Breaking News

ಸ್ನೇಹ ಸೂಪರ್ ಮಾರ್ಕೆಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ನೆಹರೂ ನಗರದ ಫೇರ್‌ಡೀಲ್ ಕಾಂಪ್ಲೆಕ್ಸ್‌ನಲ್ಲಿ ಸ್ನೇಹಾ ಸೂಪರ್ ಮಾರ್ಕೆಟ್ ಆ. 28 ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಪುತ್ತೂರಿನ ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇವರು ಇದೀಗ ತಮ್ಮ ಊರಿನಲ್ಲೇ ಉದ್ಯೋಗ ಮಾಡುವ ಕನಸು ಕಂಡು ಇಲ್ಲಿ ಸೂಪರ್ ಮಾರ್ಕೆಟನ್ನು ಇಂದು ಪ್ರಾರಂಭಿಸಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ನಿಮ್ಮ ವ್ಯವಹಾರವು ಇನ್ನೂ ಎತ್ತರಕ್ಕೇರಲಿ ಎಂದು ಶುಭಹಾರೈಸಿದರು.

ಸಚಿನ್ ಟ್ರೇಡಿಂಗ್ ಕಂಪೆನಿ ದರ್ಬೆ ಪುತ್ತೂರು ಇದರ ಮ್ಹಾಲಕರಾದ ಸಚಿನ್ ನಾಯಕ್ ರವರು ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಮ್ಹಾಲಕರ ತಂದೆ ಜನಾರ್ಧನ ಭಂಡಾರಿ, ತಾಯಿ ಯಶೋಧಾ, ಜಗನ್ನಾಥ, ಜಗದೀಶ್, ಹೋಟೆಲ್ ಪಂಚಮಿಯ ಮಾಲಕರಾದ ಸಂತೋಷ್ ನಾಯಕ್, ಪುರಂದರ, ಹರೀಶ್ ಭಂಡಾರಿ, ರಕ್ಷಿತಾ, ಸೌಮ್ಯ, ಪ್ರಜ್ವಲ್, ವಿಠಲ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಆಶಿತ್ ಬಿ ರವರು ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ದಿನಸಿ, ಸೌಂದರ್ಯವರ್ಧಕ ಸಾಮಾಗ್ರಿಗಳು ತಾಜಾ ತರಕಾರಿ, ಕೋಲ್ಡ್ ಡ್ರಿಂಕ್ಸ್, ಹಾಲು, ಮೊಸರು ಇತ್ಯಾದಿ ದಿನ ಬಳಕೆಯ ಎಲ್ಲಾ ಸಾಮಾಗ್ರಿಗಳು ನಮ್ಮಲ್ಲಿ ಲಭ್ಯ. ಅಲ್ಲದೆ ಮುಂದಿನ ದಿನದಲ್ಲಿ ಡೋರ್ ಡೆಲಿವರಿ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.


About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.