Breaking News

ಕುಂಬ್ರ ಮೆಸ್ಕಾಂ ಉಪವಿಭಾಗ ,ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಕಚೇರಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
  • 24/7 ವಿದ್ಯುತ್ ಮತ್ತು ಕುಡಿಯುವ ನೀರಿಗೆ ಸರಕಾರದ ಮೊದಲ ಆದ್ಯತೆ: ಸಂಜೀವ ಮಠಂದೂರು

ಪುತ್ತೂರು: ಕುಂಬ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಕುಂಬ್ರ ಮೆಸ್ಕಾಂ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭವು ಆ. ೨೪ ರಂದು ಕುಂಬ್ರದಲ್ಲಿ ನಡೆಯಿತು. ಪುತ್ತೂರು ಶಾಸಕರಾದ ಎಂ. ಸಂಜೀವ ಮಠಂದೂರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಕಟ್ಟಡದಲ್ಲಿರುವ ವಿವಿಧ ಕಚೇರಿಗಳನ್ನು ಶಾಸಕರು ದೀಪಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಪುತ್ತೂರು , ಸುಳ್ಯ, ಕಡಬಕ್ಕೆ ನೆಟ್ಲ ಮುಡ್ನೂರು ಸಬ್ ಸ್ಟೇಷನ್‌ನಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು ಈ ನಡುವೆ ಮಾಡಾವಿನಲ್ಲಿ ೧೧೦ ಕೆವಿ ವಿದ್ಯುತ್ ಸಬ್‌ಸ್ಟೇಷನ್ ಕಳೆದ ಕೆಲ ತಿಂಗಳ ಹಿಂದೆ ಆರಂಭಗೊಂಡಿದ್ದು ಈ ಮೂಲಕ ಕೆಲವೊಂದು ಸಮಸ್ಯೆಗಳು ಬಗೆಹರಿಸಿದೆ. ಪ್ರಸ್ತುತ ೧.೫೩ ಕೋಟಿ ರೂ ವೆಚ್ಚದಲ್ಲಿ ಕುಂಬ್ರ ಸಬ್ ಸ್ಟೇಷನ್ ಬಳಿ ನೂತನ ಕಾರ್ಯನಿರ್ವಾಹಕ ಕಚೇರಿಯನ್ನು ನಿರ್ಮಾಣ ಮಾಡಿ ಅದರ ಉದ್ಘಾಟನೆ ನಡೆದಿದೆ. ಇದರ ನಡುವೆ ಪುತ್ತೂರು, ಸುಳ್ಯ ಆಲಂಕಾರು, ಕಡಬ ಇತ್ಯಾದಿ ಪ್ರದೇಶಗಳಲ್ಲಿ ೩೩ ಕೆ ವಿ ವಿದ್ಯುತ್ ಸಬ್‌ಸ್ಟೇಷನ್ ಕೇಂದ್ರವನ್ನು ನಿರ್ಮಾಣ ಮಾಡುವ ಹಾಗೂ ಉಪ್ಪಿನಂಗಡಿ ಮತ್ತು ಆಲಂಕಾರಿನಲ್ಲಿ ೧೧೦ ಕೆ ವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡುವ ಯೋಜನೆ ಇದೆ. ಕೈಕಾರದಲ್ಲೂ ಉಪ ವಿದ್ಯುತ್ ಕೇಂದ್ರವನ್ನು ಆರಂಬಿಸುವ ಕುರಿತು ಈಗಾಗಲೆ ಕೆಲಸ ಕಾರ್ಯಗಳು ನಡೆದಿದೆ.

ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ನೀಡಲು ಸಮಸ್ಯೆಗಳಿವೆ
೨೪/೭ ವಿದ್ಯುತ್ ನೀಡುವಲ್ಲಿ ನಮಗೆ ಹಂಬಲ ಇದೆ. ಆದರೆ ಮಳೆಗಾಲದಲ್ಲಿ ಗಾಳಿ ಮಳೆ ಬಂದಾಗ ಕೆಲವೊಂದು ಬಾರಿ ವಿದ್ಯುತ್ ಕಂಬಗಳು ನಾಶವಾಗಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರತೀ ಗ್ರಾಮದ ಆಯ ಕಟ್ಟಿನ ಸ್ಥಳಗಳಲ್ಲಿ ಸಬ್ ಸ್ಟೇಷನ್ ತೆರೆಯುವ ಮೂಲಕ ದಿನದ ೨೪ ಗಂಟೆಯೂ ವಿದ್ಯುತ್ ಒದಗಿಸುವಲ್ಲಿ ನಾವು ಕ್ರಮಕೈಗೊಳ್ಳಲಿದ್ದೇವೆ. ಕಳೆದ ಎರಡು ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ತೃಪ್ತಿದಾಯಕ ಪಲಿತಾಂಶ ಇದೆ. ಮುಂದಿನ ದಿನಗಳಲ್ಲಿ ಸಬ್ ಸ್ಟೇಷನ್‌ಗಳಿಗೆ ಇನ್ನಷ್ಟು ವೇಗ ಕೊಡುವ ಕೆಲಸ ನಡೆಯಲಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ೧೦ ಸೆಂಟ್ಸ್ ಸ್ಥಳ ಕಾಯ್ದಿರಿಸಲಾಗಿದ್ದು ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಸಬ್ ಸ್ಟೇಷನ್ ನಿರ್ಮಾಣವಾಗಲಿದೆ. ಇಂಡಸ್ಟ್ರೀಯಲ್ ಪ್ರದೇಶಕ್ಕೂ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಿ ದಿನದ ೨೪ ಗಂಟೆಯೂ ವಿದ್ಯುತ್ ಮತ್ತು ಕುಡಿಯುವ ನೀರು ನೀಡುವುದೇ ನಮ್ಮ ಗುರಿಯಾಗಿದೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮೆಸ್ಕಾಂ ಸಿವಿಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಲೋಕನಾಥ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಮಚಂದ್ರ, ಸಿವಿಲ್ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮೋಹನ್, ಪುತ್ತೂರು ಸಹಾಯಕ ಕಾರ್ಯ ನಿರ್ವಾಹಕ ಎಂಜನಿಯರ್ ಶಿಲ್ಫಾ ಶೆಟ್ಟಿ, ಕುಂಬ್ರ ಉಪವಿಭಾಗದ ಕಿರಿಯ ಎಂಜನಿಯರ್ ನಿತ್ಯಾನಂದ ತೆಂಡೂಲ್ಕರ್, ಬೆಟ್ಟಂಪಾಡಿ ಜೆ ಇ ಪುತ್ತು ಜೆ, ಸವಣೂರು ಜೆ ಇ ನಾಗರಾಜ್, ಈಶ್ವರಮಂಗಲ ಜೆ ಇ ರಮೇಶ್, ಕುಂಬ್ರ ಅಕೌಂಟ್ ಆಫೀಸರ್ ಕೃಷ್ಣಮೂರ್ತಿ, ಲೆಕ್ಕಾಧಿಕಾರಿ ನಾರಾಯಣ ಶೆಣೈ, ತಾಪಂ ಸದಸ್ಯ ಹರೀಶ್ ಬಿಜತ್ರೆ, ಬಿಜೆಪಿ ಮಂಡಲ ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿವನ, ಎಪಿಎಂಸಿ ಮಾಜಿ ನಿರ್ದೇಶಕ ಕೃಷ್ಣಕುಮಾರ್ ರೈ ಗುತ್ತು, ಮೆಸ್ಕಾಂ ವಿವಿಧ ಭಾಗದ ಗುತ್ತಿಗೆದಾರರು, ಪವರ್‌ಮ್ಯಾನ್‌ಗಳು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

ನೂತನ ಕಟ್ಟಡದಲ್ಲಿರುವ ಕಚೇರಿಗಳು
ಕ್ಯಾಷ್ ಕೌಂಟರ್, ಬಿಲ್ ಕೌಂಟರ್, ಕಂದಾಯ ಶಾಖೆ, ೨೪ ಗಂಟೆಗಳ ಸರ್ವಿಸ್ ಕೇಂದ್ರಗಳು, ಸೆಕ್ಸನ್ ಆಫೀಸ್, ಸಹಾಯವಾಣಿ ಕೇಂದ್ರ,ಸಹಾಯಕ ಕಾರ್ಯ ನಿರ್ವಾಹಕರ ಕಚೇರಿಗಳು ಒಳಗೊಂಡಿರುತ್ತದೆ.  ಕುಂಬ್ರ, ಬೆಟ್ಟಂಪಾಡಿ, ಸವಣೂರು, ಕಾವು ಸಬ್ ಸ್ಟೇಷನ್ ವ್ಯಾಪ್ತಿಯ ಗ್ರಾಹಕರು ಕಚೇರಿಯನ್ನು ಬಳಸಿಕೊಳ್ಳಬಹುದು ಎಂದು ಪುತ್ತೂರು ಮೆಸ್ಕಾಂ ಕಾರ್ಯವಾಹಕ ಎಂಜಿನಿಯರ್ ನರಸಿಂಹ ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.