Breaking News

ಪುತ್ತೂರಿನಲ್ಲೊಂದು ವಿನೂತನ ಸಂತೆ ವ್ಯವಸ್ಥೆ…! ಹಿಂದುಸ್ತಾನ ಡೈಲಿ ಸಂತೆ ಮಾರ್ಕೆಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮನೆ ಬಳಕೆಯ ಸಾಮಾಗ್ರಿಗಳಾದ ದಿನಸಿ, ಜವುಳಿ, ತರಕಾರಿ, ಹಣ್ಣಹಂಪಲು, ಎಲೆಕ್ಟ್ರಿಕಲ್, ಪ್ಲಾಸ್ಟಿಕ್ ಸಹಿತ ಇನ್ನಿತರ ಹಲವು ಬಗೆಯ ಗೃಹೋಪಯೋಗಿ ಸಾಮಾಗ್ರಿಗಳ ಒಂದೇ ಸೂರಿನಡಿಯಲ್ಲಿ ದೊರೆಯಲಿರುವ ಹಿಂದೂಸ್ತಾನ್ ಡೈಲಿ ಸಂತೆ ಮಾರ್ಕೆಟ್ ಆ.24ರಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಉದ್ಘಾಟಿಸಿದ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ನಗರದ ಹೃದಯ ಭಾಗದಲ್ಲಿ ಪ್ರಾರಂಭಗೊಂಡಿರುವ ಡೈಲಿ ಸಂತೆ ಮಾರ್ಕೆಟ್‌ನಲ್ಲಿ ಆದಿತ್ಯವಾರ ಸೇರಿದಂತೆ ವಾರದ ಎಲ್ಲಾ ದಿನಗಳಲ್ಲಿ ಗ್ರಾಹಕರಿಗೆ ಸೇವೆ ನೀಡಲಿದೆ. ಸೋಮವಾರ ಮಾತ್ರ ದೊರೆಯುತ್ತಿದ್ದ ತರಕಾರಿ, ಹಣ್ಣು ಹಂಪಲು ಸೇರಿದಂತೆ ದಿನ ಬಳಕೆಯ ಸಾಮಾಗ್ರಿಗಳು ಇನ್ನು ವಾರದ ಎಲ್ಲಾ ದಿನಗಳಲ್ಲಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ದೊರೆಯಲಿದ್ದು ಗ್ರಾಹಕರು ಸಧುಪಯೋಗಪಡಿಡಿಕೊಳ್ಳುವಂತೆ ಅವರು ತಿಳಿಸಿದರು.

ಹಿಂದೂಸ್ಥಾನ ಗ್ರೂಪ್‌ನ ಚೆಯರ್‌ಮೆನ್ ಡಾ|ಮಹಮ್ಮದ್ ಇಬ್ರಾಹಿಂ ಪಾವೂರು, ವಕ್ಫ್ ಬೋರ್ಡ್ ಮಾಜಿ ಸದಸ್ಯ ಬಿ.ಪಿ ಹಸನ್ ಹಾಜಿ ಯುನಿಟಿ, ನಗರ ಸಭಾ ಸದಸ್ಯರಾದ ಅಶೋಕ್ ಶೆಣೈ, ರಿಯಾಝ್, ಇಂಟಕ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಪುತ್ತೂರು ವಿಧಾನ ಸಭಾ ಕ್ಷೇತ್ರ ಎಸ್‌ಡಿಪಿಐ ಅಧ್ಯಕ್ಷ ಅಬೂಬಕ್ಕ್ ಸಿದ್ದೀಕ್, ಕಾರ್ಯದರ್ಶಿ ಅಶ್ರಫ್ ಬಾವೂಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಫ್, ಪುರಸಭಾ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ವಿಟ್ಲ-ಉಪ್ಪಿನಂಗಡಿ ಯಂಗ್ ಬ್ರಿಗೇಡ್‌ನ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಬಪ್ಪಳಿಗೆ ಮಸ್ಜುದುನ್ನೂರುನ ಅಧ್ಯಕ್ಷ ಬಿ.ಎಚ್ ಮಹಮ್ಮದ್, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ, ಸೂಫಿ ಬಪ್ಪಳಿಗೆ, ತರಕಾರಿ ವ್ಯಾಪಾರಿ ಸಂಘದ ಅಧ್ಯಕ್ಷ ಪಿ.ಕೆ ಹಮೀದ್ ಹಾಗೂ ಉಪಾಧ್ಯಕ್ಷ ಆನಂದ ಸಿ,ಜೆ, ಪ್ರಕಾಶ್ ಪುರುಷರಕಟ್ಟೆ, ಹನೀಪ್ ಪುಣ್ಚತ್ತಾರು ಹಾಗೂ ನ್ಯಾಯವಾದಿ ಶಾಕೀರ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಮ್ಹಾಲಕ ಮೋನು ಬಪ್ಪಳಿಗೆ ಸ್ವಾಗತಿಸಿ, ವಂದಿಸಿದರು.

ಪುತ್ತೂರಿನಲ್ಲಿ ಪ್ರಥಮ ಮಳಿಗೆ
ಬೆಳೆಯುತ್ತಿರುವ ಪುತ್ತೂರಿಗೆ ಮಾರುಕಟ್ಟೆ ಕೊರತೆ ನೀಗಿಸುವ ನಿಟ್ಟಿನಲ್ಲಿ ವಾರಕ್ಕೊಮ್ಮೆ ಕಡಿಮೆ ದರದಲ್ಲಿ ಸಿಗುತ್ತಿದ್ದ ತರಕಾರಿ, ಹಣ್ಣುಹಂಪಲು, ಬಾಳೆ ಹಣ್ಣು, ಕಡಿಮೆ ದರದ ಬಟ್ಟೆಗಳು, ಮನೆಗೆ ಅತೀ ಮುಖ್ಯವಾದ ದಿನಸಿ ಸಾಮಾಗ್ರಿಗಳು, ಗೃಹಬಳಕೆಗೆ ಬೇಕಾದ ಪಾತ್ರೆ ವಸ್ತುಗಳು, ಎಲೆಕ್ಟ್ರಿಲ್ ವಸ್ತುಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು ಸೇರಿದಂತೆ ಸಾಧಾರಣ ಸಂತೆಯಲ್ಲಿ ಸಿಗುವಂತಹ ಎಲ್ಲಾ ರೀತಿಯ ಸಾಮಾಗ್ರಿಗಳು ಒಂದೇ ಕಡೆ ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು ಪುತ್ತೂರಿನಲ್ಲಿ ಪ್ರಥಮ ಭಾರಿಗೆ ಇಂತಹ ಬೃಹತ್ ಮಳೆಗೆಯು ಪ್ರಾರಂಭಗೊಂಡಿದೆ.

ಒಂದೇ ಸೂರಿನಡಿಯಲ್ಲಿ 18 ಮಳಿಗೆಗಳು:
ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ಸುಮಾರು ೩೬೦೦ ಚದರ ಅಡಿ ವಿಸ್ತೀರ್ಣದ ವಿಶಾಲ ಮಳಿಗೆಯಲ್ಲಿ ವಿವಿಧ ಬಗೆಯ ಒಟ್ಟು ೧೮ ಮಳಿಗೆಗಳನ್ನು ಹೊಂದಿದೆ. ಇದರಲ್ಲಿ ೪ ತರಕಾರಿ ಅಂಗಡಿಗಳು, ೨ ಹಣ್ಣು ಹಂಪಲು, ೨ ದಿನಸಿ ಅಂಗಡಿಗಳು, ೨ ಪಾದರಕ್ಷೆಗಳ ಮಳಿಗೆ ಹಾಗೂ ತಲಾ ಒಂದೊಂದು ಇಲೆಕ್ಟ್ರಿಕಲ್, ಸ್ಟೀಲ್ ಪಾತ್ರೆ ಸಾಮಾಗ್ರಿ, ಹುಳಿ, ಸೊಪ್ಪು, ಬೇಕರಿ, ಜವುಳಿ, ಬಾಳೆ ಹಣ್ಣು ಇನ್ನಿತರ ಮಳಿಗೆಗಳು ಡೈಲಿ ಸಂತೆಯಲ್ಲಿ ಲಭ್ಯವಿರಲಿದೆ. ವಿಶಾಲವಾದ ಪಾರ್ಕಿಂಗ್ ಸೇರಿದಂತೆ ಗ್ರಾಹಕರಿಗೆ ಇನ್ನಿತರ ಸೌಲಭ್ಯಗಳು ದೊರೆಯಲಿದೆ. ಇದರಲ್ಲಿ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಯುವಂತೆ ಊರಿನ ತರಕಾರಿ, ಎಲೆ ಅಡಿಕೆ, ಬಾಳೆಗೊನೆ ಮೊದಲಾದವುಗಳನ್ನು ಸಂತೆಯ ಮಾದರಿಯಲ್ಲಿ ಮಾರಾಟ ಮಾಡಲು ಮಳಿಗೆಯಲ್ಲಿ ಸ್ಥಳಾವಕಾಶ ದೊರೆಯಲಿದೆ.

ಕೊರೋನಾ ಲಾಕ್‌ಡೌನ್‌ನಿಂದ ನಿಂತು ಹೋದ ಸಂತೆಯಿಂದ ಗ್ರಾಹಕರಿಗೆ ಒಂದೇ ಕಡೆ ತರಕಾರಿ ಹಾಗೂ ದಿನ ಬಳಕೆಯ ಸಾಮಾಗ್ರಿಗಳ ಕೊರತೆ ಹಾಗೂ ತರಕಾರಿ ವ್ಯಾಪಾರಿಗಳ ಗೋಳನ್ನು ಮನಗಂಡು ಡೈಲಿ ಸಂತೆ ಮಾರ್ಕೆಟ್ ಪ್ರಾರಂಭಿಸಲಾಗಿದೆ. ಇಲ್ಲಿ ಒಟ್ಟು ೧೮ ವಿವಿಧ ಬಗೆಯ ಅಂಗಡಿಗಳು ಒಂದೇ ದಿನ ಉದ್ಘಾಟನೆಗೊಂಡಿದೆ. ಗ್ರಾಹಕರಿಗೆ ದಿನ ಬಳಕೆಯ ಸಾಮಾಗ್ರಿಗಳು ಒಂದೇ ಸೂರಿನಡಿಯಲ್ಲಿ ದೊರೆಯಲು ಅನುಕೂಲವಾಗುವಂತೆ ಪ್ರಾರಂಭಿಸಲಾಗಿದೆ. ಅಲ್ಲದೆ ರೈತರಿಗೆ ತಾವು ಬೆಳೆದ ತರಕಾರಿಗಳು ಮಾರಾಟಕ್ಕೆ ಉಚಿತ ಸ್ಥಳಾವಕಾಶ ನೀಡಲಾಗುವುದು. ನಮ್ಮ ಮಳಿಗೆಯು ಬೆಳಿಗ್ಗೆ೬ ಗಂಟೆಯಿಂದ ರಾತ್ರಿ ೯ಗಂಟೆಯ ತನಕ ಕಾರ್ಯನಿರ್ವಹಿಸಲಿದೆ ಮೋನು ಬಪ್ಪಳಿಗೆ, ಮ್ಹಾಲಕರು

About The Author

Related posts

1 Comment

  1. Sudarshan

    ಪುತ್ತೂರು ನಗರದಾದ್ಯಂತ ಪಾರ್ಕಿಂಗ್ ಕೊರತೆ ಇರುವಾಗ ಹೊಸ ಕಟ್ಟಡ ಗಳಲ್ಲಿ ಪಾರ್ಕಿಂಗ್ ಜಾಗವನ್ನು ಪಾರ್ಕಿಂಗ್ ಗೆ ಮೀಸಲಿಡತಕ್ಕದ್ದು ಎಂಬ ನಿರ್ಬಂಧ ಇರುವಾಗ ನಗರಸಭೆ ಅಲ್ಲಿ ಸಂತೆ ಮಾಡಲು ಪರವಾನಿಗೆ ನೀಡುವ ಮೂಲಕ ಕಾನೂನು ಮುರಿದಿದೆ ಮತ್ತು ಬಸ್ ನಿಲ್ದಾಣ ಬಳಿ ನಗರಸಭೆಇನ್ನಷ್ಟು ಪಾರ್ಕಿಂಗ್ ಸಮಸ್ಯೆ ಹುಟ್ಟು ಹಾಕಲಿದೆ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.