ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಾವು ಗದ್ದೆಯಲ್ಲಿ ಯಂತ್ರಶ್ರೀ ಪದ್ಧತಿ ಭತ್ತ ಬೇಸಾಯ,ಪ್ರಾತ್ಯಕ್ಷತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಂಕದಮಜಲು ಗದ್ದೆಯಾಗಿರುವ ಈ ಗದ್ದೆಯಲ್ಲಿ ಅನಾದಿ ಕಾಲದಿಂದಲೂ ಬೇಸಾಯ ಮಾಡಲಾಗುತ್ತಿತ್ತು. ಆದರೆ ಬೇರೆ ಕಾರಣಗಳಿಂದ ಕಳೆದ ೨೦ ವರ್ಷಗಳಿಂದ ಬೇಸಾಯ ಮಾಡುವುದನ್ನು ನಿಲ್ಲಿಸಲಾಗಿದೆ. ಈ ವರ್ಷ ಕೊರೋನ ಮಹಾಮಾರಿ ಬಂದ ಹಿನ್ನೆಲೆಯಲ್ಲಿ ಉಳಿದ ಕೆಲಸ ಕಾರ್ಯಗಳಿಗೆ ಹಿನ್ನಡೆಯಾದರೂ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈ ವರ್ಷ ಗ್ರಾಮಾಭಿವೃದ್ಧಿ ಯೋಜನೆಯವರ ಸಹಕಾರದೊಂದಿಗೆ ಗದ್ದೆ ಬೇಸಾಯ ಮಾಡುವ ಕೆಲಸಕ್ಕೆ ಕೈ ಹಾಕಲಾಗಿದೆ. ಹಲವು ಕಡೆಗಳಲ್ಲಿ ಹಡೀಲು ಬಿದ್ದ ಗದ್ದೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಈಗಾಗಲೇ ಬೇಸಾಯ ಮಾಡುವ ಕೆಲಸ ನಡೆಯುತ್ತಿರುವುದು ಒಳ್ಳೆಯ ಕೆಲಸವಾಗಿದೆ ಎಂದು ಹನುಮಗಿರಿ ಶ್ರೀ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಹೇಳಿದರು.

ಅವರು ಅರಿಯಡ್ಕ ಗ್ರಾಮದ ಉಳ್ಳಾಕುಲು ಮುಡಿ ಇಡುವ ಗದ್ದೆ ಅಂಕದಮಜಲು ಮತ್ತು ಒತ್ತೆಕೋಲ ನಡೆಯುವ ಗದ್ದೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ನಡೆದ ಯಂತ್ರಶ್ರೀ ಪದ್ಧತಿ ಭತ್ತ ಬೇಸಾಯ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕೃಷಿ ಅಧಿಕಾರಿ ಉಮೇಶ್‌ರವರು ಯಂತ್ರಶ್ರೀ ಪದ್ಧತಿ ಭತ್ತ ಬೇಸಾಯ ಬಗ್ಗೆ ಮಾಹಿತಿ ನೀಡಿದರು. ಯೋಜನಾಧಿಕಾರಿ ಜನಾರ್ದನ್‌ರವರು ಮಾತನಾಡಿ, ವಿಶೇಷವಾಗಿ ಯಂತ್ರದ ಮೂಲಕ ಭತ್ತ ಬೇಸಾಯವನ್ನು ರೈತರಿಗೆ ಪರಿಚಯಿಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಗಿದೆ. ಈ ವರ್ಷ ತಾಲೂಕಿನಲ್ಲಿ ೧೦೦ ಎಕರೆ ಭೂಮಿಯಲ್ಲಿ ಭತ್ತ ಬೇಸಾಯ ಆಗಿದ್ದು, ಸುಮಾರು ೨೦ ಎಕರೆ ಹಡೀಲು ಬಿದ್ದ ಭೂಮಿಯಲ್ಲಿ ಭತ್ತ ಬೇಸಾಯ ಮಾಡುವ ಕೆಲಸಕ್ಕೆ ರೈತರು ಇಳಿದಿರುವುದು ಶ್ಲಾಘನೀಯ ಎಂದರು.ಭತ್ತ ಬೇಸಾಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ರವರು ಮಾತನಾಡಿ, ಕೋರೋನ ಮಹಾಮಾರಿಯಿಂದ ಜನರ ದಿನ ನಿತ್ಯದ ಕೆಲಸಗಳಿಗೆ ತೊಂದರೆಯಾಗಿದ್ದರೂ ಕೃಷಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ, ಪ್ರಕೃತಿಯಲ್ಲಿ ಬದಲಾವಣೆ ಸಹಜ ಅದೇ ರೀತಿಯಲ್ಲಿ ಕೃಷಿಯಲ್ಲೂ ಬದಲಾವಣೆ ತರಬೇಕಾಗಿದೆ. ಕೃಷಿಕರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದು ಹೇಳಿದ ಅವರು ಪುತ್ತೂರು ಹೋಬಳಿಮಟ್ಟದಲ್ಲೂ ಕೃಷಿ ಯಂತ್ರೋಪಕರಣಗಳ ಕೇಂದ್ರ ಆರಂಭಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಇದೆ ಎಂದು ಹೇಳಿ ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಕಾರ್ಯಕ್ರಮದಡಿಯಲ್ಲಿ ನಮ್ಮೂರಿನ ಎರಡು ಪ್ರತಿಷ್ಠಿತ ಗದ್ದೆಗಳ ಬೇಸಾಯ ನಡೆಯುತ್ತಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಳೆದ ಹಲವು ವರ್ಷಗಳಿಂದ ಸಹಕಾರ ನೀಡುತ್ತಿದೆ. ಇಂದಿನ ಕೋರೋನದ ಸಂಕಷ್ಟದಲ್ಲೂ ಯೋಜನೆ ಜನರ ಕೃಷಿ ಬದುಕಿಗೆ ಹೊಸ ಬೆಳಕು ಕೊಡುವ ಕೆಲಸ ಮಾಡುತ್ತಿದೆ. ಕೊರೋನ ಸಂದರ್ಭದಲ್ಲಿ ಕೃಷಿಯ ಬಗ್ಗೆ ಜನರು ಆಕರ್ಷಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಸಾಯ ಅಭಿವೃದ್ಧಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ಪರಿಸರ ಜಾಗೃತಿ ದಿನವಾಗಿ ನನ್ಯ ಅಚ್ಚುತ ಮೂಡೆತ್ತಾಯರವರು ಗಿಡ ನೆಟ್ಟರು.

ವೇದಿಕೆಯಲ್ಲಿ ಮೋನಪ್ಪ ಕೆರೆಮಾರು, ಒತ್ತೆಕೋಲ ಗದ್ದೆಯ ಯಜಮಾನ ಸುಬ್ಬ ಪಾಟಾಳಿ, ಜನಜಾಗೃತಿ ಸಂಚಾಲಕ ಲೋಕೇಶ್ ಚಾಕೋಟೆ, ಒಕ್ಕೂಟದ ಅಧ್ಯಕ್ಷ ವೆಂಕಪ್ಪ ಗೌಡ, ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಪ್ರಗತಿಬಂಧು ಸ್ವಸಹಾಯ ಸಂಘದ ಅಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಅರಿಯಡ್ಕ ವಲಯ ಮೇಲ್ವಿಚಾರಕಿ ಶುತಿ ಸ್ವಾಗತಿಸಿದರು. ಅರಿಯಡ್ಕ ವಲಯ ಅಧ್ಯಕ್ಷ ನವೀನ್ ಬಿ.ಡಿ ವಂದಿಸಿದರು. ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.