ಹನುಮಗಿರಿ – ಮೈಂದನಡ್ಕ- ನಿಡ್ಪಳ್ಳಿ ಸಂಪರ್ಕ ರಸ್ತೆಯ ದುಸ್ಥಿತಿ

Puttur_Advt_NewsUnder_1
Puttur_Advt_NewsUnder_1
  • ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ನರಕಯಾತನೆ ಅನುಭವಿಸುವ ಗ್ರಾಮಸ್ಥರು

ಪುತ್ತೂರು: ಪಡುವನ್ನೂರು- ಬಡಗನ್ನೂರು ಗ್ರಾಮವನ್ನು ದಾಟಿ ನಿಡ್ಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದೃಶ್ಯವಿದೆ. ಹನುಮಗಿರಿಯಿಂದ ಹೊರಡುವ ಈ ರಸ್ತೆ ಮೈದನಡ್ಕ ಮೂಲಕ ನಿಡ್ಪಳ್ಳಿಯನ್ನು ಸೇರುತ್ತಿದೆ. ಈ ಭಾಗದ ಜನರ ಪ್ರಮುಖ ಸಂಪರ್ಕ ಸೇತು ಕೂಡಾ ಆಗಿದೆ. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕಾರಣಕ್ಕೆ ಕಳೆದ ಹಲವು ವರ್ಷಗಳಿಂದ ಮನಳೆಗಾಲದಲ್ಲಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಸುಮಾರು ೮ ಕಿ ಮೀ ವ್ಯಾಪ್ತಿಯನ್ನು ಹೊಂದಿರುವ ಜಿಪಂ ಗೆ ಸೇರಿದ ಈ ರಸ್ತೆ ಕೇವಲ ಎರಡು ಕಿಮೀ ಮಾತ್ರ ಡಾಮರೀಕರಣವಾಗಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಿಂದ ಸಂಪರ್ಕ ಹೊಂದುವ ಈ ರಸ್ತೆಯು ಹನುಮಗಿರಿಯ ಬಳಿಯಿಂದ ತೆರಳುತ್ತದೆ. ಅಲ್ಲಿಂದ ಮುಂದಕ್ಕೆ ಎರಡು ಕಿ ಮೀ ಮಾತ್ರ ಡಾಮರೀಕರಣವಾಗಿದ್ದು ಉಳಿದಂತೆ ಮಣ್ಣಿನ ರಸ್ತೆಯೇ ಇದೆ.

ಮನವಿ ಮಾಡಿದ್ದು ವ್ಯರ್ಥವಾಗಿದೆ
ರಸ್ತೆಯನ್ನು ಪೂರ್ತಿಯಾಗಿ ಡಾಮರೀಕರಣ ಮಾಡಿ ಎಂದು ಈ ಭಾಗದ ಜನರು ಪ್ರತೀ ಬಾರಿಯೂ ಗ್ರಾಮಸ್ಥರು ಸಂಬಂಧಿಸಿದ ಜನಪ್ರತಿನಿಧಿಗಳ ಬಳಿ ಮನವಿಯನ್ನು ಮಾಡುತ್ತಿದ್ದಾರೆ ಆದರೆ ಮನವಿಯನ್ನು ಇದುವರೆಗೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.

೨೦೦ ಮನೆಗಳ ಸಂಪರ್ಕ ಸೇತು
ಒಟ್ಟು ಎಂಟು ಕಿ ಮೀ ವ್ಯಾಪ್ತಿಯಲ್ಲಿ ಸುಮಾರು ೨೦೦ ಮನೆಗಳಿದೆ. ಹನುಮಗಿರಿಯಿಂದ ನೇರವಾಗಿ ಪಡುವನ್ನೂರು- ಬಡಗನ್ನೂರು- ಮೈಂದನಡ್ಕ ಮಾರ್ಗವಾಗಿ ನಿಡ್ಪಳ್ಳಿ ದೇವಸ್ಥಾನದ ಬಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಈಭಾಗದ ಜನರ ಸಂಪರ್ಕ ಸೇತು ಕೂಡಾ ಆಗಿದೆ. ಪ್ರತೀ ಮಳೆಗಾಲದಲ್ಲಿ ಇಲ್ಲಿನ ರಸ್ತೆ ಕೆಸರುಮಯವಾಗುತ್ತದೆ. ಮೊಣಕಾಲು ಮಟ್ಟಕ್ಕೆ ಕೆಸರುತುಂಬಿಕೊಂಡಿರುವ ರಸ್ತೆಯಲ್ಲಿ ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ವಹನ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ. ದ್ವಿಚಕ್ರ ವಾಹನಗಳು ಕೆಸರಿಗೆ ಅಲ್ಲಲ್ಲಿ ಹೂತು ಹೋಗುವ ಸಂಭವವೂ ನಡೆಯುವುದುಂಟು. ರಸ್ತೆಯನ್ನು ಪೂರ್ತಿಯಾಗಿ ಡಾಮರೀಕರಣ ಮಾಡುವ ಮೂಲಕ ಜನಪ್ರತಿನಿಧಿಗಳು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಹನುಮಗಿರಿಯಿಂದ ಬಡಗನ್ನೂರು ಗ್ರಾಮದ ಮೂಲಕ ನಿಡ್ಪಳ್ಳಿ ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಆಧ್ಯತೆ ಮೇರೆಗೆ ಡಾಮರೀಕರಣ ಮಾಡಲಾಗುವುದು. ಪ್ರಧಾನಮಂತ್ರಿ ಸಡಕ್‌ಯೋಜನೆಯಲ್ಲಿ ಅನುದಾನ ಬಂದಿದ್ದು ಆ ಅನುದಾನದಲ್ಲಿ ಹಲವು ಗ್ರಾಮೀಣ ರಸ್ತೆಗಳ ಅಭಿವೃದ್ದಿ ಕಾರ್ಯ ಮಾಡಲಿದ್ದೇವೆ. ಹಂತ ಹಂತವಾಗಿ ಅನೇಕ ವರ್ಷಗಳಿಂದ ಅಭಿವೃದ್ದಿಯಾಗದೇ ಉಳಿದಿರುವ ರಸ್ತೆಯನ್ನು ಡಾಮರೀಕರಣ ಮಾಡಲಾಗುವುದು – ಎಂ ಸಂಜೀವ ಮಠಂದೂರು, ಶಾಸಕರು ಪುತ್ತೂರು

ಜಿಪಂ ಸ್ವಲ್ಪ ಕಾಮಗಾರಿ ನಡೆದಿದೆ
ಜಿಪಂ ನಿಂದ ಬಂದ ಅನುದಾನದಲ್ಲಿ ಈಶ್ವರಮಂಗಲದ ಹನುಮಗಿರಿಯಿಂದ ಸುಮಾರು ಎರಡು ಕಿ ಮೀ ವ್ಯಾಪ್ತಿವರೆಗೆ ಡಾಮರೀಕರಣವಾಗಿದೆ. ಉಳಿದ ರಸ್ತೆ ಹಾಗೆಯೇ ಇದೆ. ಮುಂದಿನ ದಿನಗಳಲ್ಲಿ ಅನುದಾನ ಸಿಕ್ಕಿದರೆ ಈ ರಸ್ತೆಯನ್ನು ಅಭಿವೃದ್ದಿ ಮಾಡುತ್ತೇವೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟು ಸೇರಿ ರಸ್ತೆಯನ್ನು ಅಭಿವೃದ್ದಿ ಮಾಡಬೇಕಿದೆ – ಅನಿತಾ ಹೇಮನಾಥ ಶೆಟ್ಟಿ, ಜಿಪಂ ಸದಸ್ಯರು

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಶಾಸಕರಿಗೆ ನಾವು ಮನವಿಯನ್ನು ಮಾಡಿದ್ದೇವೆ, ಅನುದಾನ ಇಡುವುದಾಗಿ ಹೇಳಿದ್ದಾರೆ. ರಸ್ತೆ ಅಭಿವೃದ್ದಿಯಾಗುತ್ತದೆ ಎಂಬ ಭರವಸೆಯೂ ನಮ್ಮಲ್ಲಿದೆ. ಮುಂದಿನ ಮಳೆಗಾಲಕ್ಕೆ ಮುನ್ನ ಈ ರಸ್ತೆಯನ್ನು ಡಾಮರೀಕರಣ ಮಾಡುವ ಮೂಲಕ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಮಾಡಬೇಕಿದೆ – ಮಹಮ್ಮದ್ ಬಡಗನ್ನೂರು, ಸ್ಥಳೀಯರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.