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಪಾಠ ಮಾಡುತ್ತಿಲ್ಲ, ಪೋಷಕರನ್ನು ಅಗೌರವದಿಂದ ವರ್ತಿಸುತ್ತಾರೆ ಮತ್ತು ಇತರ ಶಿಕ್ಷಕರೊಂದಿಗೆ ಹೊಂದಾಣಿಕೆಯಿಂದಿಲ್ಲ ಎಂಬ ಆರೋಪದ ಮೇರೆಗೆ ಶಿಕ್ಷಕಿಯೊಬ್ಬರನ್ನು ವರ್ಗಾಯಿಸಿ ಎಂದು ಶಾಲೆಯ ಎಸ್‌ಡಿಎಮ್‌ಸಿ ಮತ್ತು ಪೋಷಕರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ ಅಪರೂಪದ ವಿದ್ಯಾಮಾನ ಬೆಳಕಿಗೆ ಬಂದಿದೆ.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸೆಂಟ್ಯಾರ್ ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಉದಯ ಎಂಬವರು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ, ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡುತ್ತಾರೆ. ಶಾಲೆಗೆ ಬಂದ ಪೋಷಕರಲ್ಲಿ ಅಗೌರವದಿಂದ ವರ್ತಿಸುತ್ತಾರೆ, ಶಾಲೆಯಲ್ಲಿರುವ ಇತರ ಶಿಕ್ಷಕರೊಂದಿಗೆ ಹೊಂದಾಣಿಕೆಯಿಂದ ಇರುತ್ತಿಲ್ಲ. ತನ್ನ ವ್ಯಯುಕ್ತಿಕ ಪ್ರವಾಸ ಮಾಡಿಕೊಂಡು ಶಾಲೆಯ ಚಟುವಟಿಕೆಯಿಂದ ದೂರ ಇರುತ್ತಾರೆ. ಮಕ್ಕಳು ಮನೆಗೆ ಬಂದು ಪಾಠದ ವಿಚಾರದ ಬದಲು ಶಿಕ್ಷಕರ ಪ್ರವಾಸದ ವಿಚರವನ್ನೇ ಪ್ರಸ್ತಾಪಿಸುತ್ತಾರೆ. ಕೋವಿಡ್ ಸಂದರ್ಭದಲ್ಲೂ ದೆಹಲಿ ಮುಂತಾದೆಡೆ ಪ್ರವಾಸ ಕೈಗೊಂಡು ಹೊಮ್ ಕ್ವಾರಂಟೈನ್ ಮಾಡದೆ ಕೋವಿಡ್ ನಿಯಮಾವಲಿಗಳನ್ನು ಪಾಲಿಸುತ್ತಿಲ್ಲ ಎಂಬೆಲ್ಲ ಆರೋಪದ ಸುರಿಮಳೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಮತ್ತು ಪೋಷಕರು, ಹಿರಿಯ ವಿದ್ಯಾರ್ಥಿಗಳು ಹೊರಿಸಿದ್ದು, ಶಿಕ್ಷಕಿ ಉದಯ ಅವರನ್ನು ವರ್ಗಾಯಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮಕ್ಕಳಲ್ಲಿ ತಾರತಮ್ಯ:
ಎಸ್‌ಡಿಎಂಸಿ ಅಧ್ಯಕ್ಷ ಚೆನ್ನಪ್ಪ ಅವರು ಮಾತನಾಡಿ ನಮ್ಮ ಶಾಲೆಯಲ್ಲಿ ೮೭ ಮಕ್ಕಳಿದ್ದಾರೆ. ೬ ಶಿಕ್ಷಕರಿದ್ದಾರೆ. ಈ ಪೈಕಿ ಶಿಕ್ಷಕಿ ಉದಯ ಅವರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ. ಮಕ್ಕಳಲ್ಲಿ ತಾರತಮ್ಯ ಭಾವನೆ ಮೂಡಿಸುತ್ತಾರೆ. ಇಂತಹ ಶಿಕ್ಷಕರು ನಮಗೆ ಬೇಡ. ಈ ಕುರಿತು ಈ ಹಿಂದೆ ಹಲವಾರು ಭಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೆ ಪ್ರಯೋಜನವಾಗಿಲ್ಲ. ಕೊರೋನಾ ಸಂದರ್ಭದಲ್ಲಿ ಶಿಕ್ಷಕಿಯ ವರ್ಗಾವಣೆ ಕುರಿತು ಫಾಲೋಅಪ್ ಮಾಡಲು ಕಷ್ಟ ಆಗಿತ್ತು. ಇದೀಗ ಮುಂದೆ ಶಾಲೆಗಳು ಆರಂಭ ಆಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮತ್ತೆ ಅದೇ ಶಿಕ್ಷಕಿ ಶಾಲೆಗೆ ಬಂದರೆ ಕಷ್ಟ. ಅವರನ್ನು ತಕ್ಷಣ ವರ್ಗಾಯಿಸಬೇಕೆಂದು ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸಂಬಂಧಿಸಿ ಭರವಸೆ ಸಿಕ್ಕಿದೆ ಎಂದರು.

ಬೇಡಿಕೆ ಈಡೇರದಿದ್ದರೆ ಹೋರಾಟ:
ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಶ್ರಫ್ ಸೆಂಟ್ಯಾರ್ ಅವರು ಮಾತನಾಡಿ ಶಿಕ್ಷಕಿಯನ್ನು ವರ್ಗಾವಣೆ ಮಾಡುವ ಕುರಿತು ನಾವು ಹಲವು ಸಲ ಮನವಿ ಕೊಟ್ಟಿದ್ದೇವೆ. ಇಲಾಖೆಯಿಂದ ವಾರದೊಳಗೆ ವರ್ಗಾವಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಮತ್ತೆ ವಾರ ತಿಂಗಳು ಕಳೆದರೂ ನಮ್ಮ ಬೇಡಿಕೆ ಈಡೇರಿಲ್ಲ. ಇದೀಗ ಮತ್ತೊಮ್ಮೆ ಮನವಿ ನೀಡಿದ್ದೇವೆ. ಇದಕ್ಕೆ ಸ್ಪಂಧನೆ ಇಲ್ಲದಿದ್ದರೆ ಮುಂದೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಮಿತ್ರ, ಸದಸ್ಯರಾದ ಜಯಲಕ್ಷ್ಮಿ, ಮಮತಾ, ಭವ್ಯ, ಕುಸುಮ, ಉಪೇಂದ್ರ, ಬಾಬು, ಬೇಬಿ. ಪೋಷಕರಾದ ರೋಹಿಣಿ, ಪ್ರಮಿಳಾ, ಶಶಿಕಲಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಗೌಡ, ಕಾರ್ಯದರ್ಶಿ ಸುಹೈಲ್ ಸೆಂಟ್ಯಾರ್, ಶಶಿಧರ್ ಗೌಡ,  ಸುಜಿತ್ ಬಂಗೇರ, ರಿಸ್ವಾನ್ ಸೆಂಟ್ಯಾರ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.