ಕೆಯ್ಯೂರು: ಹಸು, ಕರು ಸಾಗಾಟದ ವಾಹನ ತಡೆದು ಹಲ್ಲೆ | ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹೈನುಗಾರಿಕೆಯ ಉದ್ದೇಶಕ್ಕೆ ಹಸು ಮತ್ತು ಕರುವನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ತಂಡವೊಂದು ವಾಹನದಲ್ಲಿದ್ದ ಇಬ್ಬರಿಗೆ ಹಲ್ಲೆ ನಡೆಸಿದ ಘಟನೆ ಆ.27ರಂದು ಕೆಯ್ಯೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕೆಯ್ಯೂರು ಗ್ರಾಮದ ಕಂಚಿನಪದವು ಮಹಮ್ಮದ್ ಸಿರಾಜ್ ಮತ್ತು ಪಾತುಂಜ ನಿವಾಸಿ ಶಿಹಾಬುದ್ದೀನ್ ಹಲ್ಲೆಗೊಳಗಾದವರು. ಅವರು ಬೆಳ್ಳಾರೆಯ ನೆಲ್ಯ ಮಜಲು ಮೊಹಮ್ಮದ್ ಎಂಬವರ ಮನೆಯಿಂದ ಹಾಲು ಕರೆಯುವ ಒಂದು ಹಸು ಮತ್ತು ಅದರ ಕರುವನ್ನು ಬೆಳ್ಳಾರೆ ಸರಕಾರಿ ಪಶು ವೈದ್ಯಾಧಿಕಾರಿಯವರಿಂದ ಪ್ರಮಾಣ ಪತ್ರವನ್ನು ಪಡೆದುಕೊಂಡು ಪಿಕಾಪ್ ಜೀಪಿನಲ್ಲಿ ಕೆಯ್ಯೂರು ಕಡೆಗೆ ತರುವಾಗ ಕೆಯ್ಯೂರು ಗ್ರಾ.ಪಂ ಕಚೇರಿಯ ಬಳಿ ಓಮನಿ ಕಾರಿನಲ್ಲಿ ಬಂದ ಆರೋಪಿಗಳಾದ ದಿನೇಶ್, ಅಜಿತ್, ಭವಿನ್ ಅವರು ದನ ಸಾಗಾಟದ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಗಾಯಾಳು ಮಹಮ್ಮದ್ ಸಿರಾಜ್ ಮತ್ತು ಶಿಹಾಬುದ್ದೀನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಸಂಪ್ಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.