ಸರ್ವೆ ಬಿಜೆಪಿ ಶಕ್ತಿಕೇಂದ್ರದಿಂದ ಎಸ್‌ಎಸ್‌ಎಲ್‌ಸಿ ಸಾಧಕಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
  • ಬಡತನ,ಜಾತಿ,ಧರ್ಮ ವಿದ್ಯೆಗೆ ಅಡ್ಡಿ ಬರುವುದಿಲ್ಲ: ಜಯರಾಮ ಪೂಜಾರಿ

ಪುತ್ತೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 573 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದ ಸರ್ವೆ ಕಲ್ಪಣೆ ಶಾಲೆಯ ವಿದ್ಯಾರ್ಥಿನಿ ಪ್ರತೀಕ್ಷಾರವರಿಗೆ ಅವರ ನೇರೋಳ್ತಡ್ಕ ಮನೆಯಲ್ಲಿ ಸರ್ವೆ ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು,ಸ್ಮರಣಿಕೆ,ಹೂ ಹಾರದೊಂದಿಗೆ ಸನ್ಮಾನ ನೆರವೇರಿಸಿದ ಬಿಜೆಪಿ ಪಾಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಮ ಪೂಜಾರಿ ಮಾತನಾಡಿ, ಬಡತನ ಎನ್ನುವುದು ವಿದ್ಯೆಗೆ ಅಡ್ಡಿ ಬರುವುದಿಲ್ಲ, ಜಾತಿ ಮತ ಧರ್ಮ ವಿದ್ಯೆ ಕಲಿಯುವ ಮಕ್ಕಳಿಗೆ ಮುಖ್ಯವಲ್ಲ, ಬಡತನದಲ್ಲೂ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಕೀತಿ ತಂದ ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿ ಶುಭ ಹಾರೈಸಿದರು.

ಮುಂಡೂರು ಗ್ರಾಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿಯವರು ಅಭಿನಂದನಾ ಮಾತುಗಳನ್ನಾಡಿ ಮುಂದಿನ ವಿದ್ಯಾಭ್ಯಾಸಕ್ಕೂ ನಮ್ಮಿಂದ ಸಾಧ್ಯವಾಗುವ ಸಹಾಯ ಮಾಡುವುದಾಗಿ ತಿಳಿಸಿ ಶುಭ ಹಾರೈಸಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯಯವರು ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಎಲ್ಲೆಡೆ ಆಗಬೇಕು ಎಂದು ಹೇಳಿ ಶುಭ ಹಾರೈಸಿದರು. ಸರ್ವೆ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಅಶೋಕ್ ರೈ ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಹೆತ್ತವರನ್ನು ಸನ್ಮಾನಿಸಲಾಯಿತು. ಬಿಜೆಪಿ ಎಸ್‌ಸಿ ಮೋರ್ಛಾದ ಕಾರ್ಯದರ್ಶಿ ಜನಾರ್ದನ ಸರ್ವೆ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗೌತಮ್ ರೈ, ಸುಂದರ ಬಲ್ಯಾಯ, ಬಾಲಕೃಷ್ಣ ನಾಯ್ಕ, ಜಯಪ್ರಕಾಶ್ ಬಾಲಯ, ವಿಜೇತ್, ಜಗದೀಶ್, ಕರೀಷ್ಮಾ, ಪ್ರತೀಕ್ಷಾಳ ತಂದೆ ಲಿಂಗಪ್ಪ, ತಾಯಿ ಕಮಲ, ಬೀತ್ರು, ಕುಂಞ, ವಾಸು, ಗ್ರಾಮ ಸಹಾಯಕ ಹರ್ಷಿತ್, ಲೀಲಾವತಿ, ಗಿರಿಜ,ಗಿರೀಶ್, ಅಕ್ಷಯ್, ಅಕ್ಷತ್, ಇಂದಿರಾ, ಯಮುನಾ, ಅವಿನಾಶ್, ರೇವತಿ, ಭವ್ಯ, ಸುಂದರ, ಹೇಮಾವತಿ, ಹರೀಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.