ಕಡಬ ಅಡಿಗ ಮೋಟಾರ್ಸ್ ನಲ್ಲಿ ಹಬ್ಬದ ಸಂಭ್ರಮ ದ್ವಿಚಕ್ರ ವಾಹನ ಖರೀದಿಗೆ ವಿಶೇಷ ಸೇಲ್ಸ್ ಆಫರ್‌ | ಗಣೇಶ ಚತುರ್ಥಿಯ ಅಮೋಘ ಕೊಡುಗೆಗಳು ಆ.30ರ ತನಕ ವಿಸ್ತರಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ತಾಲೂಕಿನಲ್ಲಿ ಕಳೆದ ೫ ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್‍ಸ್‌ನಲ್ಲಿ ಗಣೇಶ ಚತುರ್ಥಿಯ ಅಮೋಘ ಖರೀದಿ ಆಫರ್‌ಗಳು ನಡೆಯುತ್ತಿದೆ. ಗಣೇಶ ಚತುರ್ಥಿಯ ವಿಶೇಷ ದಿನದಂದು ಸುಮಾರು ೨೦ಕ್ಕೂ ಅಧಿಕ ಗ್ರಾಹಕರು ತಮ್ಮ ನೆಚ್ಚಿನ ಟಿವಿಎಸ್ ದ್ವಿಚಕ್ರ ವಾಹನ ಖರೀದಿಸಿ ಸಂಭ್ರಮಿಸಿದರು. ಕಡಬದ ದಿನೇಶ್, ತೀರ್ಥೇಶ್ ಮಡಪ್ಪಾಡಿ, ಬಾಲಕೃಷ್ಣ ಗೌಡ ಕುಟ್ರುಪಾಡಿ, ಜಯಂತಿ ಕೋಡಿಂಬಾಳ, ಗಂಗಾಧರ ಗೌಡ ನೆಕ್ಕಿಲಾಡಿ, ಪೃಥ್ವಿ ಪೇರಡ್ಕ, ಅಶ್ವಿನಿ ನೆಟ್ಟಣ, ಸುಕುಮಾರ ಕೋಡಿಂಬಾಳ, ಹರೀಶ್ ಐತ್ತೂರು, ಶ್ರೀಧರ್ ಸುಬ್ರಹಣ್ಯ, ಹರ್ಷಿತ್ ಕುಂತೂರು, ಚೈತ್ರ ಕಡಬ, ಜಯಶ್ರೀ ಪಂಬೆತ್ತಾಡಿ, ಸೆಕಿಮ ಮರ್ದಾಳ, ರಜನೀಶ್ ಬಳ್ಪ, ಸುಶಾಂತ್ ನಿಂತಿಕಲ್ಲು, ಶಶಿಕುಮಾರ್ ಪುತ್ತೂರು, ಬಿನ್ ಸನ್ ನೆಲ್ಯಾಡಿ, ಪುತ್ತುಮೋನ್ ಕಡಬ, ರಾಜೇಶ್ ಉರುವಾಲು ಮೊದಲಾದವರು ಖರೀದಿಸಿದರು.

ಸ್ಕ್ರ್ಯಾಚ್ – ವಿನ್ :
ಗ್ರಾಹಕರಿಗೆ ಟಿವಿಎಸ್ ವಾಹನ ಖರೀದಿಯೊಂದಿಗೆ ರೂ. ೨೦೦೦ ತನಕ ಕ್ಯಾಶ್ ಬ್ಯಾಕ್ ಡಿಸ್ಕೌಂಟ್ ಲಭಿಸಲಿದೆ. ಹಾಗೂ ಪ್ರತೀ ಖರೀದಿಯೊಂದಿಗೆ ಉಚಿತ ಹೆಲ್ಮೆಟ್ ಮತ್ತು ಪೆಟ್ರೋಲ್ ಲಭಿಸಲಿದೆ.

ಅತೀ ಕಡಿಮೆ ಮುಂಗಡ ಪಾವತಿ ಮತ್ತು ಬಡ್ಡಿ ದರ :
ಬಿ.ಎಸ್.೬ ವಾಹನಗಳಿಗೆ ಮೊದಲ ಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್‌ಗಳನ್ನು ಟಿವಿಎಸ್ ಕ್ರೆಡಿಟ್ ಮೂಲಕ ಪರಿಚಯಿಸಲಾಗಿದೆ. ರೂ.೯೯೯೯ ಮುಂಗಡ ಪಾವತಿ ಹಾಗೂ ಶೇ. ೬.೯೯ ಬಡ್ಡಿ ದರದಲ್ಲಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಬಹುದಾಗಿದೆ. ಸರಳ ದಾಖಲೆಯೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವಿದ್ದು ತಕ್ಷಣ ಮಂಜೂರಾತಿ ನಡೆಯುತ್ತದೆ.

ವಾಹನ ಎಕ್ಸ್‌ಚೇಂಜ್ ಸೌಲಭ್ಯ :
ಗ್ರಾಹಕರು ತಮ್ಮ ಯಾವುದೇ ಕಂಪೆನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿ.ವಿ.ಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಯ ಹಾಗೂ ರೂ. ೨೦೦೦ ತನಕ ಎಕ್ಸೇಂಜ್ ಬೋನಸ್ ಕೂಡ ಪಡೆಯಬಹುದಾಗಿದೆ.

ಜಿಲ್ಲೆಯಲ್ಲೇ ಸ್ಪರ್ಧಾತ್ಮಕ ದರಲ್ಲಿ ಮಾರಾಟ ಮತ್ತು ಗುಣಮಟ್ಟದ ಸೇವೆಯೊಂದಿಗೆ, ಈ ಎಲ್ಲಾ ಹಬ್ಬದ ಕೊಡುಗೆಗಳು ಕೇವಲ ಅಡಿಗ ಮೋಟಾರ್‍ಸ್ ಕಡಬದಲ್ಲಿ ಮಾತ್ರವೇ ಲಭ್ಯವಿದ್ದು, ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ಕೊಡುಗೆಗಳನ್ನು ಅಗಸ್ಟ್ ೩೦ರ ವರೆಗೆ ವಿಸ್ತರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೭೬೧೮೭೬೬೬೩೬ ಅಥವಾ ೦೮೨೫೧-೨೬೦೨೬೦ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.