ಗ್ರಾಮೀಣ ಪ್ರದೇಶದಲ್ಲಿ ಕ್ಷಿಪ್ರ ಅಭಿವೃದ್ಧಿ ಸಾಧಿಸಿದ ಹಿರಿಮೆ…!

Puttur_Advt_NewsUnder_1
Puttur_Advt_NewsUnder_1
  • ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಪಂಚವಾರ್ಷಿಕ ಸಂಭ್ರಮ-ಸ್ನೇಹಕೂಟ

ಪುತ್ತೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಕ್ಷಿಪ್ರ ಸಮಯಗಳಲ್ಲಿ ಅದ್ಭುತ ಅಭಿವೃದ್ಧಿ ಸಾಧಿಸಿರುವ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಐದು ವರ್ಷಗಳನ್ನು ಪೂರೈಸಿ ಆರನೇ ವರ್ಷಕ್ಕೆ ಹೆಜ್ಜೆಯಿಟ್ಟಿದ್ದು ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಸ್ನೇಹಕೂಟ ಕಾರ್ಯಕ್ರಮ ನಡೆಯಿತು.

ಗ್ರಾಮಾಂತರ ಪ್ರದೇಶದಲ್ಲಿ ಸೀಮಿತ ವಿದ್ಯಾರ್ಥಿಗಳನ್ನೊಳೊಗೊಂಡು ಕಾರ್ಯಾರಂಭಗೊಂಡಿದ್ದ ಸಂಸ್ಥೆಯಲ್ಲಿ ಇಂದು ನಾನಾ ಭಾಗದ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯವನ್ನು ನೀಡುತ್ತಿರುವ ಈ ವಿದ್ಯಾಸಂಸ್ಥೆಯಲ್ಲಿ ೨೫೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ನೂರುಲ್ ಹುದಾ ಪಂಚವಾರ್ಷಿಕ ಸ್ನೇಹಕೂಟದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್‌ರವರು ಮಾತನಾಡಿ ಸಂಸ್ಥೆಯ ಬೆಳವಣಿಗೆಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪ್ರಾರ್ಥನೆಗೆ ನೇತೃತ್ವ ನೀಡಿ ಮಾತನಾಡಿದ ಅಸ್ಸಯ್ಯದ್ ಬುರ್ಹಾನ್ ಅಲಿ ತಂಗಳ್‌ರವರು ಕಳೆದ ಐದು ವರ್ಷಗಳಲ್ಲಿ ನಾವು ಸಾಧಿಸಿದ್ದನ್ನು ಮುಂದಿಟ್ಟು ಇನ್ನಷ್ಟು ದೂರ ಸಾಗಬೇಕಾಗಿದೆ ಮತ್ತು ಇನ್ನಿರುವ ವರ್ಷಗಳನ್ನು ಸಾಧನೆಯ ವರ್ಷಗಳನ್ನಾಗಿ ಪರಿವರ್ತಿಸಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ಕೆ ಯು ಖಲೀಲ್ ರಹ್ಮಾನ್ ಅರ್ಷದಿ ಕೋಲ್ಪೆ ಮಾತನಾಡಿ ಸಂಸ್ಥೆಯ ೫ ವರ್ಷಗಳಲ್ಲಿ ಕೇವಲ ಪಠ್ಯದ ಬೋಧನೆಯನ್ನು ಮಾತ್ರ ಗುರಿಯಾಗಿಸದೆ ಸಮಾಜದ ವಿವಿಧ ಮಜಲುಗಳಲ್ಲಿ ತನ್ನ ಹೆಜ್ಜೆ ಗುರುತು ಸಮರ್ಪಿಸಿದೆ. ಜ್ಞಾನ, ಕಲೆ, ಸಂಸ್ಕೃತಿ, ಸಮಾಜ, ಹೀಗೆ ಎಲ್ಲವನ್ನೂ ಒಟ್ಟುಗೂಡಿಸಿಕೊಂಡು ಕಳೆದ ಐದು ವರ್ಷಗಳಲ್ಲಿ ಸಾಗಿ ಬಂದ ಹಾದಿ ಅವಿಸ್ಮರಣೀಯ ಎಂದು ಹೇಳಿದರು.

ಉದ್ಘಾಟಿಸಿದ ಸಂಸ್ಥೆಯ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಮಾತನಾಡಿ ವಿದ್ಯಾರ್ಥಿಗಳ ಪೋಷಕರು ಎಷ್ಟು ಉಳ್ಳವರಾಗಿದ್ದರು ಕೂಡ ನಾವು ಉಚಿತವಾಗಿಯೇ ಶಿಕ್ಷಣವನ್ನು ನೀಡುತ್ತಿದ್ದೇವೆ, ಯಾಕೆಂದರೆ ನಮ್ಮ ಗುರಿ ಬಲಿಷ್ಠ ವಿದ್ಯಾವಂತ ಸಮಾಜ ಕಟ್ಟುವುದು ಹೊರತು ಒಬ್ಬ ತಂದೆಯ ಮಗನನ್ನು ವಿದ್ಯಾವಂತರಾಗಿಸುವುದು ಅಲ್ಲ ಅವರಿಂದ ನಮ್ಮ ಸಮಾಜಕ್ಕೆ ಲಾಭ ಪಡೆಯುವಂತೆ ಮಾಡುವುದಾಗಿದ್ದು ಇದಕ್ಕಾಗಿ ನಿಮ್ಮೆಲ್ಲರ ಸಹಾಯ ಬೇಡುತ್ತಿದ್ದೇವೆ ಎಂದರು.

 

ಮಾಡನ್ನೂರು ಜಮಾಅತ್ ಅಧ್ಯಕ್ಷ ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಸಂಸ್ಥೆಯ ಪ್ರ.ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ, ಉಪ್ಪಿನಂಗಡಿ ವಲಯ ಸಮಿತಿ ಅಧ್ಯಕ್ಷ ಯುನಿಕ್ ಅಬ್ದುರ್ರಹ್ಮಾನ್, ಕಾರ್ಯದರ್ಶಿ ಫಲುಲುದ್ದೀನ್, ಸುಳ್ಯ ವಲಯ ಸಮಿತಿ ಕಾರ್ಯದರ್ಶಿ ಮಹಮ್ಮದ್ ಸಂಪಾಜೆ ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಭ ಸಂದೇಶ ಕಳುಹಿಸಿದರು. ಕತ್ತರ್ ರಾಷ್ಟ್ರೀಯ ಕಮಿಟಿ ಅಧ್ಯಕ್ಷ ಅಶ್ರಫ್ ಹಾಜಿ ಪಳ್ಳತ್ತೂರು, ಸಂಸ್ಥೆಯ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿಗಳಾದ ಎಂ ಡಿ ಹಸೈನಾರ್, ಸಿ.ಎಚ್ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಉಪಾಧ್ಯಕ್ಷರಾದ ಮಂಗಳ ಅಬೂಬಕ್ಕರ್ ಹಾಜಿ, ಅಲೀ ಮುಸ್ಲಿಯಾರ್ ಬನ್ನೂರ್, ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ಲಾ ನಈಮಿ, ನಾಸಿರ್ ಬೆಳ್ಳಾರೆ, ಅಹ್ಮದ್ ಹಾಜಿ ಸುಳ್ಯ, ಹಮೀದ್ ಹಾಜಿ ಸುಳ್ಯ, ಅಝೀಝ್ ಕರಾವಳಿ, ಸಫಿಯುಳ್ಳಾ ಕಡಬ, ನಾಸಿರ್ ಕಡಬ, ಆದಂ ಅಲೆಕ್ಕಾಡಿ, ಖಾಲಿದ್ ಮಾಡನ್ನೂರ್, ಹಸೈನಾರ್ ಸಿ ಕೆ, ಅಬ್ದುಲ್ ರಹ್ಮಾನ್, ಅಬ್ದುಲ್ಲಾ ಬಿಕೆ, ಶಾಪಿ ಹಿರಾ, ಅಮೀರ್ ಜಾನ್ ಹುದವಿ, ತ್ವಾಹಾ ಹದವಿ, ಆಶಿಕ್ ಅಜ್ಜಿಕಲ್ಲು, ಖಲಂದರ್ ಹುದವಿ, ನೌಫಲ್ ಹುದವಿ ಉಪಸ್ಥಿತರಿದ್ದರು. ನೌಫಲ್ ಹುದವಿ ಬಿ.ಸಿ ರೋಡ್ ವಂದಿಸಿದರು.

ಶೀಘ್ರದಲ್ಲೇ ಇನ್ನಷ್ಟು ಯೋಜನೆಗಳು…
ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಗೆ ಪ್ರತೀ ತಿಂಗಳು ರೂ ಏಳು ಲಕ್ಷ ಖರ್ಚು ತಗಲುತ್ತಿದ್ದು ಸಂಸ್ಥೆಗೆ ದಾನಿಗಳು ನೆರವು ನೀಡುತ್ತಿದ್ದಾರೆ. ಸಂಸ್ಥೆಯ ಬೆಳವಣಿಗೆಗಾಗಿ ಭೋಜನ ಕೊಠಡಿ, ಆಟದ ಮೈದಾನ, ಸ್ಮಾರ್ಟ್ ರೂಂ, ಕಂಪ್ಯೂಟರ್ ಲ್ಯಾಬ್, ನೂತನವಾಗಿ ತೆರೆಯಲಿದ್ದು ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂಬ ಅಭಿಪ್ರಾಯ ಸ್ನೇಹಕೂಟದಲ್ಲಿ ವ್ಯಕ್ತವಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.