ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸವಣೂರು ಶಾಖೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ಇದರ ಸವಣೂರು ಶಾಖೆಯು ಆ.೨೪ ರಂದು ಸವಣೂರಿನ ಮುಖ್ಯರಸ್ತೆಯಲ್ಲಿನ ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಸೀತಾರಾಮ ರೈ ಸವಣೂರುರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಯಾವುದೇ ಗ್ರಾಮದ ಅಭಿವೃದ್ಧಿ ಒಬ್ಬನಿಂದ ಸಾಧ್ಯವಿಲ್ಲ. ಹನಿಗೂಡಿದರೆ ಹಳ್ಳ ಎಂಬಂತೆ ಎಲ್ಲರೂ ಕೈಜೋಡಿಸಿದಾಗ ಆ ಗ್ರಾಮದ ಅಟಭಿವೃದ್ದಿ ಸಾಧ್ಯ. ೩೮ ವರ್ಷಗಳ ಹಿಂದೆ ಸವಣೂರು ಗ್ರಾಮ ಹೇಗಿತ್ತು ಮತ್ತು ಈಗ ಹೇಗಿದೆ ಅನ್ನುವುದಕ್ಕೆ ಇಲ್ಲಿನ ಅಭಿವೃದ್ಧಿಯೇ ಸಾಕ್ಷಿಯಾಗಿದೆ. ಪ್ರಸಕ್ತ ಸವಣೂರಿಗೆ ಕಾಲಿಟ್ಟಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಐದನೇ ಸಹಕಾರಿ ಸಂಘವಾಗಿದೆ. ಕೇಂದ್ರ ಸರಕಾರದ ಉದಾರೀಕರಣ ನೀತಿಯಿಂದ ಇಂದು ಸಹಕಾರಿ ಸಂಘಗಳು ಬಹಳ ಎತ್ತರಕ್ಕೆ ಬೆಳೆದಿದೆ ಅಂದರೆ ತಪ್ಪಾಗದು. ಮುಂದಿನ ದಿನಗಳಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಸರ್ವರ ಪ್ರೋತ್ಸಾಹದಿಂದ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹೇಳಿ ಶುಭಹರೈಸಿದರು.

ಭದ್ರತಾ ಕೋಶದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ ರೋಡ್ ಇದರ ಅಧ್ಯಕ್ಷರಾದ ಸಂಜೀವ ಪೂಜಾರಿರವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೨೭ ಸಹಕಾರಿ ಬ್ಯಾಂಕುಗಳಿದ್ದು, ಇವುಗಳು ಯಾವುದೇ ಅವ್ಯವಹಾರ ಎಸಗದೆ ಪ್ರತಿಯೋರ್ವರ ಶ್ರಮದಿಂದ ಮತ್ತು ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದುವ ಮೂಲಕ ಮಾದರಿ ಎನಿಸಿದೆ. ಸವಣೂರಿನಲ್ಲಿ ಉದ್ಘಾಟನೆಗೊಂಡ ಈ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಅಧ್ಯಕ್ಷ ವಿಜಯಕುಮಾರ್ ಸೊರಕೆಯವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿ ಇನ್ನೂ ಹತ್ತು ಶಾಖೆಗಳನ್ನು ಹುಟ್ಟು ಹಾಕಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ಇ-ಸ್ಟ್ಯಾಂಪಿಂಗ್ ಲೋಕಾರ್ಪಣೆಯನ್ನು ನೆರವೇರಿಸಿದ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ, ಸಹಕಾರಿ ಬ್ಯಾಂಕುಗಳಿಂದ ಗ್ರಾಹಕರು ಸಾಲ ತೆಗೆದುಕೊಳ್ಳದಿದ್ದರೆ ಬ್ಯಾಂಕುಗಳ ಅಭಿವೃದ್ಧಿ ಎಲ್ಲಿಂದ ಸಾಧ್ಯ. ಕೇವಲ ಸ್ವ-ಜಾತಿಗೆ ಮಾತ್ರ ಮೀಸಲಾಗದೆ ಇತರ ಜಾತಿಯ ಗ್ರಾಹಕ ವರ್ಗಕ್ಕೂ ವ್ಯಾಪಾರ ಚಟುವಟಿಕೆಗಳಿಗೆ ಪ್ರೇರೇಪಣೆ ಆಗುವಂತೆ ಕಾರ್ಯವೈಖರಿ ಇರಬೇಕು. ಇ-ಸ್ಟಾಂಪಿಂಗ್ ಸೇವೆ ಎನ್ನುವುದು ಸಾರ್ವಜನಿಕರಿಗೆ ಅಗತ್ಯವಾದ ಸೇವೆಯಾಗಿದ್ದು, ಇಲ್ಲಿನ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಇ-ಸ್ಟಾಂಪಿಂಗ್ ಸೇವೆಯನ್ನು ಆರಂಭಿಸಿರುವುದು ಶ್ಲಾಘನೀಯವಾಗಿದೆ. ಯಾವುದೇ ಸಹಕಾರಿ ಸಂಘದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವಾ ಮನೋಭಾವನೆ ಮತ್ತು ಒಳ್ಳೆತನವನ್ನು ಪ್ರಚುರಪಡಿಸಿದಾಗ ಬ್ಯಾಂಕುಗಳ ಅಭಿವೃದ್ಧಿ ಸಾಧ್ಯ ಎಂದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅರ್ತಿಕೆರೆ ಅಬ್ದುಲ್ ರಹಿಮಾನ್ ಹಾಜಿರವರು ನಿರಖು ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿ, ಬ್ಯಾಂಕುಗಳು ಸಾರ್ವಜನಿಕರ ಅಗತ್ಯಕ್ಕೆ ಸಾಲವನ್ನು ನೀಡುತ್ತದೆ. ಆದರೆ ಸಾಲ ತೆಗೆದುಕೊಂಡವ ವರ್ಷಾನುಗಟ್ಟಲೇ ಅವನ್ನು ಮರುಪಾವತಿ ಮಾಡದೇ ಸತಾಯಿಸುವುದು ಮತ್ತು ಕೆಲವರು ಬ್ಯಾಂಕುಗಳ ಬಾಗಿಲಿಗೆ ಹೋಗದೇ ಇದ್ದರೆ ಬ್ಯಾಂಕುಗಳ ಉನ್ನತಿ ಹೇಗೆ ಸಾಧ್ಯ. ಕೊನೆಗೆ ಬ್ಯಾಂಕುಗಳ ಆಡಳಿತ ಮಂಡಳಿ `ಅಸಲಾದರೂ ಕೊಡಪ್ಪ’ ಅನ್ನುವ ಸ್ಥಿತಿಗೆ ಬಂದ್ರೆ ಬ್ಯಾಂಕುಗಳ ಗತಿ ಏನಾಗಬೇಡ. ಆದ್ದರಿಂದ ಬ್ಯಾಂಕುಗಳು ಯಾರು ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುತ್ತಾರೋ ಅವರಿಗೆ ಸಾಲವನ್ನು ಕೊಡುವುದು ಒಳಿತು ಎಂದು ಹೇಳಿ ಶುಭಹಾರೈಸಿದರು.

ಅಶ್ವಿನಿ ಕಾಂಪ್ಲೆಕ್ಸ್‌ನ ಮಾಲಕ ರಾಜಾರಾಂ ಪ್ರಭು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಬಂಧಕ ವಿಶ್ವನಾಥ ಗೌಡ, ಸವಣೂರು ಸಿ.ಎ ಬ್ಯಾಂಕಿನ ಚಂದ್ರಶೇಖರ್, ಆಲಂಗಾರು ಮೂರ್ತೆದಾರರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ, ಉಪ್ಪಿನಂಗಡಿ ಮೂರ್ತೆದಾರರ ಸಂಘದ ಅಧ್ಯಕ್ಷೆ ಉಷಾ ಅಂಚನ್, ಸವಣೂರು ಆದರ್ಶ ವಿವಿಧೋದ್ಧೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ ನರಿಮೊಗರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಬೆದ್ರಾಳ, ನಿರ್ದೇಶಕರಾದ ಅಣ್ಣಿ ಪೂಜಾರಿ ಹಿಂದಾರು, ನಾಗರಾಜ ಪೂಜಾರಿ ಕೈಪಂಗಳದೋಳ, ಹೊನ್ನಪ್ಪ ಪೂಜಾರಿ ಕುರೆಮಜಲು, ಸಂತೋಷ್ ಕುಮಾರ್ ಮರಕ್ಕೂರು, ಪಿ.ಕೆ ಕೃಷ್ಣಪ್ಪ ಪೂಜಾರಿ ಕೊಡಂಗೆ, ಶ್ರೀಮತಿ ಸುಜಾತ, ಶ್ರೀಮತಿ ಪದ್ಮಾ ರಾಜೀವ ಮುಂಡೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಲ್ಲೇರಿ ಮತ್ತು ಸಿಬ್ಬಂದಿ ವರ್ಗ, ಶಾಖಾ ವ್ಯವಸ್ಥಾಪಕ ಶ್ರೀಶನ್ ಎ.ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಸತೀಶ್ ಕುಮಾರ್ ಕೆಡೆಂಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರ್ಚಕ ಹರೀಶ್ ಶಾಂತಿರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಮತ್ತೋರ್ವ ನಿರ್ದೇಶಕ ಉದಯ ಕುಮಾರ್ ಕೋಲಾಡಿ ವಂದಿಸಿದರು.

ಇ-ಸ್ಟಾಂಪಿಂಗ್‌ಗೆ ಹೆಚ್ಚಿನ ಬೇಡಿಕೆ…
ಪುತ್ತೂರು ತಾಲೂಕಿನಲ್ಲಿ ಐದು ಮೂರ್ತೆದಾರರ ಸೇವಾ ಸಹಕಾರಿ ಸಂಘವಿದೆ. ಎಲ್ಲಾ ಸಹಕಾರಿ ಸಂಘಗಳು ಪ್ರಸ್ತುತ ಕೋಟಿ ರೂ.ಗಳ ವ್ಯವಹಾರವನ್ನು ಮಾಡುತ್ತಿರುವುದು ಸಂತೋಷದ ವಿಷಯ. ಅದರಂತೆ ಮಂಗಳೂರು ಜಿಲ್ಲೆಯಲ್ಲಿ ಆದಷ್ಟು ಮೂರ್ತೆದಾರರ ಸಹಕಾರಿ ಸಂಘವನ್ನು ಮಾಡಬೇಕು ಎನ್ನುವ ಕನಸು ಕೂಡ ಇದೆ. ನರಿಮೊಗರುವಿನಲ್ಲಿ ನಮ್ಮ ಶಾಖೆ ಆರಂಭಿಸಿದಾಗ ಅಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆಗೆ ಸಾರ್ವಜನಿಕರಿಂದ ಬಹಳ ಬೇಡಿಕೆಯಿದ್ದ ಪರಿಣಾಮ ಅಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆಯನ್ನು ಆರಂಭಿಸಿದ್ದೇವು. ಸವಣೂರು ಶಾಖೆಯಲ್ಲೂ ಇ-ಸ್ಟಾಂಪಿಂಗ್ ವ್ಯವಸ್ಥೆಯನ್ನು ಆರಂಭಿಸಿದ್ದು, ಇಲ್ಲಿನ ಸವಣೂರು, ಕಾಣಿಯೂರು, ಬೆಳಂದೂರು ಪರಿಸರದ ಜನರಿಗೆ ಈ ವ್ಯವಸ್ಥೆ ಬಹಳ ಉಪಯುಕ್ತವೆನಿಸಬಲ್ಲುದು -ವಿಜಯಕುಮಾರ್ ಸೊರಕೆ, ಅಧ್ಯಕ್ಷರು, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘ

ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸೀತಾರಾಮ ರೈ, ಕಿರಣ್ ಎಂಟರ್‌ಪ್ರೈಸಸ್‌ನ ಮಾಲಕ ಕೇಶವ್, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಬೆದ್ರಾಳರವರಿಗೆ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅರ್ತಿಕೆರೆ ಅಬ್ದುಲ್ ರಹಿಮಾನ್ ಹಾಜಿರವರು ಠೇವಣಿ ಪತ್ರವನ್ನು ಹಸ್ತಾಂತರಿಸಿದರು.

ವಿಶೇಷತೆಗಳು….
-ವ್ಯಾಪಾರ ಸಾಲ, ವೇತನಾಧಾರಿತ ಸಾಲ
-ಮೂರ್ತೆದಾರಿಕೆ ಸಾಲ, ಸ್ವ-ಸಹಾಯ ಗುಂಪುಗಳಿಗೆ ಸಾಲ
-ಪಿಗ್ಮಿ ಆಧಾರಿತ ಸಾಲ, ಅಡವು ಸಾಲ, ಜಾಮೀನು ಸಾಲ
-ಇ-ಸ್ಟ್ಯಾಂಪಿಂಗ್(ಠಸ್ಸೆ ಪೇಪರ್) ಸೌಲಭ್ಯ
-ಚಿನ್ನಾಭರಣ ಈಡಿನ ಸಾಲ, ಕನಿಷ್ಠ ಬಡ್ಡಿದರದಲ್ಲಿ ಗರಿಷ್ಠ ಸಾಲ
-ಅತೀ ಕಡಿಮೆ ಬಡ್ಡಿದರದಲ್ಲಿ ವಾಹನ ಖರೀದಿ ಸಾಲ
-ಮಾಸಿಕ ಕಂತುಗಳ ಉಳಿತಾಯ ಯೋಜನೆ(ಆರ್.ಡಿ)
-ಭಾರತದಾದ್ಯಂತ ಆರ್‌ಟಿಜಿಎಸ್/ನೆಫ್ಟ್ ಸೌಲಭ್ಯ
-ಠೇವಣಿಗಳಿಗೆ ಆಕರ್ಷಕ ಬಡ್ಡಿದರ
-ಹಿರಿಯ ನಾಗರಿಕರಿಗೆ, ಸಂಘ-ಸಂಸ್ಥೆಗಳಿಗೆ, ಸೈನಿಕರಿಗೆ/ನಿವೃತ್ತ ಸೈನಿಕರಿಗೆ ಶೇ.೦.೫೦ ಹೆಚ್ಚುವರಿ ಬಡ್ಡಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.