ಅಮ್ಚಿನಡ್ಕ: ಎಸ್ಸೆಸ್ಸೆಫ್, ಎಸ್.ವೈ.ಎಸ್ ಹಾಗೂ ಲಯನ್ಸ್ ಕ್ಲಬ್ ಕಾವು-ಪುತ್ತೂರು ವತಿಯಿಂದ ಆಯುಷ್ಮಾನ್  ಕಾರ್ಡ್ ವಿತರಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಮ್ಚಿನಡ್ಕ ಎಸ್ಸೆಸ್ಸೆಫ್, ಎಸ್.ವೈ.ಎಸ್ ಹಾಗೂ ಲಯನ್ಸ್ ಕ್ಲಬ್ ಕಾವು-ಪುತ್ತೂರು ವತಿಯಿಂದ ಆಯುಷ್ಮಾನ್ ಕಾರ್ಡ್ ವಿತರಣಾ ಶಿಬಿರ ಆ.24ರಂದು ಅಮ್ಚಿನಡ್ಕ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆಯಿತು. ಶಿಬಿರದ ಸಭಾ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ನಾಯಕ ಹಾಫಿಳ್ ರಂಶೀದ್ ಸಖಾಫಿಯವರು ದುಆದೊಂದಿಗೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಪುತ್ತೂರು ವಲಯ ಅಧ್ಯಕ್ಷ ರಮೇಶ್ ರೈ ಸಾಂತ್ಯರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಲಯನ್ಸ್ ಕ್ಲಬ್ ಕಾವು ವಲಯ ಅಧ್ಯಕ್ಷ ಹೇಮನಾಥ ಶೆಟ್ಟಿಯವರು ಮಾತನಾಡಿ ಆಯುಷ್ಮಾನ್ ಕಾರ್ಡ್ ಬಗ್ಗೆ ವಿವರಣೆ ನೀಡುವುದರೊಂದಿಗೆ ಲಯನ್ಸ್ ಕ್ಲಬ್ ಹಾಗೂ ಎಸ್ಸೆಸ್ಸೆಫ್, ಎಸ್.ವೈ.ಎಸ್ ಸಂಘಟನೆಗಳ ಕಾರ್ಯ ಸಾಧನೆಗಳ ಬಗ್ಗೆ ಹಾಗೂ ಸಂಘಟನೆಗಳ ಅಗತ್ಯತೆ ಬಗ್ಗೆ ವಿವರಿಸಿದರು.

ಎಸ್ಸೆಸ್ಸೆಫ್ ಅಮ್ಚಿನಡ್ಕ ಯುನಿಟ್ ಅಧ್ಯಕ್ಷ ಹನೀಫ್ ಮಿಸ್ಬಾಹಿ, ಅಮ್ಚಿನಡ್ಕ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಖಾದರ್ ಸಿ.ಎ ಹಾಗೂ ಎಸ್ಸೆಸ್ಸೆಫ್, ಎಸ್.ವೈ.ಎಸ್ ಮತ್ತು ಲಯನ್ಸ್ ಕ್ಲಬ್ ನಾಯಕರು, ಕಾರ್ಯಕರ್ತರು ಶಿಬಿರದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್.ವೈ.ಎಸ್ ನಾಯಕ ಅಬ್ದುಲ್ ಖಾದರ್ ಬದಿಯಡ್ಕ ನಿರೂಪಿಸಿದರು. ನಿಝಾಮ್ ಮತ್ತು ಸರಫುದ್ದೀನ್ ಸಹಕರಿಸಿದರು. ಲಯನ್ಸ್ ಕ್ಲಬ್ ವತಿಯಿಂದ ತೆಂಗಿನ ಸಸಿಯನ್ನು ಉಚಿತವಾಗಿ ವಿತರಿಸಲಾಯಿತು. ಸುಮಾರು 250ಕ್ಕಿಂತ ಹೆಚ್ಚು ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.