ಉಪ್ಪಿನಂಗಡಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯುಷ್ಮಾನ್ ಕಾರ್ಡು ನೋಂದಣಿ, ವಿತರಣಾ ಕಾರ್‍ಯಕ್ರಮ

  • ಅನಾರೋಗ್ಯದ ಕಾರಣಕ್ಕೆ ಯಾವೊಬ್ಬ ವ್ಯಕ್ತಿಯೂ ಅತಂತ್ರವಾಗಬಾರದು-ಮಠಂದೂರು

ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯವರು ಯಾವೊಬ್ಬ ಭಾರತೀಯ ವ್ಯಕ್ತಿ ಅನಾರೋಗ್ಯದ ಕಾರಣದಿಂದ ಅತಂತ್ರನಾಗಬಾರದು ಎಂಬ ಪರಿಕಲ್ಪನೆಯೊಂದಿಗೆ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಾಸಕ ಸಂಜೀವ ಮಟಂದೂರು ತಿಳಿಸಿದರು.

ಅವರು ಆ. ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಬಿ.ಜೆ.ಪಿ. ಯುವಮೋರ್ಚಾ ಪುತ್ತೂರು ಗ್ರಾಮಾಂತರ ವಿಭಾಗದ ವತಿಯಿಂದ ಆಯೋಜಿಸಲಾದ ಉಚಿತ ಆಯುಷ್ಮಾನ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಹಲವಾರು ಜನಪರ ಕಾರ್ಯಕ್ರಮಗಳೊಂದಿಗೆ ವಿಕಾಸದತ್ತ ಶ್ರಮಿಸುತ್ತಿದೆ. ಸರ್ಕಾರಿ ಸವಲತ್ತುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಂತಾಗಲು ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ಕಾರ್‍ಯದರ್ಶಿ ಸುರೇಶ್ ಅತ್ರಮಜಲು, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ನಿತೇಶ್ ಕುಮಾರ್ ಶಾಂತಿವನ, ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ, ತಾಲ್ಲೂಕು ಅಧ್ಯಕ್ಷ ನವೀನ್ ಪಡ್ನೂರು, ಮಹಿಳಾ ಮೋರ್ಚಾದ ಉಷಾಚಂದ್ರ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ. ರೈತ ಮೋರ್ಚಾ ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಸಹಕಾರಿ ಸಂಘದ ನಿರ್ದೇಶಕರಾದ ಯಶವಂತ ಜಿ., ಶ್ರೀಮತಿ ಸುಜಾತ ರೈ, ಬಿಜೆಪಿ ಮುಂದಾಳುಗಳಾದ ಜಯಂತ ಪೊರೋಳಿ, ರಮೇಶ್ ಭಂಡಾರಿ ಮೊದಲಾದ ಪ್ರಮುಖರು ಭಾಗವಹಿಸಿದ್ದರು.  ಬಿಜೆಪಿ ಯುವ ಮೋರ್ಚಾ ಕಾರ್‍ಯದರ್ಶಿ ರತನ್ ರೈ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.