Breaking News

ಅಂಬಿಕಾ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಭರಪೂರ ಅವಕಾಶ | ನೂತನ ಕಾಂಬಿನೇಶನ್, ಸರ್ಕಾರಿ ಉದ್ಯೋಗಕ್ಕೆ ತರಬೇತಿ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಇಲ್ಲಿನ ಪ್ರತಿಷ್ಟಿತ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದಲ್ಲಿ ಪುತ್ತೂರಿನ ಅನೇಕ ಶಿಕ್ಷಣಪ್ರೇಮಿಗಳ ಆಶಯದಂತೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ನಿಗದಿತ ಶಿಕ್ಷಣದೊಂದಿಗೆ ಹೆಚ್ಚುವರಿಯಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗೆ ತರಬೇತಿ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಪರಿಸರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗೆ ಜಾಗೃತಿ ಮೂಡಿಸುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಕ್ಕೆ ಅಡಿಯಿಡುವಂತೆ ಮಾಡುವುದಕ್ಕೆ ಇಂತಹದ್ದೊಂದು ಪ್ರಯತ್ನ ಅಂಬಿಕಾ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಉದ್ಯೋಗ ಭದ್ರತೆಯನ್ನೂ ಕಲ್ಪಿಸಿಕೊಡಬೇಕಾಗಿರುವುದು ಇಂದಿನ ಕಾಲಘಟ್ಟದ ಅಗತ್ಯವೆಂಬುದನ್ನು ಅಂಬಿಕಾ ವಿದ್ಯಾ ಸಂಸ್ಥೆ ಮನಗಂಡಿದೆ. ಅದರಲ್ಲೂ ಕಲಾ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗದ ಆತಂಕ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸರ್ಕಾರಿ ಉದ್ಯೋಗಗಳ ಬಗೆಗಿನ ಮಾಹಿತಿ, ಜಾಗೃತಿ ಮತ್ತು ತರಬೇತಿ ಒದಗಿಸುವುದು ಅನಿವಾರ್ಯ ಎಂಬುದು ಸಂಸ್ಥೆಯ ನಿಲುವು.

ಎಸ್‌ಡಿಎ, ಎಫ್‌ಡಿಎ, ರೈಲ್ವೇ, ಪೋಲೀಸ್ ಇಲಾಖೆ, ಪಿಡಿಒ ಹೀಗೆ ಅನೇಕ ಪರೀಕ್ಷೆಗಳ ಬಗೆಗೆ ಪದವಿಯ ಮೊದಲ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಕಾಲಕಾಲಕ್ಕೆ ತಜ್ಞರಿಂದಲೂ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದಕ್ಕೆ ಸಂಸ್ಥೆ ತಯಾರಾಗಿದೆ.

ನೂತನ ಕಾಂಬಿನೇಶನ್: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ, ಮನಃಶಾಸ್ತ್ರದ ಜತೆಗೆ ತತ್ವಶಾಸ್ತ್ರವನ್ನು ಆರಂಭಿಸಲಾಗುತ್ತಿದೆ. ಈ ಹಿಂದೆ ದೇಶದಲ್ಲೇ ಮೊದಲ ಬಾರಿಗೆ ಬಿಎಸ್ಸಿ ಪದವಿಯಲ್ಲಿ ತತ್ವಶಾಸ್ತ್ರವನ್ನು ಸಂಯೋಜನೆಪಡಿಸಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಂಸ್ಥೆ ಇದೀಗ ಕಲಾ ಪದವಿಯಲ್ಲಿ ಇಡಿಯ ರಾಜ್ಯದಲ್ಲೇ ಮೊದಲ ಬಾರಿಗೆ ಪತ್ರಿಕೋದ್ಯಮದೊಂದಿಗೆ ತತ್ವಶಾಸ್ತ್ರ ವಿಷಯವನ್ನು ಅಳವಡಿಸುವುದಕ್ಕೆ ಸನ್ನದ್ಧವಾಗಿದೆ. ಕರಾವಳಿ ಪ್ರದೇಶದ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಮನೋಭಾವ ಸಹಜವಾಗಿಯೇ ಇದ್ದು ಅದನ್ನು ಮತ್ತಷ್ಟು ಪಕ್ವಗೊಳಿಸಿ ಸಮಾಜಕ್ಕೆ ಪ್ರಜ್ಞಾವಂತ ನಾಗರಿಕರನ್ನು ತಯಾರು ಮಾಡಿಕೊಡುವ ಕಾಯಕಕ್ಕೆ ಅಂಬಿಕಾ ವಿದ್ಯಾಸಂಸ್ಥೆ ಅಡಿಯಿಡುತ್ತಿರುವುದು ಗಮನಾರ್ಹ. ಇದರೊಂದಿಗೆ ಕಲಾ ಪದವಿಯಲ್ಲಿ ಐಚ್ಚಿಕ ಇಂಗ್ಲಿಷ್, ಐಚ್ಚಿಕ ಕನ್ನಡ, ಐಚ್ಚಿಕ ಸಂಸ್ಕೃತ ವಿಷಯಗಳೂ ಲಭ್ಯ ಇವೆ. ವಿಜ್ಞಾನ ಪದವಿಯಲ್ಲಿ ಭೌತಶಾಸ್ತ್ರ, ಗಣಿತ ಶಾಸ್ತ್ರ, ಮನಃಶಾಸ್ತ್ರ ಹಾಗೂ ತತ್ವಶಾಸ್ತ್ರ ವಿಷಯಗಳು ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿವೆ.

ಉಚಿತ ಶಿಕ್ಷಣ: ಕಲೆ ಅಥವ ವಿಜ್ಞಾನ ವಿಭಾಗದಲ್ಲಿ ತತ್ವಶಾಸ್ತ್ರವನ್ನು ಒಂದು ಐಚ್ಚಿಕ ವಿಷಯವಾಗಿ ಕಾಂಬಿನೇಶನ್ ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಅಂಬಿಕಾ ಸಂಸ್ಥೆ ಕಳೆದ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತಂದಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೂ ಈ ಅವಕಾಶ ವಿದ್ಯಾರ್ಥಿಗಳಿಗಿದೆ ಅನ್ನುವುದು ಉಲ್ಲೇಖಾರ್ಹ. ಪ್ರಸ್ತುತ ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಯೋಜನೆ, ಸುಲಭವಾಗಿ ಶೈಕ್ಷಣಿಕ ಬದುಕನ್ನು ಮುಂದುವರೆಸುವುದಕ್ಕೆ ಅನುವು ಮಾಡಿಕೊಡಲಿದೆ.

ಅತ್ಯುತ್ತಮ ನಡವಳಿಕೆ, ಸಮಾಜಮುಖಿ ಚಿಂತನೆ, ದೇಶಪ್ರೇಮ ಸಹಿತವಾದ ವಿದ್ಯಾರ್ಥಿ ಗಡಣವನ್ನು ರೂಪಿಸುವುದಕ್ಕೆ ಅಂಬಿಕಾ ವಿದ್ಯಾಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಪರೀಕ್ಷಾ ಫಲಿತಾಂಶಗಳಲ್ಲಿ ಮತ್ತೆ ಮತ್ತೆ ದೃಢಪಡುತ್ತಿವೆ. ಅದರಲ್ಲೂ ಪದವಿಪೂರ್ವ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮೂಡಿಸಿರುವ ಅಂಬಿಕಾ ಸಂಸ್ಥೆ ಈ ಬಾರಿಯ ಪಿಯು ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸುವ ಮೂಲಕ ಹೆತ್ತವರ ಮತ್ತು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ತಾಣವಾಗಿ ಹೊರಹೊಮ್ಮಿದೆ. ಪರಿಣಾಮವಾಗಿ ಪ್ರಸ್ತುತ ವರ್ಷದ ಕೊರೋನಾ ಆತಂಕದ ಮಧ್ಯೆಯೂ ಅನೇಕ ಮಂದಿ ವಿದ್ಯಾರ್ಥಿಗಳು ದೂರದೂರುಗಳಿಂದಲೂ ಈ ವಿದ್ಯಾಸಂಸ್ಥೆಗೆ ಆಗಮಿಸಿ ತಮ್ಮ ಆಯ್ಕೆಯನ್ನು ಖಾತ್ರಿಪಡಿಸುತ್ತಿದ್ದಾರೆ.

ಸೀಮಿತ ಅವಕಾಶ: ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಹಾಗೂ ಅಂಬಿಕಾ ವಸತಿಯುಕ್ತ ಪದವಿಪೂರ್ವ ವಿದ್ಯಾಲಯದಲ್ಲಿ ಇನ್ನು ಕೆಲವೇ ಕೆಲವು ಸೀಟುಗಳು ಬಾಕಿ ಉಳಿದಿದ್ದು ತಕ್ಷಣ ಬಂದ ವಿದ್ಯಾರ್ಥಿಗಳಿಗೆ ಅವಕಾಶ ಲಭ್ಯವಾಗಲಿದೆ. ಹೆತ್ತವರು ಹಾಗೂ ವಿದ್ಯಾರ್ಥಿಗಳು ಈ ಸದವಕಾಶವನ್ನು ಬಳಸಿಕೊಳ್ಳಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.