Breaking News

ಉಷಾ ಮೆಡಿಕಲ್ಸ್ ಇವರಿಂದ ಫ್ರೀ ಹೋಮ್ ಡೆಲಿವರಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಳೆದ 25 ವರ್ಷಗಳಿಂದ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ದರ್ಬೆಯ ಶ್ರೀರಾಮ ವಾಣಿಜ್ಯ ಸಂಕೀರ್ಣದಲ್ಲಿರುವ ಉಷಾ ಮೆಡಿಕಲ್ಸ್‌ನಲ್ಲಿ ಗ್ರಾಹಕರಿಗೆ ಔಷಧಗಳ ಫ್ರೀ ಹೋಮ್ ಡೆಲಿವರಿಗೆ ಚಾಲನೆ ನೀಡಲಾಯಿತು.

ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ರವರು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಗ್ರಾಹಕರಿಗೆ ತಾವು ಖರೀದಿಸಿದ ಔಷಧಿಗಳನ್ನು ಅವರ ಮನೆಗೆ ಉಚಿತವಾಗಿ ಡೆಲಿವರಿ ಕೊಡುವ ಮೂಲಕ ಸಾರ್ವಜನಿಕರಲ್ಲಿ ಕರೋನ ಹರಡುವಿಕೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿ ಶುಭ ಹಾರೈಸಿದರು. ಉಷಾ ಮೆಡಿಕಲ್ಸ್ ಮಾಲಕ ಗಣೇಶ್ ಭಟ್ ಮಾತನಾಡಿ ಗ್ರಾಹಕರು ಖರೀದಿಸಿದ ಔಷಧವನ್ನು ಅವರ ಮನೆ ಬಾಗಿಲಿಗೆ ಫ್ರೀ ಡೋರ್ ಡೆಲಿವರಿಯಾಗಿ ಪುತ್ತೂರಿನ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಾರಂಭಿಸಿರುವ ಹೆಲ್ಪಿ ಹ್ಯಾಂಡ್ಸ್ ಎಂಬ ಸೇವಾ ಸಂಸ್ಥೆಯ ಸಹಯೋಗದಲ್ಲಿ ತಲಪಿಸುತ್ತೇವೆ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

ಹೆಲ್ಪಿ ಹ್ಯಾಂಡ್ಸ್ ಸಂಸ್ಥೆಯ ಅಮನ್ ಮೊಹಮ್ಮದ್, ವಿಕ್ರಾಂತ ಶೆಣೈ, ವಿಜೇತ ರೈ, ಶಮಂತ್ ಆಳ್ವ, ಹಾಗೂ ಅಮೃತ ಉಪಸ್ಥಿತರಿದ್ದರು. ಶ್ರೀರಾಮ ಸೌಧದ ಮಾಲಕ ಉಮೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ಉಷಾ ಮೆಡಿಕಲ್ಸ್‌ನ 8762526002 ನಂಬರಿಗೆ ವಾಟ್ಸಪ್ ಅಥವಾ ಕರೆ ಮಾಡಿದಲ್ಲಿ ಔಷಧಗಳನ್ನು ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಲಭ್ಯವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.