ಫಿಲೋಮಿನಾದ ಮೊಹಮ್ಮದ್ ಆಶಿಕ್, ನಿಹಾಲ್‌ರವರಿಗೆ ಭಾರತ್ ಸ್ಕೌಟ್ಸ್,ಗೈಡ್ಸ್‌ನಿಂದ ರಾಜ್ಯ ಪುರಸ್ಕಾರ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇದರ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ ರೇಂಜರ್‍ಸ್‌ನಲ್ಲಿ ಅತ್ತ್ಯುತ್ತಮ ಸೇವೆ ನಿರ್ವಹಿಸಿದವರಿಗೆ ನೀಡುವ ರಾಜ್ಯ ಪುರಸ್ಕಾರಕ್ಕೆ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಈರ್ವರಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಲಭಿಸಿದೆ.

ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ್ ರೇಂಜರ್‍ಸ್ ಯೂನಿಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಫಿಲೋಮಿನಾ ಪದವಿ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಮೊಹಮ್ಮದ್ ಆಶಿಕ್ ಮತ್ತು ನಿಹಾಲ್ ಎನ್.ಎಸ್‌ರವರಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಲಭಿಸಿರುವುದಾಗಿದೆ. ರಾಜ್ಯ ಪುರಸ್ಕಾರ ಪಡೆದ ಈರ್ವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಹಾಗೂ ರೋವರ್ ರೇಂಜರ್‍ಸ್‌ನ ನಿರ್ದೇಶಕರಾದ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್‌ರವರು ಅಭಿನಂದಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.