ಹೆಚ್ಚುತ್ತಿರುವ ಅನೈತಿಕ ಚಟುವಟಿಕೆಗಳ ತಾಣ – ಕ್ರಮ ಕೈಗೊಳ್ಳುವಂತೆ ವಿ.ಹಿಂ.ಪ ಬಜರಂಗದಳದಿಂದ ಪೊಲೀಸರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿರುವ ಕೆಲವೊಂದು ವಸತಿಗೃಹ ಹೊಟೇಲ್ ಹಾಗೂ ಸಾರ್ವಜನಿಕ ಸ್ಥಳಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಪುತ್ತೂರು ಪ್ರಖಂಡ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನಿಯೋಗ ಮನವಿ ಮಾಡಿದೆ.

ಪುತ್ತೂರು ನಗರದ ಆಯಕಟ್ಟಿನ ಪ್ರದೇಶಗಳಾದ ಮೊಟ್ಟೆತ್ತಡ್ಕ, ಕೂರ್ನಡ್ಕ, ಜಿಡೆಕಲ್ಲು, ಕೆಮ್ಮಾಯಿ, ಬನ್ನೂರು, ಬಿರುಮಲೆ ಬೆಟ್ಟ, ಸಿಟಿ ಗುಡ್ಡ, ಕಬಕ, ಸಾಲ್ಮರ, ಬಪ್ಪಳಿಗೆ, ಕೊಂಬೆಟ್ಟು ಸೇರಿದಂತೆ ವಿವಿದೆಡೆಗಳಲ್ಲಿ ಹಾಗೂ ನಗರದ ಕೆಲವೊಂದು ಪಿ.ಜಿ.ಗಳಲ್ಲಿ ವಸತಿ ಗೃಹಗಳಲ್ಲಿ ಅನೈತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.

ಈ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಪುತ್ತೂರು ವಿಶ್ವಹಿಂದೂ ಪರಿಷತ್ ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ಪುತ್ತೂರು ಪ್ರಖಂಡ ಬಜರಂಗದಳ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ, ಪುತ್ತೂರು ಪ್ರಖಂಡ ಸತ್ಸಂಗ ಪ್ರಮುಖ್ ರವಿಕುಮಾರ್ ಕೈತಡ್ಕ, ಬಜರಂಗದಳ ಪುತ್ತೂರು ನಗರ ಸಂಚಾಲಕ ಚೇತನ್ ಬೊಳುವಾರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.