ಕಾಣಿಯೂರು ಗ್ರಾ.ಪಂ, ಪಿಡಿಓಗೆ ಜೀವ ಬೆದರಿಕೆ- ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರಿಗೆ ಕಾಣಿಯೂರು ಗ್ರಾಮದ ನಾವೂರು ತೇಜಪ್ರಸಾದ್ ಎಂಬವರು ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಪಿಡಿಓ ಜಯಪ್ರಕಾಶ್ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಣಿಯೂರು ಗ್ರಾಮದ ನಾವೂರು ಮುತ್ತಪ್ಪ ಗೌಡ ಎಂಬವರ ಪುತ್ರ ತೇಜಪ್ರಸಾದ್ ಎಂಬವರು ಜು ೨೨ರಂದು ಕಾಣಿಯೂರು ಗ್ರಾಮ ಪಂಚಾಯತ್‌ನ ಆಡಳಿತಾಧಿಕಾರಿ, ಸುಳ್ಯ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಕೆ.ಎಂ. ಗುರುಮೂರ್ತಿ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾತನಾಡಿದ್ದು, ಈ ಸಮಯದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯಾದ ನನಗೆ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ತೇಜಪ್ರಸಾದ್ ಜೀವ ಬೆದರಿಕೆ ಹಾಕಿರುವ ವಾಯ್ಸ್ ರೆಕಾರ್ಡ್ ಇದನ್ನು ಆಡಳಿತಾಧಿಕಾರಿಯವರು ನನ್ನ ಮೊಬೈಲ್‌ಗೆ ರವಾನಿಸಿದ್ದಾರೆ. ವಾಯ್ಸ್ ರೆಕಾರ್ಡ್‌ನಲ್ಲಿ ನನಗೆ ಕೊಲೆ ಬೆದರಿಕೆ ಹಾಕಿರುವುದು ಸ್ಪಷ್ಟವಾಗಿರುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತೇಜಪ್ರಸಾದ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ನನ್ನ ಅಭಿವೃದ್ಧಿ ಅಧಿಕಾರಿ ಹುದ್ದೆಯ ಕರ್ತವ್ಯಕ್ಕೆ ರಕ್ಷಣೆ ಒದಗಿಸುವಂತೆ ಪೊಲೀಸ್ ಠಾಣೆಗೆ ಪಿಡಿಓ ಜಯಪ್ರಕಾಶ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.