ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರು-ಉಪ್ಪಿನಂಗಡಿ ಮಧ್ಯೆ ಕೈಗಾರಿಕಾ ವಲಯ ನಿರ್ಮಾಣಕ್ಕೆ ಯೋಜನೆ-ಮಟಂದೂರು

ಉಪ್ಪಿನಂಗಡಿ: ಪುತ್ತೂರು ಮತ್ತು ಉಪ್ಪಿನಂಗಡಿ ಪೇಟೆಯ ಅಭಿವೃದ್ಧಿ ಮತ್ತು ನಿರುದ್ಯೋಗ ನಿವಾರಣೆ ದೃಷ್ಠಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಾಗುವಂತೆ ಉಪ್ಪಿನಂಗಡಿ ಮತ್ತು ಪುತ್ತೂರು ಮಧ್ಯ ಭಾಗದಲ್ಲಿ ಕೈಗಾರಿಕಾ ವಲಯ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದ್ದು, ಇದಕ್ಕೆ ಪೂರಕವಾದ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಶಾಸಕ ಸಂಜೀವ ಮಟಂದೂರು ಹೇಳಿದರು.

ಅವರು ಆ. ೨೪ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ೨೭ ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣ ಆಗಲಿರುವ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಪ್ರವಾಸಿ ಭಕ್ತಾಧಿಗಳ ಅನುಕೂಲತೆಗಾಗಿ ವಸತಿ ವ್ಯವಸ್ಥೆಯನ್ನು ಒಳಗೊಂಡಂತೆ ಯಾತ್ರಿ ನಿವಾಸ ನಿರ್ಮಾಣದ ಯೋಜನೆ ಇದಾಗಿರುತ್ತದೆ, ಮುಂದಿನ ಹೊಸ ವರ್ಷ ಪ್ರಾರಂಭದಲ್ಲಿ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಆಗಲಿದೆ ಎಂದರು.

ತಡೆಗೋಡೆಗೆ ೨ ಕೋಟಿ ಪ್ರಸ್ತಾವಣೆ:
ನೇತ್ರಾವತಿ ಮತ್ತು ಕುಮಾರಧಾರ ನದಿ ಸಂಗಮವಾಗುವ ಈ ಕ್ಷೇತ್ರವನ್ನು ಗಯಾಪದ, ದಕ್ಷಿಣ ಕಾಶಿ ಎಂದು ಪ್ರತೀತಿ ಪಡೆದಿದ್ದು, ಪಿಂಡ ಪ್ರಧಾನ ಮೋಕ್ಷ ಕ್ಷೇತ್ರವಾಗಿಯೂ ಗುರುತಿಸಲ್ಪಟ್ಟಿದೆ, ಹೀಗಾಗಿ ಇಲ್ಲಿಗೆ ಬರುವ ಭಕ್ತಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಈ ನಿಟ್ಟಿನಲ್ಲಿ ನಿರ್ಮಾಣ ಆಗಲಿರುವ ಯಾತ್ರಿ ನಿವಾಸಕ್ಕೆ ಮುಂದಿನ ದಿನಗಳಲ್ಲಿ ಮೇಲಂತಸ್ತು ಮಾಡುವ ಯೋಜನೆಯೂ ಇದೆ ಎಂದ ಅವರು ದೇವಸ್ಥಾನದ ಸುತ್ತು ಕುಮಾರಧಾರ ಸೇತುವೆಯಿಂದ ನೇತ್ರಾವತಿ ನದಿ ಸಂಗಮದ ತನಕ ತಡೆಗೋಡೆ ನಿರ್ಮಿಸಲು ೨ ಕೋಟಿ ರೂಪಾಯಿ ಅನುದಾನ ಬೇಡಿಕೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ಪುತ್ತೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ರಾಜ್ಯದ ಎಲ್ಲೆಡೆಯಿಂದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾಧಿಗಳು ಉಪ್ಪಿನಂಗಡಿಯಲ್ಲಿರುವ ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಹೆಸರು ಪಡೆದಿರುವ ಉಪ್ಪಿನಂಗಡಿ ದೇವಸ್ಥಾನಕ್ಕೂ ಅಧಿಕ ಸಂಖ್ಯೆಯಲ್ಲಿ ಬರುವ ಮಂದಿಗೆ ಅನುಕೂಲ ಆಗುವ, ಅವರು ತಂಗುವ ಸಲುವಾಗಿ ನಿರ್ಮಾಣ ಆಗಲಿರುವ ಯಾತ್ರಿ ನಿವಾಸ ಆದಷ್ಟು ಬೇಗ ಲೋಕಾರ್ಪಣೆ ಆಗಲಿ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಯನಾ ಜಯಾನಂದ ಸಂದರ್ಭೋಚಿತವಾಗಿ ಮಾತನಾಡಿದರು. ದೇವಸ್ಥಾನದ ಅರ್ಚಕ ಹರೀಶ್ ಉಪಾಧ್ಯಾಯ ವೈದಿಕ ಕಾರ್‍ಯ ನೆರವೇರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ಸುಜಾತ ಕೃಷ್ಣ ಆಚಾರ್ಯ, ಮುಕುಂದ ಗೌಡ ಬಜತ್ತೂರು, ಉಪ್ಪಿನಂಗಡಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಡಾ| ರಾಜಾರಾಮ್, ರಾಧಾಕೃಷ್ಣ ನಾಯಕ್, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಜೀವ ಗಾಣಿಗ, ಶ್ರೀಮತಿ ಉಷಾ ಮುಳಿಯ, ಶ್ರೀಮತಿ ಜ್ಯೋತಿ ಹೇರಂಬ ಶಾಸ್ತ್ರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಮಾಜಿ ಸದಸ್ಯ ಚಂದ್ರಶೇಖರ ಮಡಿವಾಳ, ಹರೀಶ್ ನಟ್ಟಿಬೈಲ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ, ಸ್ಥಳೀಯ ಪ್ರಮುಖರಾದ ಏಕವಿದ್ಯಾಧರ, ಜಯಂತ ಪೊರೋಳಿ, ಪುರುಷೋತ್ತಮ ಮುಂಗ್ಲಿಮನೆ, ಇಂಜಿನಿಯರ್ ಸುಧಾಕರ ಶೆಟ್ಟಿ, ಹರಿರಾಮಚಂದ್ರ, ಎಂ. ವಿಶ್ವನಾಥ, ಸದಾನಂದ ಕಾರ್‌ಕ್ಲಬ್, ಅಶೋಕ್ ರೈ, ಯೋಗೀಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರಭಾರ ಕಾರ್‍ಯನಿರ್ವಹಣಾಧಿಕಾರಿ ರವೀಂದ್ರ ಸ್ವಾಗತಿಸಿ, ಸಿಬಂದಿ ಪದ್ಮನಾಭ ವಂದಿಸಿದರು. ವ್ಯವಸ್ಥಾಪಕ ವೆಂಕಟೇಶ್ ರಾವ್, ಕೃಷ್ಣ ಪ್ರಸಾದ್ ಬಡಿಲ, ದಿವಾಕರ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಸುಧಾಕರ ಕೋಟೆ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.