Breaking News

ಫಿಲೋಮಿನಾ ಗಣಪನಿಗೆ 38ರ ಸಂಭ್ರಮ | ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ೩೮ನೇ ವರುಷದ ಶ್ರೀ ಗಣೇಶೋತ್ಸವವು ಈ ಬಾರಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ಸರಳ ರೀತಿಯಲ್ಲಿ ಆಚರಿಸಲಾಯಿತು.

ಬೆಳಿಗ್ಗೆ ಪರ್ಲಡ್ಕದಿಂದ ಶ್ರೀಗಣೇಶ ವಿಗ್ರಹವನ್ನು ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಾನದ ಬಳಿ ತಂದು ಪ್ರಾರ್ಥನೆ ಮಾಡಿ ಬಳಿಕ ದರ್ಬೆ ವಿನಾಯಕ ನಗರದ ಮಂಟಪಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಬಳಿಕ ಗಣಹೋಮ, ಮಹಾಪೂಜೆ, ಅಪರಾಹ್ನ ಜಲಸ್ಥಂಭನ ಪೂಜೆ ನೆರವೇರಿಸಿ ಬಳಿಕ ಮಹಾಲಿಂಗೇಶ್ವರ ದೇವಳದ ಕೆರೆಯಲ್ಲಿ ಶ್ರೀಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು. ಫಿಲೋಮಿನಾ ಗಣೇಶೋತ್ಸವ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ನಾಗೇಶ್ ಪೈ, ಸಿಎ ಅನಂತ ಪದ್ಮನಾಭ, ಮಂಜುನಾಥ ಡಿ, ದುರ್ಗಾಪ್ರಸಾದ್, ವೇಣುಗೋಪಾಲ್, ವೆಂಕಟಕೃಷ್ಣ, ದಿನೇಶ್ ಪ್ರಸನ್ನ, ಶಿವಪ್ರಸಾದ್, ವಿಶ್ವಾಸ್ ಶೆಣೈ, ಜನಾರ್ದನ್, ನಾಗರಾಜ ಬೆಟ್ಟ, ಫಿಲೋಮಿನಾ ಕಾಲೇಜು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಕುಮಾರ್ ಪರ್ಲಡ್ಕ, ಆಶ್ಲೇಶ, ಕೀರ್ತೇಶ್, ಚರಣ್, ನಿತೀಶ್, ಅಖಿಲ್, ಸುಖೇಶ್, ಪ್ರತೀಕ್ ಶೆಣೈ, ಕಿರಣ್, ಪ್ರಜ್ವಲ್ ಮುಕ್ರಂಪಾಡಿ, ರೋಹಿತ್, ಶ್ರವಣ್ ಪಾಂಗ್ಲಾಯಿ, ಜಿತೇಶ್ ಬೆಂಗಳೂರುರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.