ಮಡಿಕೇರಿ ಡಿಸಿಸಿ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಸಾಲ್ಮರದ ಎನ್.ಕೆ ರಮೇಶ್ ಆಚಾರ್ಯ ಹೃದಯಾಘಾತದಿಂದ ನಿಧನ

ಪುತ್ತೂರು:ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಡಿಕೇರಿ ಶಾಖಾ ನಿವೃತ್ತ ವ್ಯವಸ್ಥಾಪಕ ಸಾಲ್ಮರ ನಿವಾಸಿ ಎನ್.ಕೆ ರಮೇಶ್ ಆಚಾರ್ಯ(೭೦.ವ) ಹೃದಯಾಘಾತದಿಂದ ಆ.೨೫ರಂದು ಸ್ವಗೃಹದಲ್ಲಿ ನಿಧನರಾದರು.


ಕುಂಬಳೆ ಉಳುವಾರ್ ದಿ. ಕೇಶವ ಆಚಾರ್ಯರವರ ಪುತ್ರನಾಗಿರುವ ರಮೇಶ್ ಆಚಾರ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಡಿಕೇರಿ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿಯ ಬಳಿಕ ಸಾಲ್ಮರದಲ್ಲಿ ವಾಸ್ತವ್ಯವಿದ್ದರು.

ಮೃತರು ಪತ್ನಿ ರಜನಿ ಆಚಾರ್ಯ, ಪುತ್ರ ರಕ್ಷಿತ್ ಆಚಾರ್ಯ, ಪುತ್ರಿಯರಾದ ವಿದ್ಯಾಲಕ್ಷ್ಮೀ, ವಿನುತಾ, ಸಹೋದರ ಶ್ರೀಧರ ಆಚಾರ್ಯ, ಸಹೋದರಿಯರು, ಅಳಿಯಂದಿರು, ಬಾವಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.