ಕೊನೆಯ ಪತ್ನಿಯ ಪುತ್ರಿಗೆ ಲೈಂಗಿಕ ಕಿರುಕುಳ !! ಆರೋಪಿ ಬಹುಪತ್ನಿ ವಲ್ಲಭನ ಸೆರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತನ್ನ ಅಪ್ರಾಪ್ತೆ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಬಹುಪತ್ನಿವಲ್ಲಭನೋರ್ವನನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಪಾಟ್ರಕೋಡಿ ಸಮೀಪದ ನಿವಾಸಿಯಾಗಿರುವ ಆರೋಪಿ ತನ್ನ ಕೊನೆಯ ಹೆಂಡತಿಯ ಪುತ್ರಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದುದಾಗಿ ಆರೋಪ ವ್ಯಕ್ತವಾಗಿದೆ.ಆ.25ರಂದು ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ಪತಿಯನ್ನು ತಡೆದ ನನಗೆ ಹಲ್ಲೆ ನಡೆಸಿರುವುದಾಗಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.

ಆಕೆ ನೀಡಿದ ದೂರಿನಂತೆ ಮಹಿಳಾ ಠಾಣಾ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 354(ಎ), 324, 506ಮತ್ತು ಕಲಂ 8 ಪೋಕ್ಸೋ ಕಾಯ್ದೆ 2012 ಪ್ರಕರಣ ದಾಖಲಿಸಿಕೊಂಡಿದ್ದು ಆ.26ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.